ಬಂಟ್ವಾಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜ. 14ರಂದು ನೆಲ್ಯಾಡಿಯಲ್ಲಿ ಆರಂಭವಾದ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ- ಜನರ ಜೀವ ಉಳಿಸಿ ಪಾದಯಾತ್ರೆ ಜ. 16ರಂದು ಅಪರಾಹ್ನ್ನ 2 ಗಂಟೆ ಸುಮಾರಿಗೆ ಬಿ.ಸಿ. ರೋಡ್ ತಲುಪುವ ಮೂಲಕ ಸಮಾಪನಗೊಂಡಿತು.
ಬುಧವಾರ ಬೆಳಗ್ಗೆ ಮಾಣಿ ಜಂಕ್ಷನ್‌ನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ಪಾದಯಾತ್ರೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿತು.
ರೈ ಅವರ ನೇತೃತ್ವದಲ್ಲಿ ಪಾದೆಯಾತ್ರೆ ಬಿ.ಸಿ. ರೋಡ್‌ಗೆ ತಲುಪುವ ಮೂಲಕ ಒಟ್ಟು 48 ಕಿ.ಮೀ. ಕ್ರಮಿಸಿತು. ರೈ ಅವರು ಅಭಿಮಾನಿಗಳಿಗೆ ಕೈಬೀಸಿ, ಹಸ್ತಲಾಘವ ನೀಡಿ, ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಕಾರ್ಯಕರ್ತರಿಗೆ ಸೂಚನೆ ನೀಡುತ್ತಾ ನಡೆದು ಬಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಮುಂಜುಳಾ ಮಾಧವ ಮಾವೆ, ಎಂ. ಎಸ್. ಮಹ ಮ್ಮದ್, ಸಾಹುಲ್ ಹಮೀದ್, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬ್ಲಾಕ್ ಮಹಿಳಾ ಸಮಿತಿ ಅಧ್ಯಕ್ಷೆಯರಾದ ಮಲ್ಲಿಕಾ ವಿ. ಶೆಟ್ಟಿ, ಜಯಂತಿ ವಿ. ಪೂಜಾರಿ ಸಹಿತ ತಾ.ಪಂ. ಸದಸ್ಯರು, ಪ್ರಮುಖ ನೇತಾರರಾದ ಮಾಯಿಲಪ್ಪ ಸಾಲ್ಯಾನ್, ಅಬ್ಟಾಸ್ ಅಲಿ, ಕೆ. ಪದ್ಮನಾಭ ರೈ, ಬಿ.ಎಚ್. ಖಾದರ್, ಯು.ಕೆ. ಮೋನು, ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಚಿತ್ತರಂಜನ್ ಶೆಟ್ಟಿ, ಸದಾಶಿವ ಬಂಗೇರ, ಲೋಲಾಕ್ಷ ಶೆಟ್ಟಿ, ವಿವಿಧ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಪುರಸಭಾ ಕಾಂಗ್ರೆಸ್ ಸದಸ್ಯರು ನಡೆದು ಬಂದರು.
ಚಂಡೆ ವಾದನ
ಪಾದಯಾತ್ರೆಯಲ್ಲಿ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಗೊಂಬೆಗಳ ಪ್ರದರ್ಶನ, ಕೇರಳದ ಚಂಡೆ ವಾದನ ಮೂಲಕ ಜನಾಕರ್ಷಣೆ ನೀಡಲಾಗಿತ್ತು. ಹೆದ್ದಾರಿ ಉದ್ದಕ್ಕೂ ಜನರು ರಸ್ತೆ ಬದಿಯಲ್ಲಿ ನೆರೆದು ಶುಭ ಹಾರೈಸಿದ್ದರು. ಹೆದ್ದಾರಿಯ ಅಲ್ಲಲ್ಲಿ ಕಾರ್ಯಕರ್ತರಿಗೆ ಕಲ್ಲಂಗಡಿ ಹಣ್ಣು, ಕುಡಿಯುವ ನೀರು, ಮಜ್ಜಿಗೆ ನೀಡುವ ವ್ಯವಸ್ಥೆ ಮಾಡಲಾಗಿತ್ತು.
ಬಂದೋಬಸ್ತ್
ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬಂದಿಯನ್ನು ಪಾದಯಾತ್ರೆ ಸಾಗಿ ಬರುವ ದಾರಿಯಲ್ಲಿ ನಿಯೋಜಿಸಲಾಗಿದ್ದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಊಟದ ವ್ಯವಸ್ಥೆ
ಮಧ್ಯಾಹ್ನ ಎಲ್ಲರಿಗೂ ಜೋಡುಮಾರ್ಗ ಸ್ವರ್ಶಾ ಕಲಾ ಮಂದಿರದಲ್ಲಿ ಊಟದ ವ್ಯವಸ್ಥೆ ಏರ್ಪಡಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿ ಗಳು ಭಾಗವಹಿಸಿದ್ದರು.