Advertisement

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಜನಸ್ನೇಹಿಯಾಗಿಸಲು ಕ್ರಮ’

01:05 PM Sep 23, 2018 | Team Udayavani |

ಬಂಟ್ವಾಳ : ಬಿ.ಸಿ. ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕುಂದು ಕೊರತೆಗಳನ್ನು ನೀಗಿಸಿ ಅದರ ಪ್ರಯೋಜನ ಎಲ್ಲರಿಗೂ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಸೆ. 21ರಂದು ಬಿ.ಸಿ. ರೋಡ್‌ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣದಲ್ಲಿ ಬಿ.ಸಿ. ರೋಡ್‌- ಬೆಂಗಳೂರು ಸ್ಲೀಪರ್‌ ಕೋಚ್‌ ಬಸ್‌ಗೆ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬಳಿಕ ಪತ್ರಕರ್ತರ ಜತೆ ಮಾತನಾಡಿ, ಬಿ.ಸಿ. ರೋಡ್‌ ಬಸ್‌ ನಿಲ್ದಾಣ ಇನ್ನೂ ಟೇಕ್‌ಆಫ್‌ ಆಗಿಲ್ಲ. ಜನಬಳಕೆಗೆ, ಬಸ್‌ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹೆದ್ದಾರಿಯಲ್ಲಿ ವೃತ್ತ ನಿರ್ಮಿಸುವುದು ಅವಶ್ಯ ಎಂದರು. ಸ್ಲೀಪರ್‌ ಬಸ್‌ ಬಿ.ಸಿ. ರೋಡ್‌ ನಿಂದ ಹೊರಡುವ ಕಾರಣ ಒತ್ತಡವಿಲ್ಲದೇ ಪ್ರಯಾಣಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ವಕ್ತಾರೆ ಸುಲೋಚನಾ ಜಿ.ಕೆ. ಭಟ್‌, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ, ಬಂಟ್ವಾಳ ಯುವಮೋರ್ಚಾ ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌ ನರಿಕೊಂಬು, ಘಟಕ ವ್ಯವಸ್ಥಾಪಕ ಪಿ. ಇಸ್ಮಾಯಿಲ್‌, ಸಹಾಯಕ ಕಾರ್ಯಾಧೀಕ್ಷಕ ಲಿಯೋ ಅಂತೋಣಿ ತಾವ್ರೊ, ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್‌, ತಾಂತ್ರಿಕ ಮೇಲ್ವಿಚಾರಕ ಪ್ರವೀಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು. ಕೆಎಸ್‌ಆರ್‌ಟಿಸಿ ಸಹಾಯಕ ರಮೇಶ್‌ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next