ಬೆಂಗಳೂರು: ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೆ ಮದ್ಯಪಾನ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆಹಾರ ಪದ್ಧತಿಯಲ್ಲೂ ಬದಲಾವಣೆ ಬೇಕಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.
ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲು ಸ್ವತಃ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಪಾಲಿಕೆಯ ವಿಶೇಷ ಆಯುಕ್ತರು ಕೋವಿಡ್ ಲಸಿಕೆ ಪಡೆದರು.
ಇದನ್ನೂ ಓದಿ:ಜೋ ಬೈಡೆನ್ ಜೊತೆ ಮೋದಿ ಮಾತುಕತೆ: ದ್ವಿಪಕ್ಷೀಯ ಬಾಂಧವ್ಯ ವೃದ್ದಿಯ ಕುರಿತು ಚರ್ಚೆ
ಈ ವೇಳೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಮಾರ್ಗಸೂಚಿಯಲ್ಲಿ ಮದ್ಯಪಾನ ಮಾಡಬಾರದು ಎನ್ನುವ ಉಲ್ಲೇಖ ಎಲ್ಲಿಯೂ ಇಲ್ಲ ಎಂದರು.
ನಗರದಲ್ಲಿ ಎರಡನೇ ಹಂತದ ಲಸಿಕೆ ಅಭಿಯಾನ ಇಂದು ಪ್ರಾರಂಭವಾಗಿದೆ. ಆರಂಭಿಕವಾಗಿ ನಗರದ 144 ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಎರಡನೇ ಹಂತದಲ್ಲಿ ಒಟ್ಟು 60 ಸಾವಿರ ಜನ ಕೋವಿಡ್ ಲಸಿಕೆಗೆ ಹೆಸರು ದಾಖಲಿಸಿಕೊಂಡಿದ್ದಾರೆ. ಕೋವಿಡ್ ಲಸಿಕೆ ಮೊದಲನೇ ಹಂತದಲ್ಲಿ ಇನ್ನೂ 44% ಬಾಕಿ ಇದೆ. ಎರಡನೇ ಹಂತದ ಜೊತೆಗೆ ಮೊದಲ ಹಂತದಲ್ಲಿ ಬಾಕಿ ಉಳಿದವರಿಗೂ ಕೋವಿಡ್ ಲಸಿಕೆ ನೀಡಲಾಗುವುದು.
ಇದನ್ನೂ ಓದಿ: ಕೆಂಪುಕೋಟೆ ಗಲಭೆ ಪ್ರಕರಣ: ನಟ ದೀಪ್ ಸಿಧು ಬಂಧಿಸಿದ ದಿಲ್ಲಿ ಪೊಲೀಸರು
ಪ್ರತಿ ಕೇಂದ್ರಗಳಲ್ಲಿ 150-200 ಮಂದಿಗೆ ಲಸಿಕೆ ಹಂಚಿಕೆ ಆಗುವ ನಿರೀಕ್ಷೆಯಿದೆ. ಆಯುಕ್ತ ಮಂಜುನಾಥ್ ಪ್ರಸಾದ್ ಸೂಚನೆ ಮೇರೆಗೆ ಬಿಬಿಎಂಪಿಯಲ್ಲೇ ನಾಲ್ಕು ವ್ಯಾಕ್ಸಿನ್ ಹಂಚಿಕೆ ಸೈಟ್ ಮಾಡಲಾಗಿದೆ. ಈ ಬಾರಿ ಬಿಬಿಎಂಪಿ ಕಾರ್ಮಿಕರಿಗೆ, ಜೊತೆಗೆ ಇತರೆ ಇಲಾಖೆಯ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿದರು.