Advertisement

ಇಂದು ಬಿಸಿಸಿಐ 90ನೇ ವಾರ್ಷಿಕ ಮಹಾಸಭೆ

11:20 PM Dec 03, 2021 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ 90ನೇ ವಾರ್ಷಿಕ ಮಹಾಸಭೆ ಶನಿವಾರ ನಡೆ ಯಲಿದೆ. ಇದೇ ತಿಂಗಳು ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡುವ ಕುರಿತು ಈ ಸಭೆಯಲ್ಲಿ ಮಹತ್ವದ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆ ಇದೆ.

Advertisement

ಒಮಿಕ್ರಾನ್‌ ಪ್ರಕರಣ ದ. ಆಫ್ರಿಕಾ ದಲ್ಲಿ ಹೆಚ್ಚುತ್ತಿವೆ. ಆದ್ದರಿಂದ ಡಿ. 17ರಿಂದ ಆಯೋಜಿಸಿರುವ ಭಾರತ- ದ.ಆಫ್ರಿಕಾ ಕ್ರಿಕೆಟ್‌ ಸರಣಿಯನ್ನು ಮುಂದೂಡುವ ಕುರಿತು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಜತೆಗೆ ಒಟ್ಟು 24 ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

2022ರ ಐಪಿಎಲ್‌ ಟೂರ್ನಿಗಾಗಿ ಮೆಗಾ ಹರಾಜು ಪ್ರಕ್ರಿಯೆ ನಡೆ ಯಲಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ನೂತನವಾಗಿ ಸೇರ್ಪಡೆಯಾಗಲಿರುವ ಲಖನೌ ಮತ್ತು ಅಹ್ಮದಾಬಾದ್‌ ಫ್ರಾಂಚೈಸಿಗಳಿಗೆ ಅನುಮೋದನೆ ನೀಡುವ ಹಾಗೂ ಅಹ್ಮದಾಬಾದ್‌ ಫ್ರಾಂಚೈಸಿ ಖರೀದಿ ಮಾಡಿರುವ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯ ವಿವಾದದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

Advertisement

2022ರ ಟಿ20 ಮತ್ತು 2023ರ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಲಿರುವ ಭಾರತ ತಂಡದ ಸಿದ್ಧತೆಗಳ ಬಗ್ಗೆಯೂ ಮಾತುಕತೆ ನಡೆ ಯಲಿದೆ.

ಅಲ್ಲದೇ ನೂತನ ಮುಖ್ಯ ಕೋಚ್‌ ದ್ರಾವಿಡ್‌ ನೇಮಕ ಮತ್ತು ಕಿವೀಸ್‌ ಎದುರಿನ ಸರಣಿಯಲ್ಲಿ ಭಾರತದ ಪ್ರದರ್ಶನ ಕುರಿತು ಪರಾಮರ್ಶಿ ಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next