Advertisement

ಮರು ಸರ್ವೆ; ತೆರಿಗೆ ವಂಚಕ ಟೆಕ್ ಪಾರ್ಕ್, ಮಾಲ್ ಗಳಿಗೆ ಬಿಬಿಎಂಪಿ ಶಾಕ್

04:55 PM May 16, 2017 | Team Udayavani |

ಬೆಂಗಳೂರು:ಬೃಹತ್ ಕಟ್ಟಡ ಹೊಂದಿದ್ದು, ತೆರಿಗೆ ವಂಚಿಸುತ್ತಿರುವ ಟೆಕ್ ಪಾರ್ಕ್, ಓರಾಯನ್ ಮಾಲ್ ಸೇರಿದಂತೆ 70 ಟೆಕ್ ಪಾರ್ಕ್ ಹಾಗೂ 40 ಮಾಲ್ ಗಳ ಮರು ಸರ್ವೆಗೆ ಬಿಬಿಎಂಪಿ ನಿರ್ಧರಿಸುವ ಮೂಲಕ ಬಿಗ್ ಶಾಕ್ ನೀಡಿದೆ.

Advertisement

ಟೆಕ್ ಪಾರ್ಕ್, ಟೋಟಲ್ ಸ್ಟೇಶನ್, ಓರಾಯನ್ ಮಾಲ್, ಮಾನ್ಯತಾ ಟೆಕ್ ಪಾರ್ಕ್, ವರ್ಲ್ಡ್ ಟ್ರೇಡ್ ಸೆಂಟರ್ ನಂತಹ ಬೃಹತ್ ಕಟ್ಟಡ ಹೊಂದಿರುವ ಟೆಕ್ ಪಾರ್ಕ್ ಮತ್ತು ಮಾಲ್ ಗಳನ್ನು ಎಲೆಕ್ಟ್ರಾನಿಕ್ ಸರ್ವೆ ಉಪಕರಣದ ಮೂಲಕ ಸರ್ವೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿರುವುದಾಗಿ ಟಿವಿ9 ವರದಿ ಮಾಡಿದೆ.

ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿದೆ. ಟೆಕ್ ಪಾರ್ಕ್ , ಮಾಲ್ ಗಳ ಮರು ಸರ್ವೆ ನಡೆಸಲು ತಂಡವನ್ನು ರಚಿಸಲಾಗಿದ್ದು, ಸರ್ವೆ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವುದು ಮಾತ್ರ ಬಾಕಿ ಇದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next