Advertisement
ಸಂಚಾರ ನಿಬಿಡ ಸಮಯದಲ್ಲಿ ನಗರ ಕೇಂದ್ರದ ಎಲ್ಲಿಯೂ ವಾಹನ ನಿಲುಗಡೆಗೆ ಸ್ಥಳವಿಲ್ಲ. ಜನ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯೂ ಆಗಿಲ್ಲ. ವಾಹನ ಸಂಚಾರದಲ್ಲಿ ಅಡಚಣೆ ಆದರೆ ಕೆಲವೇ ನಿಮಿಷಗಳಲ್ಲಿ ಹೆದ್ದಾರಿ ಯಲ್ಲಿ ಮೈಲುದ್ದಕ್ಕೆ ವಾಹನ ಸಾಲು ಉಂಟಾಗುತ್ತದೆ.
Related Articles
2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಜೆ. ಜಗದೀಶ್ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ಹಾಗೂ ಇಡೀ ಬಂಟ್ವಾಳದ ಚಿತ್ರಣ ಬದಲಿಸುವ ಪ್ರಯತ್ನ ನಡೆಸಿದ್ದರು. ಅದಾದ ಬಳಿಕ ಗಂಭೀರವಾದ ಯಾವುದೇ ಪ್ರಯತ್ನಗಳು ನಡೆದಿಲ್ಲ.
Advertisement
ರಕ್ತೇಶ್ವರಿ ಕ್ಷೇತ್ರ ಬಳಿಯಿಂದ ಕೈಕುಂಜೆಗೆ ತೆರಳುವ ಮಾರ್ಗ ಬಿ.ಸಿ. ರೋಡ್‌ನ ಪ್ರಮುಖ ರಸ್ತೆ. ಇದರ ಇಕ್ಕೆಲಗಳಲ್ಲೂ ಮಿನಿ ವಿಧಾನಸೌಧ, ತೋಟ ಗಾರಿಕೆ ಇಲಾಖೆ ಕಚೇರಿ, ಎಪಿಎಂಸಿ, ಮೆಸ್ಕಾಂ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾ.ಪಂ. ಕಚೇರಿ, ನ್ಯಾಯಾಲಯಗಳಿವೆ. ಆದರೆ ಇವುಗಳಿಗೆ ವಾಹನಗಳಲ್ಲಿ ಬರುವವರು ಪರದಾಟ ನಡೆಸಬೇಕಾಗಿದೆ. ಮಿನಿ ವಿಧಾನಸೌಧ ಎದುರೇ ವಾಹನಗಳು ಪಾರ್ಕ್ ಮಾಡುತ್ತವೆ. ಟೂರಿಸ್ಟ್ ಟ್ಯಾಕ್ಸಿಗಳು, ಆಟೋಗಳು ಸ್ಟೇಟ್ ಬ್ಯಾಂಕ್‌ವರೆಗೆ ನಿಲ್ಲುತ್ತವೆ. ಎಲ್ಲಿಯೂ ವ್ಯವಸ್ಥಿತ ಜಾಗವಿಲ್ಲ. ಬಿ.ಸಿ. ರೋಡ್, ಕೈಕಂಬ, ಬಂಟ್ವಾಳಕ್ಕೆ ವ್ಯಾಪಾರ ವಹಿವಾಟುಗಳಿಗೆ ಬರುವವರು ಪಾರ್ಕಿಂಗ್‌ಗೆ ಪರದಾಡ ಬೇಕಾದ ಸ್ಥಿತಿ ಇದೆ.
ಕೆಎಸ್ಸಾರ್ಟಿಸಿಗೆ ನೋ ಎಂಟ್ರಿ:ಈಗಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಯಾವ ವಾಹನಗಳಿಗೂ ಪ್ರವೇಶವಿಲ್ಲ. ಅಲ್ಲಿನ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಅವಕಾಶವಿದ್ದರೂ ಖಾಲಿ ಬಿಡಲಾಗಿದೆ. ಕೋರ್ಟ್ ಆವರಣದಲ್ಲಿ ಕೆಲವೊಮ್ಮೆ ಕಕ್ಷಿದಾರರೂ ಹೊರಗೆ ವಾಹನ ನಿಲ್ಲಿಸಬೇಕಾದ ಸ್ಥಿತಿ. ಮಿನಿ ವಿಧಾನಸೌಧದ ಸುತ್ತಮುತ್ತ ನಾಲ್ಕಾರು ವಾಹನಗಳು ನಿಂತರೂ ಹೆಚ್ಚಿನ ಜಾಗವಿಲ್ಲ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ
ಬಿ.ಸಿ. ರೋಡ್‌ನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಹಲವಾರು ಸಲ ಜಿಲ್ಲಾಡಳಿತಕ್ಕೆ ಬರೆದುಕೊಳ್ಳಲಾಗಿದೆ. ಆದರೆ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿಲ್ಲ. ಸಾರ್ವಜನಿಕ ವ್ಯವಸ್ಥೆನ್ನು ನಿರ್ವಹಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಸಮಸ್ಯೆ ಪರಿಹಾರ ಆಗ್ರಹಿಸಿ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ಮೂಲಕ ಪ್ರತಿಭಟನೆ, ಧರಣಿಯಂತಹ ಗಂಭೀರ ಕ್ರಮಗಳನ್ನು ಮಾಡಲಾಗುವುದು.
– ಬಿ.ಎಂ. ಪ್ರಭಾಕರ ದೈವಗುಡ್ಡೆ
ಸಂಚಾಲಕರು, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಪಾರ್ಕಿಂಗ್ ಸ್ಥಳಕ್ಕೆ ಕ್ರಮ
ಬಿ.ಸಿ. ರೋಡ್ ನಗರ ಸೌಂದರ್ಯ ಹೆಚ್ಚಿಸಲು ಈಗಾಗಲೇ ಯೋಜನೆ ರೂಪಿಸಲು ಲೊಕೋಪಯೋಗಿ ಇಲಾಖೆಗೆ ಸೂಚಿಸಿದೆ. ಫ್ಲೈಓವರ್ ತಳದಲ್ಲಿ ಡಾಮರು ಕಾಮಗಾರಿ ಮೂಲಕ ಅವ್ಯವಸ್ಥೆ ನಿವಾರಿಸಿದೆ. ಮುಂದಿನ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಸರಕಾರಕ್ಕೆ ಬರೆಯಲಾಗಿದೆ. ಆಟೋ, ಸರ್ವಿಸ್ ವಾಹನಗಳಿಗೆ ಪಾರ್ಕಿಂಗ್ ಸ್ಥಳವನ್ನು ತೋರಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಭವಿಷ್ಯದ ಹೆದ್ದಾರಿ ಆರು ಪಥ ಆಗುವಾಗ ಸಂಚಾರ ದಟ್ಟಣೆಗೆ ಪರಿಹಾರ ಸಿಗಲು ಸಾಧ್ಯ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು,
ಶಾಸಕರು ರಾಜಾ ಬಂಟ್ವಾಳ