ಮುಂಬೈ: 2021-22ನೇ ಸಾಲಿನ ದೇಶಿ ಕ್ರಿಕೆಟ್ ನ ಪಟ್ಟಿಯನ್ನು ಬಿಸಿಸಿಐ ಇಂದು ಘೋಷಣೆ ಮಾಡಿದೆ. ಈ ಬಾರಿಯ ದೇಶಿ ಕ್ರಿಕೆಟ್ ಋತು ಸಪ್ಟೆಂಬರ್ ನಿಂದ ಆರಂಭವಾಗಿದೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆ ನೀಡಿದ್ದು, ವನಿತೆಯರ ಏಕದಿನ ಕೂಟ ಸಪ್ಟೆಂಬರ್ 21ರಿಂದ ಆರಂಭವಾಗಲಿದೆ. ಇದಾದ ಬಳಿಕ ವನಿತೆಯರ ಏಕದಿನ ಕೂಟ ಚಾಲೆಂಜರ್ಸ್ ಟ್ರೋಫಿ ನಡೆಯಲಿದೆ. ಇದು ಅ.27ರಿಂದ ಆರಂಭವಾಗಲಿದೆ.
ಪುರುಷರ ಕೂಟ ಅಕ್ಟೋಬರ್ 20ರಿಂದ ಆರಂಭವಾಗಲಿದ್ದು, ಅಂದು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭವಾಗಲಿದೆ. ಇದರ ಫೈನಲ್ ಪಂದ್ಯ ನವೆಂಬರ್ 122ರಿಂದ ಆರಂಭವಾಗಲಿದೆ.
ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಕಮ್ ಬ್ಯಾಕ್ ಮಾಡುವತ್ತ ಮಿಥಾಲಿ ತಂಡದ ಚಿತ್ತ
ಕಳೆದ ಬಾರಿ ಕೋವಿಡ್ ಕಾರಣದಿಂದ ರದ್ದಾಗಿದ್ದ ರಣಜಿ ಟ್ರೋಫಿ ಕೂಟವು ಈ ಬಾರಿ ನವೆಂಬರ್ 16ರಿಂದ 2022 ಫೆಬ್ರವರಿ 19ರವರೆಗೆ ಮೂರು ತಿಂಗಳ ಅಂತರದಲ್ಲಿ ನಡೆಯಲಿದೆ.
ವಿಜಯ್ ಹಜಾರೆ ಕೂಟವು ಮುಂದಿನ ವರ್ಷದ ಫೆ.23ರಿಂದ ಮಾರ್ಚ್ 26ರವರೆಗೆ ನಡೆಯಲಿದೆ. ಈ ದೇಶಿ ಕ್ರಿಕೆಟ್ ಋತುವಿನಲ್ಲಿ ಒಟ್ಟು 2127 ಪಂದ್ಯಗಳು ನಡೆಯಲಿದೆ.