Advertisement

ಬಿಬಿಎಂಪಿಗೆ ಬೂಸ್ಟ್‌ ನೀಡಿದ ತೆರಿಗೆ ಡೋಸ್‌!

12:24 PM Jan 18, 2022 | Team Udayavani |

ಬೆಂಗಳೂರು: ಕೊರೊನಾ ಅಲೆಯಿಂದ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಜನ “ತೆರಿಗೆಯ ಡೋಸ್‌’ ನೀಡಿದ್ದಾರೆ!

Advertisement

ಕೋವಿಡ್‌-19 ಎರಡನೇ ಮತ್ತು ಮೂರನೇಅಲೆಗಳ ನಡುವೆಯೂ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿಬಿಬಿಎಂಪಿಯಲ್ಲಿ ಗರಿಷ್ಠ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ. ಇದು ಪಾಲಿಕೆಗೆ “ಬೂಸ್ಟ್‌’ ನೀಡಿದಂತಾಗಿದೆ.

2021ರ ಏಪ್ರಿಲ್‌ನಿಂದ ಇದುವರೆಗೆ ಪಾಲಿಕೆವ್ಯಾಪ್ತಿಯಲ್ಲಿ 2,674 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕರೊನಾ ಸೋಂಕು ಬರುವುದಕ್ಕಿಂತಮುನ್ನ ಅಂದರೆ 2019-20ನೇ ಸಾಲಿನಲ್ಲಿ ಮಾರ್ಚ್‌ ಅಂತ್ಯದವರೆಗೆ 2,681 ಕೋಟಿ ರೂ. ಮತ್ತು 2020-21ನೇ ಸಾಲಿನಲ್ಲಿ 2,777 ಕೋಟಿ ರೂ. ತೆರಿಗೆಸಂಗ್ರಹವಾಗಿತ್ತು. ಆದರೆ, ಈ ಬಾರಿ ಆರ್ಥಿಕ ವರ್ಷಅಂತ್ಯಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿಇರುವಾಗಲೇ ಈ ಗುರಿ ತಲುಪಿರುವುದು ಅಧಿಕಾರಿಗಳಲ್ಲಿ ಖುಷಿ ಇಮ್ಮಡಿಗೊಳಿಸಿದೆ.

ಸಂಗ್ರಹವಾದ ಒಟ್ಟಾರೆ ತೆರಿಯಲ್ಲಿ ಆನ್‌ಲೈನ್‌ ಮೂಲಕ 1,405.33 ಕೋಟಿ ರೂ., ಬ್ಯಾಂಕ್‌ ಚಲನ್‌1,225.80 ಕೋಟಿ ರೂ. ಹಾಗೂ ನೇರ ಪಾವತಿ 43ಕೋಟಿ ರೂ. ಸೇರಿ ಒಟ್ಟು 2,674 ಕೋಟಿ ರೂ. ಆಸ್ತಿತೆರಿಗೆ ಪಾವತಿಯಾಗಿದೆ. ಆದರೆ, ವಾರ್ಷಿಕ ತೆರಿಗೆ ಸಂಗ್ರಹ ಗುರಿ ನಾಲ್ಕು ಸಾವಿರ ಕೋಟಿ ರೂ. ಆಗಿದೆ.

ಈ ಪೈಕಿ ಶೇ. 67ರಷ್ಟು ಗುರಿ ಸಾಧನೆಯಾಗಿದೆ. 2021-22ನೇ ಸಾಲಿನ ಬಜೆಟ್‌ ವೇಳೆ 3,500 ಕೋಟಿರೂ. ಗುರಿ ಇತ್ತು. ನಂತರದಲ್ಲಿ ಸರ್ಕಾರದ ಸೂಚನೆ ಮೇರೆಗೆ ಇದನ್ನು ಹೆಚ್ಚಿಸಲಾಗಿತ್ತು. ವಾರ್ಷಿಕವಾಗಿ ಆರ್ಥಿಕ ವರ್ಷದ ಆರಂಭದ ತಿಂಗಳಲ್ಲಿಯೇ (ಏ. 31ರ ಒಳಗೆ) ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿನೀಡಲಾಗುತ್ತದೆ. ಆದರೆ, 2021-22ನೇ ಸಾಲಿನಲ್ಲಿ ಕೋವಿಡ್‌ 2ನೇ ಅಲೆಯ ವೇಳೆ ಲಾಕ್‌ಡೌನ್‌ಜಾರಿಗೊಳಿಸಿದ್ದರಿಂದ 2021ರ ಜೂ. 30ರವರೆಗೆ ಶೇ.5ರ ರಿಯಾಯಿತಿ ನೀಡಲಾಗಿತ್ತು. ಈ ಅವಧಿಯಲ್ಲಿ ಹೆಚ್ಚಿನ ಶೇ. 40ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ.

Advertisement

ಇದಾದ ನಂತರ ಪಾಲಿಕೆ ಕಂದಾಯ ಸಿಬ್ಬಂದಿತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ನಿರಂತರ ನೊಟೀಸ್‌ ಜಾರಿಗೊಳಿಸಿದ್ದಾರೆ. ನಂತರ, ಚರಾಸ್ತಿಗಳಮುಟ್ಟುಗೋಲಿಗೆ ನೋಟೀಸ್‌ ನೀಡುತ್ತಿದ್ದಂತೆ ತೆರಿಗೆಸಂಗ್ರಹ ಹೆಚ್ಚಳವಾಗಿದೆ. ಇದಕ್ಕೆ ಉದಾಹರಣೆಗೆ ಕಳೆದನಾಲ್ಕು ವರ್ಷಗಳಿಂದ 33 ಕೋಟಿ ರೂ. ಆಸ್ತಿ ತೆರಿಗೆಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್‌ಗೆ ಬೀಗ ಹಾಕಿಕಠಿಣ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲುಲಾಕ್‌ಡೌನ್‌, ಕರ್ಫ್ಯೂ ಸೇರಿ ಇತರೆ ನಿರ್ಬಂಧಗಳನಡುವೆ ಆಸ್ತಿ ತೆರಿಗೆ ವಸೂಲಿ ಕಷ್ಟವೆಂದು ಪಾಲಿಕೆ ನಿರೀಕ್ಷಿಸಿತ್ತು. ಆದರೆ, ಸಾರ್ವಜನಿಕರು ಸಮರ್ಪಕವಾಗಿ ಆಸ್ತಿ ತೆರಿಗೆ ಪಾವತಿಸಿದ್ದಾರೆ.

2021-22ರ ತಿಂಗಳುವಾರು

ಆಸ್ತಿ ತೆರಿಗೆ ಸಂಗ್ರಹ ವಿವರ

ತಿಂಗಳು ತೆರಿಗೆ ಸಂಗ್ರಹ (ಕೋಟಿ

ರೂ. ಗಳಲ್ಲಿ)

ಏಪ್ರಿಲ್‌ 796

ಮೇ 478

ಜೂನ್‌ 433

ಜುಲೈ 195

ಆಗಸ್ಟ್ 151

ಸೆಪ್ಟೆಂಬರ್‌ 213

ಅಕ್ಟೋಬರ್‌ 111

ನವೆಂಬರ್‌ 86

ಡಿಸೆಂಬರ್‌ 126

ಜನವರಿ

(12ರವರೆಗೆ)

85

ಒಟ್ಟು 2,674 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next