Advertisement

ಬಿಬಿಎಂಪಿ ಮೇಯರ್ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಆಯ್ಕೆ

09:45 AM Oct 03, 2019 | keerthan |

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿರುವ ಬಿಬಿಎಂಪಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಬಿಜೆಪಿ ಜೋಗುಪಾಳ್ಯ ವಾರ್ಡ್ ಕಾರ್ಪೋರೇಟರ್ ಆಗಿರುವ ಗೌತಮ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಿದೆ.

Advertisement

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗುರುಮೂರ್ತಿ ರೆಡ್ಡಿ ಅವರು ಕಣಕ್ಕಿಳಿಯಲಿದ್ದಾರೆ. ಗುರುಮೂರ್ತಿ ರೆಡ್ಡಿ ಎಚ್ ಎಸ್ ಆರ್ ಲೇಔಟ್ ವಾರ್ಡ್ ನ ಕಾರ್ಪೋರೇಟರ್.

ಕಳೆದ ನಾಲ್ಕು ವರ್ಷಗಳಿಂದ ವಿಪಕ್ಷ ನಾಯಕರಾಗಿದ್ದ ಪದ್ಮನಾಭ ರೆಡ್ಡಿಯವರು ಮೇಯರ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಗೌತಮ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 257 ಸ್ಥಾನಗಳಿದ್ದು, ಮ್ಯಾಜಿಕ್ ನಂಬರ್  129 ಆಗಿದೆ. ಸದ್ಯ ಬಿಜೆಪಿಯಲ್ಲಿ 125 ಸದಸ್ಯರಿದ್ದು, ಕಾಂಗ್ರೆಸ್ 104 ಸದಸ್ಯರಿದ್ದಾರೆ. ಜೆಡಿಎಸ್ 21 ಮತ್ತು ಇತರೆ 7 ಜನ ಸದಸ್ಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next