Advertisement

ಅವಕಾಶ ದೊರೆತರೆ ಸಾಧನೆ: ರಾಜೇಶ್‌

06:24 AM Feb 24, 2019 | Team Udayavani |

ಬಂಟ್ವಾಳ: ವಿಶಿಷ್ಟ ಮಕ್ಕಳಿಗೆ ಅವಕಾಶಗಳು ಸಿಕ್ಕಿದರೆ ಯಾವ ರೀತಿಯಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಗೆದ್ದು ಬಂದಿರುವ ವಿದ್ಯಾರ್ಥಿನಿ ಯಶಸ್ವಿನಿಯೇ ಸಾಕ್ಷಿ. ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳ ವೇದಿಕಗಳನ್ನು ನೀಡುವ ಕೆಲಸ ಆಗಬೇಕಾಗಿದೆ. ಅವರಲ್ಲಿ ಇರುವಂತಹ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ, ಮುಖ್ಯವಾಹಿನಿಗೆ ಮುಟ್ಟಿಸುವಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮ ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಫೆ. 23ರಂದು ಬಿ.ಸಿ. ರೋಡ್‌ ಸ್ವರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನ ಮಕ್ಕಳ ಹಬ್ಬವನ್ನು ಉದ್ದೇಶಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಚೆಸ್‌ ಕ್ರೀಡಾಪಟು ಯಶಸ್ವಿನಿ ದೀಪ ಬೆಳಗಿಸಿ ಉದ್ಘಾಟಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿವಿಧ ಶಿಕ್ಷಕರ ಸಂಘ ಹಾಗೂ ನೌಕರರ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಅವಕಾಶಗಳನ್ನು ನೀಡಿದಾಗ ಅವರು ಆಕಾಶ ಮುಟ್ಟುತ್ತಾರೆ ಎಂದರು.

ಕವನ ಸಂಕಲನ ಬಿಡುಗಡೆ
ವಿಶೇಷ ಚೇತನ ಮಕ್ಕಳು ಬರೆದ ಕವನ ಸಂಕಲನ ಬಿಡುಗಡೆ ನಡೆಯಿತು. ಕವನಸಂಕಲನ ಬರೆದ ವಿಶಿಷ್ಟ ಮಕ್ಕಳಾದ ಕೌಶಿಕ್‌ ಕಂಚಿಕಾರ್‌ ಪೇಟೆ, ಭಾಗ್ಯಶ್ರೀ ಕುರಿಯಾಳ, ಸಾಧನೆಗೈದ ಚೆಸ್‌ ಕ್ರೀಡಾಪಟು ಯಶಸ್ವಿನಿ, ಚಂದ್ರಿಕಾ, ಶ್ರೀಕೃಷ್ಣ, ಮಹಮ್ಮದ್‌ ಜುನೈದ್‌, ಬಿ. ಪಾತುಮಾ ಅವರನ್ನು ಸಮ್ಮಾನಿಸಲಾಯಿತು.

ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಎಂ.ಎಸ್‌. ಮಹಮ್ಮದ್‌, ಚಂದ್ರಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯರಾದ ಪ್ರಭಾಕರ ಪ್ರಭು, ಸಂಜೀವ ಪೂಜಾರಿ, ಶಾರದ ಪ್ರೌ. ಶಾಲಾ ಸಂಚಾಲಕ ವೇ| ಮೂ| ಜನಾರ್ದನ ಭಟ್‌, ಡಯಟ್‌ ಸಂಸ್ಥೆ ಯ ಪ್ರಾಂಶುಪಾಲ ಸಿಪ್ರಿಂಯಾನ್‌ ಮೊಂತೆರೋ, ಜೇಮ್ಸ್‌ ಸಂಸ್ಥೆಯ ಅಧಿಕಾರಿ ಕುಟಿನ್ಹೋ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ , ಶಿಕ್ಷಣ ಪರಿವೀಕ್ಷಣಾಧಿಕಾರಿ ರಘುನಾಥ್‌, ಸ. ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಸ್ಪರ್ಶ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್‌, ಚುಟುಕು ಸಾ.ಪ. ಅಧ್ಯಕ್ಷ ನೇಮು ಪೂಜಾರಿ ಇರಾ, ಸ. ನೌಕರರ ವಿವಿಧ ಸಂಘಟನೆಗಳ ಅಧ್ಯಕ್ಷರಾದ ಗಂಗಾಧರ ರೈ, ಶಿವಪ್ರಸಾದ್‌, ರಮಾನಂದ, ಜೋಯೆಲ್‌ ಲೋಬೋ, ಜತ್ತಪ್ಪ, ಸುರೇಶ್‌,  ಚಿನ್ನಪ್ಪ, ಸಂತೋಷ್‌, ಚೆನ್ನಕೇಶವ, ಮಹಮ್ಮದ್‌ ತುಂಬೆ, ರಾಜೇಶ್‌, ಅಖಿಲ್‌ ಶೆಟ್ಟಿ, ಜಗದೀಶ್‌ ಬಾಳ್ತಿಲ, ಯುವಜನ ಸಬಲೀಕರಣ ಅಧಿ ಕಾರಿ ನವೀನ್‌ ಪಿ.ಎಸ್‌., ಕಾರ್ಯಕ್ರಮ ಸಂಯೋಜಕಿ ಸುರೇಖಾ ಉಪಸ್ಥಿತರಿದ್ದರು. ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್‌ ಸ್ವಾಗತಿಸಿ, ಶಿಕ್ಷಕ ರಾಮಚಂದ್ರ ರಾವ್‌ ನಿರೂಪಿಸಿದರು.

ವೈಶಿಷ್ಟ್ಯಗಳು
·ಬಂಟ್ವಾಳ ತಾಲೂಕಿನಾದ್ಯಂತದ ಮುನ್ನೂರಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದರು. 
·ಕಲಾ ಮಂದಿರದ ಮುಂಭಾಗದಲ್ಲಿ ಎಲ್ಲರಿಗೂ ಕಬ್ಬಿನ ಹಾಲು ಉಚಿತವಾಗಿ ನೀಡಲಾಗುತ್ತಿತ್ತು.
·30ಕ್ಕೂ ಹೆಚ್ಚು ಸ್ಟಾಲ್‌ಗ‌ಳಲ್ಲಿ ವಿಶೇಷ ಚೇತನ ಮಕ್ಕಳಿಗೆ ಅವರು ಬಯಸಿದ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.
·ವಿಶೇಷ ಚೇತನ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಮಕ್ಕಳಿಗೆ ವಿಶಿಷ್ಟ ಆಟಗಳ ಸರಣಿಗಳು.
·ವಿಶೇಷವಾಗಿ ಸ್ವಾಗತಿಸಿಲು ವಾದ್ಯವೃಂದ ಹಾಗೂ ಬೊಂಬೆಗಳ ಮೆರುಗು, ಕ್ಲೇ ಮಾಡಲಿಂಗ್‌, ವಿವಿಧ ರೀತಿಗಳ ಕ್ರಾಫ್ಟ್‌ಗಳು, ವರ್ಣಮಯ ಚಿತ್ರಗಳನ್ನು ಬರೆಯಲು ಮಕ್ಕಳಿಗೆ
ಅವಕಾಶ ಕಲ್ಪಿಸಲಾಗಿತ್ತು.
·ಕರಕುಶಲ ವಸ್ತುಗಳ ಪ್ರದರ್ಶನ, ಸಾಧಕರೊಂದಿಗೆ ಸಂವಾದ, ಸ್ಮರಣೀಯ ಆಟಿಕೆಗಳ ಸ್ಟಾಲುಗಳು, ನುರಿತರಿಂದ ಮಾಹಿತಿಗಳ ಮಹಾಪೂರ.

Advertisement
Advertisement

Udayavani is now on Telegram. Click here to join our channel and stay updated with the latest news.

Next