ಬೆಂಗಳೂರು: ಬಿಬಿಎಂಪಿಯಿಂದ ವೆಚ್ಚ ಮಾಡುವ ಪ್ರತಿ ಪೈಸೆ ಲೆಕ್ಕವನ್ನೂ ಸಾರ್ವಜನಿಕರಿಗೆ ನೀಡುತ್ತೇವೆ. ಇದರ ಮೊದಲ ಭಾಗವಾಗಿ ಕಾಮಗಾರಿಗಳ ವಿವರ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗಿದೆಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಪಾಲಿಕೆಯ ಅಧಿಕೃತ ವೆಬ್‌ಸೈಟ್ ಪರಿಷ್ಕೃತ ಮಾದರಿ ಹಾಗೂ ಕಾಮಗಾರಿಗಳ ವಿವರ ನೀಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿರುವ https://bbmp.gov.in/Citizenviewkannada.html ಲಿಂಕ್ ಅನ್ನುಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಮತ್ತು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್‌ಅವರು ಬಿಡುಗಡೆ ಮಾಡಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದಆಯುಕ್ತರು, ನಗರದಲ್ಲಿ ಪಾಲಿಕೆ ವತಿಯಿಂದಕೈಗೆತ್ತಿಕೊಳ್ಳುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ವೆಬ್‌ಸೈಟ್ ಅಪ್ ಡೇಟ್ ಮಾಡಲಾಗಿದ್ದು, ಮೊದಲ ಹಂತದಲ್ಲಿ2015ರ ಜೂನ್‌ನಿಂದ ಇಲ್ಲಿಯವರೆಗೆ ಪೂರ್ಣಗೊಂಡಿರುವ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರ ಲಭ್ಯವಿದೆ. ಮೊದಲ ಹಂತದಲ್ಲಿ2015ರಿಂದ ಇಲ್ಲಿಯವರೆಗೆಪೂರ್ಣಗೊಳಿಸಿರುವ ಪಾಲಿಕೆ ಕಾಮಗಾರಿಗಳ ಪೂರ್ಣ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ನಗರೋತ್ಥಾನ ಯೋಜನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ವಿವರಗಳು, ಹಾಲಿ ಚಾಲ್ತಿಯಲ್ಲಿರುವ ವಿವರಗಳು ಮತ್ತು ಪಾಲಿಕೆಯ ಬಜೆಟ್ ವಿವರಗಳನ್ನು ನೀಡುತ್ತೇವೆ ಎಂದರು.
ಪೈಸೆ – ಪೈಸೆ ಲೆಕ್ಕ ನೀಡ್ತೇವೆ: ಸಾರ್ವಜನಿಕರ ತೆರಿಗೆಹಣದಿಂದ ಪಾಲಿಕೆ ನಡೆಯುತ್ತಿದೆ. ಸಾರ್ವಜನಿಕರತೆರಿಗೆ ಹಣದ ಪ್ರತಿ ಪೈಸೆ ಲೆಕ್ಕವನ್ನೂ ಸಾರ್ವಜನಿಕರಿಗೆ ನೀಡುತ್ತೇವೆ. ಪಾಲಿಕೆಗೆ ನಿತ್ಯ ನೂರಾರು ಆರ್‌ಟಿಐ ಮೂಲಕ ಮಾಹಿತಿ ಕೇಳುತ್ತಾರೆ. ಸಾರ್ವಜನಿಕರು ಕೇಳುವ ಮುನ್ನ ನಾವೇ ಮಾಹಿತಿ ನೀಡುತ್ತೇವೆ ಎಂದರು. ಮಾಹಿತಿ ನೀಡಬೇಕಾಗಿರುವುದರಿಂದಅಧಿಕಾರಿಗಳು ಯಾವುದೇ ಒಂದು ನಿರ್ದಿಷ್ಟ ಕಾಮಗಾರಿಯ ದೃಢೀಕರಣ ಪತ್ರ ನೀಡಬೇಕಾದರೂ ಎಚ್ಚರಿಕೆ ವಹಿಸಬೇಕಾಗುತ್ತದೆ. ತಪ್ಪಾದರೆ ಈಗ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು. ಪಾಲಿ ಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ಅಪಾರ ಆಯುಕ್ತ ನಾಗರಾಜ್ ಶೇರೇಗಾರ್ ಇತರರಿದ್ದರು.
ಕಾಮಗಾರಿಗಳ ವಿವರ ನೋಡುವುದು ಹೇಗೆ? :
ಪಾಲಿಕೆಯ ವೆಬ್‌ಸೈಟ್‌ನ https://bbmp.gov.in (citizenviewkannada.html) ನಲ್ಲಿ ನಾಗರಿಕ ವೀಕ್ಷಣೆ ಎಂಬ ಆಯ್ಕೆಯ ಮೇಲೆಕ್ಲಿಕ್ ಮಾಡಿದರೆ, ರಸ್ತೆ ಇತಿಹಾಸ, ಬಿಬಿಎಂಪಿ ವರ್ಕ್ ಬಿಲ್ ಹಾಗೂ ಆಡಳಿತಾಧಿಕಾರಿ ನಡಾವಳಿ ಎಂಬ ಆಯ್ಕೆಗಳು ಲಭ್ಯವಾಗಲಿವೆ. ಇದರಲ್ಲಿ ಬಿಬಿಎಂಪಿ ವರ್ಕ್‌ನ ಮೇಲೆಕ್ಲಿಕ್ ಮಾಡಿದರೆ ವಾರ್ಡ್ ಸಂಖ್ಯೆ ಮತ್ತುಕಾಲಂತೆರೆದುಕೊಳ್ಳಲಿದ್ದು, ಸಾರ್ವಜನಿಕರು ಆಯಾ ವಾರ್ಡ್ ವ್ಯಾಪ್ತಿಯಕಾಮಗಾರಿ ವಿವರಪಡೆದುಕೊಳ್ಳಬಹುದು. ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಲು ಅವರ ಹೆಸರುಅಥವಾ ವಿವರ ನೀಡುವುದು ಕಡ್ಡಾಯವಲ್ಲ.
ಸಾರ್ವಜನಿಕರ ಸಹಭಾಗಿತ್ವ ಹಾಗೂ ಪಾರದರ್ಶಕತೆಕಾಪಾಡಿಕೊಳ್ಳುವ ಉದ್ದೇಶದಿಂದ ಪಾಲಿಕೆಯ ಅಧಿಕೃತವೆಬ್‌ಸೈಟ್‌ಗೆ ಸಿಟಿಜನ್ ವೀವ್ ಎಂಬಹೊಸ ಲಿಂಕ್ ಸೇರ್ಪಡೆ ಮಾಡಿದ್ದೇವೆ.
– ಗೌರವ್‌ಗುಪ್ತ, ಬಿಬಿಎಂಪಿ ಆಡಳಿತಾಧಿಕಾರಿ