Advertisement

ವನಿತಾ ತಂಡದ ಸದಸ್ಯರಿಗೆ ತಲಾ 50 ಲಕ್ಷ ರೂ.: ಬಿಸಿಸಿಐ ಪ್ರಕಟ

08:00 AM Jul 23, 2017 | Team Udayavani |

ಮುಂಬಯಿ: ಇಂಗ್ಲೆಂಡಿನಲ್ಲಿ ಸಾಗುತ್ತಿರುವ ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಭಾರತೀಯ ತಂಡದ ಸದಸ್ಯರಿಗೆ ತಲಾ 50 ಲಕ್ಷ ರೂ.ಗಳ ನಗದು ಪುರಸ್ಕಾರವನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ತಂಡದ ಬೆಂಬಲ ಸಿಬಂದಿಗಳು ತಲಾ 25 ಲಕ್ಷ ರೂ. ಪಡೆಯಲಿದ್ದಾರೆ.

Advertisement

ಆರು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನು ಕೆಡಹಿ ಎರಡನೇ ಬಾರಿಗೆ ವಿಶ್ವಕಪ್‌ ಫೈನಲಿಗೇರಿದ್ದ ಭಾರತ ರವಿವಾರ ನಡೆಯುವ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ಅತ್ಯಮೋಘ ನಿರ್ವಹಣೆ ನೀಡಿದ ಭಾರತೀಯ ವನಿತ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಆಡಳಿತಗಾರರ ಸಮಿತಿ (ಸಿಒಎ) ಚೇರ್ಮನ್‌ ವಿನೋದ್‌ ರೈ ಹೇಳಿದ್ದಾರೆ. ತಂಡದ ಸದಸ್ಯರು ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಮತ್ತು ಮಿಥಾಲಿ ರಾಜ್‌ ನಾಯಕತ್ವದಡಿ ವನಿತೆಯರು ಪ್ರತಿಯೊಂದು ಪಂದ್ಯದಲ್ಲಿಯೂ ನಿರೀಕ್ಷೆಗಿಂತಲೂ ಹೆಚ್ಚಿನ ಆಟವಾಡಿ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next