Advertisement

ಬಿಬಿಎಂಪಿ ಬಜೆಟ್‌ ಹೀಗಿದ್ದರೆ ಚೆಂದ…

04:09 PM Mar 25, 2017 | |

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2017-18ನೇ ಸಾಲಿನ ಬಜೆಟ್‌ ಇಂದು ಮಂಡನೆಯಾಗಲಿದ್ದು, ಬಜೆಟ್‌ ಮೇಲೆ ಬೆಂಗಳೂರಿನ ಜನತೆ ಅಪಾರ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣ, ಮೂಲಸೌಕರ್ಯಗಳ ಅಭಿವೃದ್ಧಿ, ಪಾದಚಾರಿ ಮಾರ್ಗ ನಿರ್ಮಾಣ, ಕೆರೆಗಳ ಸಂರಕ್ಷಣೆ, ರಸ್ತೆಗಳ ಉನ್ನತೀಕರಣ, ಪಾಲಿಕೆಯ ಶಾಲಾ-ಕಾಲೇಜು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ… ಹೀಗೆ ಹತ್ತಾರು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಪಾಲಿಕೆಯಲ್ಲಿ ಇದೇ ಮೊದಲ ದಾಖಲೆಯ ಗಾತ್ರದ ಬಜೆಟ್‌ ಮಂಡನೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಅದರ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳು ಜಾರಿಯಾಗುತ್ತವೆ ಎಂಬ ನಿರೀಕ್ಷೆಯಲ್ಲಿ ನಾಗರಿಕರಿದ್ದಾರೆ. ಈಗಾಗಲೇ ಸಾವಿರಾರು ನಾಗರಿಕರು ಬಜೆಟ್‌ನಲ್ಲಿ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಪತ್ರ ಹಾಗೂ ಆನ್‌ಲೈನ್‌ ಮೂಲಕ ಪಾಲಿಕೆಗೆ ಸಲಹೆಗಳನ್ನು ನೀಡಿದ್ದಾರೆ. 

Advertisement

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ, ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಪಾಲಿಕೆ ಸಂಪನ್ಮೂಲ ಕ್ರೋಡೀಕರಣ, ವಾರ್ಡ್‌ ಮಟ್ಟದಲ್ಲಿನ ಉದ್ಯಾನಗಳು ಹಾಗೂ ಕೆರೆಗಳ ಅಭಿವೃದ್ಧಿ, ಗುಂಡಿಮುಕ್ತ ರಸ್ತೆಗಳ ನಿರ್ಮಾಣ, ನೀರಿನ ಮೂಲಗಳ ಸಂರಕ್ಷಣೆ, ಮಳೆ ನೀರು ಸಂಗ್ರಹ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಗೆ ಆದ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಹೆಚ್ಚಿನ ನಾಗರಿಕರು ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ.  

ಕೆರೆ, ಉದ್ಯಾನಗಳ ಅಭಿವೃದ್ಧಿ 
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳು ಹಾಗೂ ಉದ್ಯಾನಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದು, ಕೆರೆಗೆ ತ್ಯಾಜ್ಯ ನೀರು ಸೇರಿದಂತೆ ಅಗತ್ಯ ಕ್ರಮಕೈಗೊಳ್ಳುವುದು. ಜತೆಗೆ ಉದ್ಯಾನ ಹಾಗೂ ಕೆರೆಯ ಸುತ್ತ ತಂತಿಬೇಲಿ ಅಳವಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಲಿನ ಬೆಂಚು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಸೇರಿ ಕೆರೆಯ ಸುತ್ತ ತಂಬಿಬೇಲಿ ಅಳವಡಿಕೆ ಮಾಡುವ ಮೂಲಕ ಕೆರೆಯನ್ನು ಸಂರಕ್ಷಣೆಗೆ ಒತ್ತು ನೀಡುವುದು.  

ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಒತ್ತು 
ಘನತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫ‌ಲವಾಗಿದ್ದು, ಈಗಾಗಲೇ ಪಾಲಿಕೆಯಲ್ಲಿರುವ ತ್ಯಾಜ್ಯ ಸಂಸ್ಕರಣೆ ಘಟಕಗಳ ಮುಂದೆ ಪ್ರತಿಭಟನೆಗಳು ಆರಂಭವಾಗಿವೆ. ಹೀಗಾಗಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿ ಮಾಡಲು ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಮಸ್ಯೆಗಳ ನಿವಾರಣೆ ಮುಂದಾಗುವುದು. ತ್ಯಾಜ್ಯವನ್ನು ಗೊಬ್ಬರವಾಗಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ನೀಡುವುದು.  

ಪರಿಸರ ಸಂರಕ್ಷಣೆಗೆ ಒತ್ತು 
ಪ್ರತಿವರ್ಷ ವಾರ್ಡ್‌ನಲ್ಲಿ ಲಕ್ಷಾಂತರ ಮರಗಳನ್ನು ನೆಡುವುದಾಗಿ ಘೋಷಣೆ ಮಾಡಲಾಗುತ್ತಿದೆ. ಆದರೆ ಈವರೆಗೆ ಯಾವುದೇ ವಾರ್ಡ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಈವರೆಗೆ ಚಾಲನೆ ಸಿಕ್ಕಿಲ್ಲ. ನಗರದಲ್ಲಿ ಮಾಲಿನ್ಯ ಪ್ರಮಾಣದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಸರ ಮಾಲಿನ್ಯ ತಡೆಗೆ ಹೆಚ್ಚಿನ ಕಾರ್ಯಕ್ರಮ ಕೈಗೆತ್ತಿಕೊಳ್ಳುವ ಮೂಲಕ ನಗರದ ಉದ್ಯಾನ ನಗರ ಪಟ್ಟವನ್ನು ಉಳಿಸಿಕೊಂಡು ಹೋಗಬೇಕು.  

Advertisement

ಪಾದಚಾರಿಗಳಿಗೆ ಪ್ರಾಮುಖ್ಯತೆ 
ನಗರದಲ್ಲಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಸತಿ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡುವುದು ಮತ್ತು ನಗರ ಭಾಗದಲ್ಲಿ ಪಾದಚಾರಿಗಳ ಅನುಕೂಲಕ್ಕೆ ಝೀಬ್ರಾ ಕ್ರಾಸಿಂಗ್‌ ಸೌಲಭ್ಯವನ್ನು ಒದಗಿಸುವುದು ಮುಖ್ಯ.  

ಸಮುದಾಯ ಪಾಲ್ಗೊಳ್ಳುವಿಕೆ ಒತ್ತು 
ವಾರ್ಡ್‌ಮಟ್ಟದಲ್ಲಿ ಸಮುದಾಯಗಳನ್ನು ಸೇರಿಸಿಕೊಂಡು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಪದ್ಧತಿ ಜಾರಿಗೆ ಬರಬೇಕು. ವಾರ್ಡ್‌ ಮಟ್ಟದ ಸಮಿತಿಗಳಿಗೆ ಅನುದಾನ ನೀಡುವ ಮೂಲಕ ವಾರ್ಡ್‌ಗಳಲ್ಲಿ ತಮಗೆ ಬೇಕಾದ ಕಾಮಗಾರಿ ಕೈಗೆತ್ತಿಕೊಳ್ಳುವ ಅಕವಾಶವನ್ನು ನೀಡಬೇಕು. ನಾಗರಿಕ ಭದ್ರತಾ ದೃಷ್ಟಿಯಿಂದ ವಾರ್ಡ್‌ನ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಬೇಕು.  

ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಮಹತ್ವ 
ಬಿಬಿಎಂಪಿ ಬಜೆಟ್‌ನಲ್ಲಿ ಮಾನವ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದ್ದು, ದುಸ್ಥಿತಿಯಲ್ಲಿರುವ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು. ಜತೆಗೆ ಪ್ರತಿ ಆಸ್ಪತ್ರೆಯಲ್ಲಿಯೂ ತಜ್ಞ ವೈದ್ಯರು ಮತ್ತು ಪ್ರಯೋಗಾಲಯ ವ್ಯವಸ್ಥೆಯನ್ನು ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕು.  

ನಾಗರಿಕರ ಇತರೆ ನಿರೀಕ್ಷೆಗಳು 
– ಬಸ್‌ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ 
– ಮಕ್ಕಳಿಗೆ ಆಟವಾಡಲು ಬಿಬಿಎಂಪಿ ಖಾಲಿ ಜಾಗಗಳನ್ನು ಮೈದಾನಗಳಾಗಿ ಪರಿವರ್ತನೆ 
– ವಾರ್ಡ್‌ಮಟ್ಟದಲ್ಲಿನ ಕಿರು ಚರಂಡಿಗಳಲ್ಲಿನ ಹೂಳೆತ್ತುವುದು 
– ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ಎಲ್‌ಇಡಿ ಬಲ್ಬ್ ಅಳವಡಿಕೆ 
– ವಾರ್ಡ್‌ನ ಎಲ್ಲ ರಸ್ತೆಗಳಿಗೆ ಡಾಂಬರೀಕರಣ 
– ಪ್ರತಿವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ 
– ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿ, ಶಿಕ್ಷಕರ ನೇಮಕ 
– ಹಿರಿಯ ನಾಗರಿಕರಿಗೆ ಬಿಸಿಯೂಟ ಸೇವೆ 

Advertisement

Udayavani is now on Telegram. Click here to join our channel and stay updated with the latest news.

Next