Advertisement

ಕಾಂಗ್ರೇಸ್ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ಬಿ.ಸಿ. ಪಾಟೀಲ್ ಆರೋಪ

02:17 PM Jan 25, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ರೈತರ ವಿಚಾರದಲ್ಲಿ ದ್ವಂದ್ವ ನೀತಿಯ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಅಲ್ಲದೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇದೀಗ ಊಸರವಳ್ಳಿಯಂತೆ ನಾಟಕವಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೃಷಿ ಕಾಯ್ದೆ ತಿದ್ದುಪಡಿಗಳು ರೈತರ ಬಲವರ್ಧನೆಗೆ ಅವರ ಆದಾಯ ಹೆಚ್ಚಿಸಲು ತರಲಾಗಿದೆ, ಜೊತೆಗೆ ಕಾಯ್ದೆಗಳು ರೈತರ ಪರವಾಗಿದ್ದು, ಇದರಲ್ಲಿ ಯಾವುದೇ ಸಂಶಯಬೇಡ. ಈ ಬಗ್ಗೆ ಮನವರಿಕೆಯೂ ಮಾಡಿಕೊಡಲಾಗಿದೆ. ರೈತರು ಸರ್ಕಾರದ ಜೊತೆ ಸಹಕರಿಸಿ ಟ್ರ್ಯಾಕ್ಟರ್ ರ‍್ಯಾಲಿ ಕೈಬಿಡುವಂತೆ ಮನವಿ ಮಾಡಿದರು.

2019 ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಎಪಿಎಂಸಿ ರದ್ದುಪಡಿಸಿ ಬೆಂಬಲ ಬೆಲೆ ರದ್ದುಪಡಿಸಲಾಗುವುದು ಎಂದೇ ಹೇಳಿತ್ತು.ಆದರೆ ನಾವು ಎಪಿಎಂಸಿ ರದ್ದುಮಾಡುತ್ತಿಲ್ಲ, ರೈತ ತನ್ನ ಬೆಳೆಯನ್ನು ಎಲ್ಲಿಬೇಕಾದರೂ ಮಾರಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ. ಲಾಭನಷ್ಟಕ್ಕೆ ವ್ಯಾಪರಸ್ಥರು ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ. ರೈತ ತನ್ನ ಬೆಳೆಯನ್ನು ತನಗೆ ಇಚ್ಛಿಸಿದ ಬೆಲೆಯಲ್ಲಿ ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದು ಬಿ.ಸಿ.ಪಾಟೀಲ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮೆಡಿಕಲ್‌ ಸೀಟು ಕೊಡಿಸುವ ಆಮಿಷ: ವಿದ್ಯಾರ್ಥಿಗಳ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ

ನೂತನ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆ. ಪೂರಕವಾಗಿಯೇ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಪ್ರತಿಭಟನೆಯನ್ನು ಕೈಬಿಟ್ಟು ಸರ್ಕಾರದ ಜೊತೆ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next