Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕರು. ಇವರಿಗೆಲ್ಲ ಬೇರೆ ಬೇರೆ ದೇಶಗಳ ಹಾಗೂ ಕಾಂಗ್ರೆಸ್ ಬೆಂಬಲವಿದೆ. ರೈತರು ಯಾವತ್ತೂ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಇತಿಹಾಸದಲ್ಲಿ ಇಲ್ಲ. ಇವರಿಗೆಲ್ಲ ಪಾಕಿಸ್ತಾನದವರ ಕುಮ್ಮಕ್ಕಿದೆ. ಕೆಂಪು ಕೋಟೆ ಬಳಿ ಹೋಗಿ ಗಲಾಟೆ ಮಾಡುತ್ತಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು.
Related Articles
Advertisement
ಕಾಂಗ್ರೆಸ್‌ನವರ ಪ್ರಚೋದನೆಯಿಂದ ರೈತರು ದೆಹಲಿ, ಕರ್ನಾಟಕದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಂಚಾರ ಸುಗಮವಾಗಬೇಕು. ಸಂಚಾರಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದಿರಬಹುದು. ಕೃಷಿ ಕಾಯ್ದೆಯನ್ನು 2008, 2013 ಹಾಗೂ 2019ರಲ್ಲಿ ಇವರೇ ವಿರೋಧಿ ಸಿದರು. ಈಗ ರೈತರಿಗೆ ಪ್ರಚೋದನೆ ನೀಡಿ ಪ್ರತಿಭಟನೆ ನಡೆಸುವಂತೆ ಮಾಡಿದ್ದಾರೆ ಎಂದರು.
ಸಿಎಂಗೆ ಖಾತೆ ಬದಲಾವಣೆ ಮಾಡುವ ಪರಮಾಧಿಕಾರವಿದೆ. ಅವರು ಹಿರಿಯರು, ಮುತ್ಸದ್ಧಿಗಳು ಅದೆಲ್ಲವನ್ನು ಅವರು ನಿಭಾಯಿಸುತ್ತಾರೆ. ಆನಂದ್ ಸಿಂಗ್ ಖಾತೆ ಬದಲಾವಣೆ ಮಾಡಿದ್ದು, ಅವರಿಗೆ ಅಸಮಾಧಾನ ಇದೆ. ಸಿಎಂ ಭೇಟಿ ಮಾಡಿ ಮಾತನಾಡಲಿದ್ದಾರೆ. ಎಚ್. ವಿಶ್ವನಾಥ್ ಸರ್ಕಾರದಿಂದ ನಾಮ ನಿರ್ದೇಶನಗೊಂಡವರು. ಕೋರ್ಟ್ ಜನರಿಂದ ಆಯ್ಕೆಯಾದವರಿಗೆ ಮಂತ್ರಿ ಸ್ಥಾನ ಕೊಡಲು ಬರುತ್ತದೆ, ಸರ್ಕಾರದಿಂದ ನಾಮ ನಿರ್ದೇಶನಗೊಂಡವರಿಗೆ ಬರಲ್ಲ ಎಂದು ಹೇಳಿದ್ದರಿಂದ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದರು.