Advertisement

ನಗರದ 12 ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ನಡೆಸಲು ಬಿಬಿಎಂಪಿ ಆದೇಶ

10:19 PM Apr 21, 2021 | Team Udayavani |

ಬೆಂಗಳೂರು: ಕೊರೊನಾ ಸೋಂಕಿತರ ಶವ ಸಂಸ್ಕಾರ ಸಮಸ್ಯೆ ಮತ್ತು ನಿರ್ದಿಷ್ಟ ವಿದ್ಯುತ್ ಚಿತಾಗಾರಗಳ ಮೇಲೆ
ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ 12 ವಿದ್ಯುತ್ ಚಿತಾರಗಳಲ್ಲೂ ಕೊರೊನಾ ಹಾಗೂ ಕೊರೊನೇತರ ಕಾರಣದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಬಿಬಿಎಂಪಿ ಆದೇಶ ಮಾಡಿದೆ.

Advertisement

ನಗರದಲ್ಲಿ ಮೊದಲು ನಾಲ್ಕು ಮತ್ತು ನಂತರದಲ್ಲಿ ಏಳು ವಿದ್ಯುತ್ ಚಿತಾಗಾರಗಳನ್ನು ಕೊರೊನಾ ಸೋಂಕಿತರ ಶವ ಸಂಸ್ಕಾರಕ್ಕೆ ಮೀಸಲಿಡಲಾಗಿತ್ತು. ಇತ್ತೀಚೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಅಧಿಕವಾಗಿ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ 12 ವಿದ್ಯುತ್ ಚಿತಾಗಾರದಲ್ಲಿ ಎಲ್ಲ ಮಾದರಿ ಶವ ಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ.

ಷರತ್ತುಗಳು: ವಿದ್ಯುತ್ ಚಿತಾಗಾರ ಸಿಬ್ಬಂದಿ ವೇತನ ಬಾಕಿ ಬಿಡುಗಡೆ ಮಾಡುವಂತೆ, ಶವ ಸಂಸ್ಕಾರಕ್ಕೆ ಯಾವುದೇ ವಿಳಂಬವಾಗಬಾರದು. ಬೆಳಗ್ಗೆೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಣೆ, ಬೆಳಗ್ಗೆ 11ಕ್ಕೆ ಹಿಂದಿನ ದಿನದ ಶವ ಸಂಸ್ಕಾರದ ಪೂರ್ಣ ವಿವರ ನೀಡಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಾಗಾಣಿಕೆ ಮತ್ತು ಅಂತ್ಯಕ್ರಿಯೆಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವುದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ.

ಲೋಪವಾಗದಂತೆ ಎಚ್ಚರಿಕೆ: ವಿದ್ಯುತ್ ಚಿತಾಗಾರಗಳ ಮೇಲೆ ಹೊರೆ ತಪ್ಪಿಸಲು ಹಾಗೂ ಶವ ಸಂಸ್ಕಾರ ವಿಳಂಬ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಹೇಳಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹದಿಂದ ಕೊರೊನಾ ಹಬ್ಬುವುದಿಲ್ಲ. ಆದರೆ, ಪ್ಯಾಕ್ ವಿಧಾನದಲ್ಲಿ ಲೋಪವಾಗುವಂತಿಲ್ಲ ಎಂದು ಆಸ್ಪತ್ರೆೆಗಳಿಗೆ ನಿರ್ದೇಶನ ನೀಡಲಾಗಿದೆ. ಚಿತಾಗಾರಗಳಲ್ಲಿ ಗರಿಷ್ಠ ಜನ ಮಿತಿ ನಿಯಮ ಪಾಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಚಿತಾಗಾರದ ವಿವರ:

Advertisement

Udayavani is now on Telegram. Click here to join our channel and stay updated with the latest news.

Next