ಬಂಟ್ವಾಳ: ರಸ್ತೆಗೆ ಗುಡ್ಡ ಜರಿದು ಬಿದ್ದ ಕಾರಣದಿಂದ ಬಿಸಿರೋಡು ಉಳ್ಳಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಬದಲಿ ರಸ್ತೆಯ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರು ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಕೋಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿದ್ದ ಗುಡ್ಡವೊಂದು ರಾತ್ರಿಯಿಂದ ಸುರಿಯುತ್ತಿರುವ ಬಾರೀ ಮಳೆಗೆ ಜರಿದು ರಸ್ತೆಗೆ ಬಿದ್ದು ಸಂಚಾರ ಬಂದ್ ಆಗಿದೆ.
ಬಿಸಿರೋಡಿನಿಂದ ಸಜೀಪ ಚೇಳೂರು , ಬೋಳ್ಯಾರು ಮುಡಿಪು ಮೂಲಕ ಉಳ್ಳಾಲ ಮಂಗಳೂರು ಸಂಪರ್ಕ ದ ರಸ್ತೆಯ ಬೋಳ್ಯಾರು ಸಮೀಪದ ಮಿತ್ತಕೋಡಿ ಎಂಬಲ್ಲಿ ರಸ್ತೆಗೆ ಗುಡ್ಡ ಜರಿದು ಬಿದ್ದಿದೆ.
ಬದಲಿ ವ್ಯವಸ್ಥೆ
ಬಿಸಿರೋಡಿನಿಂದ ಮೆಲ್ಕಾರ್ ಬೋಳ್ಯಾರು ಮೂಲಕ ಮಂಗಳೂರು ಸಂಚಾರ ಮಾಡುವ ಬಸ್ ಹಾಗೂ ಇತರೆ ವಾಹನಗಳು ಬೋಳ್ಯಾರ್ ನಿಂದ ಕುರ್ನಾಡು ಮೂಲಕ ಮುಡಿಪುವಿಗೆ ಹೋಗಲು ಬದಲಿ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯ ಗ್ರಾಮ.ಪಂಚಾಯತ್ ಎರಡು ತಿಂಗಳ ಹಿಂದೆಯೇ ಇಲ್ಲಿ ಎಚ್ಚರಿಕೆಯ ಬ್ಯಾನರ್ ಅಳವಡಿಸಿದ್ದರು. ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕು ಅಪಾಯಕಾರಿ ಗುಡ್ಡ ಇದೆ, ಜರಿದು ಬೀಳುವ ಬಗ್ಗೆ ಗ್ರಾಮ ಪಂಚಾಯತ್ ಈ ಹಿಂದೆಯೇ ವಾಹನ ಸವಾರರಿಗೆ ಎಚ್ಚರಿಕೆ ನೀಡಿತ್ತು.