Advertisement
ಆ.28ರ ಬೆಳಗ್ಗೆ 11 ಗಂಟೆಗೆ ಕೌನ್ಸಿಲ್ ಸಭೆ ಕರೆಯಲಾಗಿತ್ತು. ಕೆಲವು ಸದಸ್ಯರು ಸಭೆಗೆ ಹಾಜರಾಗಿದ್ದರು. ಆದರೆ, ಸಭೆಗೆ ಬಂದ ಉಪಮೇಯರ್ ರಾಮ್ ಮೋಹನ್ ರಾಜು ಸೆ.5ಕ್ಕೆ ಪಾಲಿಕೆಯ ಸಭೆ ಮುಂದೂಡಿಕೆ ಯಾಗಿದೆ ಎಂದು ಘೋಷಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್, ನಿಗದಿಯಾದ ಸಭೆ ದಿಢೀರ್ ಎಂದು ಹೇಗೆ ಮುಂದೂಡ ಲಾಗುತ್ತದೆ?, ಸರಿಯಾದ ಕಾರಣ ಕೊಡಿ. ಚುನಾವಣೆ ಬಗ್ಗೆ ಚರ್ಚೆ ಮಾಡುವುದಿದೆ ಎಂದರು. ಸಭೆಗೆ ಮೇಯರ್, ಆಯುಕ್ತರು ಹಾಗೂ ಆಡಳಿತ ಪಕ್ಷದ ನಾಯಕರೂ ಸೇರಿದಂತೆ ಯಾರೂ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಹಣ ಯಾರು ಕೊಡುತ್ತಾರೆ? : ಕೌನ್ಸಿಲ್ ಸಭೆ ಮುಂದೂಡಿಕೆ ಪೂರ್ವ ನಿಯೋಜಿತ. ಆಡಳಿತ ಪಕ್ಷದ ನಾಯಕರು ಸಭೆಗೆ ಹಾಜರಾಗಿಲ್ಲ. ಪಾಲಿಕೆ ಸದ್ಯರ ಅಧಿಕಾರ ಅವಧಿ ಮುಗಿಯುವ ಹಂತದಲ್ಲಿ ಸಭೆಯನ್ನು ಮುಂದೂಡಲಾಗಿದೆ. ಸಭೆ ನಡೆಸುವ ಆಸಕ್ತಿ ಇಲ್ಲದೆ ಇದ್ದಿದ್ದರೆ ಆ.27ಕ್ಕೆ ಸಭೆ ಮುಂದೂಡುವ ಬಗ್ಗೆ ಸೂಚನೆ ನೀಡಬೇಕಿತ್ತು. ಶುಕ್ರವಾರ ಕೌನ್ಸಿಲ್ ಸಭೆ ರದ್ದಾಗಿರುವುದರಿಂದ ಪಾಲಿಕೆಗೆ ಅಂದಾಜು 4 ಲಕ್ಷ ರೂ. ನಷ್ಟವುಂಟಾಗಿದೆ. ಪಾಲಿಕೆಗೆ ಉಂಟಾಗಿರುವ ನಷ್ಟಮೊತ್ತವನ್ನು ಮೇಯರ್ ಭರಿಸಬೇಕು ಎಂದು ವಿರೋಧ ಪಕ್ಷದ ಅಬ್ದುಲ್ ವಾಜಿದ್ ಆಗ್ರಹಿಸಿದರು.
ಚುನಾವಣೆ ಮುಂದೂಡಿಕೆ ಯತ್ನ: ಹೋರಾಟಕ್ಕೆ ನಿರ್ಧಾರ ಬೆಂಗಳೂರು: ಪಾಲಿಕೆಯ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸದೆ ಮುಂದೂಡುವ ಪ್ರಯತ್ನಗಳು ನಡೆಯುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನ ಮಾಜಿ ಮೇಯರ್‌ಗಳು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಸರ್ಕಾರ ಕೂಡಲೇ ಪಾಲಿಕೆಯ ಚುನಾವಣೆ ನಡೆಸುವ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ಸೆಪ್ಟಂಬರ್ ಎರಡನೇ ವಾರದಲ್ಲಿ ನ್ಯಾಯಾಲಯಕ್ಕೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇವೆ ಎಂದು ಮಾಜಿ ಮೇಯರ್‌ಗಳಾದ ಎಂ ರಾಮಚಂದ್ರಪ್ಪ ಮತ್ತು ಪಿ.ಆರ್. ರಮೇಶ್ ಎಚ್ಚರಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಹಾಗೂ ಮೀಸಲಾತಿ ಪಟ್ಟಿ ಪ್ರಕಟ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ಕೋರಿದೆ. ಇದರ ಪ್ರಕ್ರಿಯೆಗಳನ್ನು ನೋಡಿಕೊಂಡು ನಾವು ಮುಂದುವರಿಯುತ್ತೇವೆ ಎಂದು ರಮೇಶ್ ತಿಳಿಸಿದರು.
ಸೆ.5ಕ್ಕೆ ಪಾಲಿಕೆಯ ಮತ್ತೂಂದು ಸಭೆ ಇದೆ. ಕಡಿಮೆ ಅವ ಧಿಯಲ್ಲಿ ಎರಡು ಸಭೆ ಬೇಡ ಎಂದು ಮುಂದೂಡಿದ್ದೇವೆ. ಈಗಾಗಲೇ ಸಭೆ ಕರೆಯಲಾಗಿದ್ದರಿಂದ ಶಿಷ್ಠಾಚಾರದಂತೆ ಸಭೆ ಕರೆದು ಮುಂದೂಡಲಾಗಿದೆ. ಇದರಲ್ಲಿ ಯಾವ ಒಳಸಂಚೂ ಇಲ್ಲ. ಸೆ.5ಕ್ಕೆ ಪಾಲಿಕೆಯ ಕೊನೆಯ ಸಭೆ ನಡೆಯಲಿದೆ, –ಮುನೀಂದ್ರ ಕುಮಾರ್, ಆಡಳಿತ ಪಕ್ಷದ ನಾಯಕ