Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ: ಭಾರತ ತಂಡದಲ್ಲಿ ಉಮ್ರಾನ್ ಮಲಿಕ್

06:22 PM May 22, 2022 | Team Udayavani |

ಮುಂಬಯಿ: ಬಿಸಿಸಿಐ ಭಾನುವಾರ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆ ಎಲ್ ರಾಹುಲ್ ಅವರು ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

Advertisement

ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಪ್ರದರ್ಶನ ನೀಡಿದ ನಂತರ ದಿನೇಶ್ ಕಾರ್ತಿಕ್ ಟಿ 20 ತಂಡಕ್ಕೆ ಮರಳಿದ್ದಾರೆ. ಐಪಿಎಲ್ 15 ರ ಲೀಗ್ ಹಂತದಲ್ಲಿ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಕುಲದೀಪ್ ಯಾದವ್ ಸ್ವಲ್ಪ ಸಮಯದ ನಂತರ ತಂಡಕ್ಕೆ ಮರಳಿದ್ದಾರೆ.

ಈ ಐಪಿಎಲ್ ನಲ್ಲಿ ಉಮ್ರಾನ್ ಮಲಿಕ್ 13 ಪಂದ್ಯಗಳಿಂದ 21 ವಿಕೆಟ್‌ಗಳನ್ನು ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ತಂಡ ಇಂತಿದೆ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ( ಉಪನಾಯಕ ,ವಿ.ಕೀ) ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ವೈ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ಪಂದ್ಯದ ವೇಳಾಪಟ್ಟಿ

Advertisement

ಜೂನ್ 09 ರಂದು ದೆಹಲಿಯಲ್ಲಿ ಸರಣಿಯ ಮೊದಲ ಟಿ 20 ಪಂದ್ಯ ನಡೆಯಲಿದೆ. 12 ರಂದು ಕಟಕ್ ನಲ್ಲಿ 2 ನೇ ಪಂದ್ಯ, 14 ವಿಶಾಖಪಟ್ಟಣಂ ನಲ್ಲಿ ಮೂರನೇ ಪಂದ್ಯ, 17 ರಂದು ರಾಜಕೋಟ್ ನಲ್ಲಿ ನಾಲ್ಕನೇ ಪಂದ್ಯ ಮತ್ತು 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next