Advertisement

ಬಿಬಿಎಂಪಿ ಬಜೆಟ್ ಗುಪ್ತ್ ಗುಪ್ತ್ : ನಾಳೆಯೊಳಗೆ ಮಂಡನೆಯಾಗುತ್ತಾ ಬಜೆಟ್ ?

12:34 PM Mar 30, 2022 | Team Udayavani |

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಯಾವಾಗ ಎಂಬುದು ಯಕ್ಷ ಪ್ರಶ್ನೆಯಂತಾಗಿದ್ದು, ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದೆಡೆ ಹಣಕಾಸು ವರ್ಷ ಮುಗಿಯುತಿದ್ದರೂ ಪಾಲಿಕೆ ಬಜೆಟ್ ಬಗ್ಗೆ ಎಲ್ಲವೂ ಗುಪ್ತ್ ಗುಪ್ತ್ ಎಂಬಂತಾಗಿದೆ.

Advertisement

ಬುಧವಾರ ಬಜೆಟ್‌ ಮಂಡನೆ ಎಂದು ಹೇಳಲಾಗಿತ್ತಾದರೂ ಯಾವುದೇ ಸಿದ್ಧತೆ ನಡೆದಿಲ್ಲ. ಹೀಗಾಗಿ, ಬಜೆಟ್‌ ಕುರಿತು ಆಯುಕ್ತರಾಗಲಿ, ಆಡಳಿತಾಧಿಕಾರಿಯಾಗಲಿ ಪ್ರತಿಕ್ರಿಯೆ ನೀಡಿಲ್ಲ. ಮಾರ್ಚ್‌ 31 ರೊಳಗೆ ಬಜೆಟ್‌ ಮಂಡಿಸಲೇಬೇಕಿರುವುದರಿಂದ ಕೊನೇ ಕ್ಷಣದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಪಾಲಿಕೆ ಬಜೆಟ್‌ ಮಂಡನೆ ವಿಚಾರದಲ್ಲಿ ಎಲ್ಲರನ್ನೂ ಕತ್ತಲಲ್ಲಿ ಇಡಲಾಗಿದೆ ಎಂದು ಪಾಲಿಕೆಯ ಮಾಜಿ ಸದಸ್ಯರು ಹಾಗೂ ಮೇಯರ್‌ಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಬಜೆಟ್‌ ಸಿದ್ಧತೆಗೆ ಮುಂಚೆ ಸಲಹೆ ಪಡೆಯದ ಬಗ್ಗೆ ಮಾಜಿ ಮೇಯರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದು, ನಗರದ ಅಭಿವೃದದ್ಧಿ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಅವರಿಗೆ ತೋಚಿದಂತೆ ಬಜೆಟ್‌ ಮಂಡಿಸಲು ಮುಂದಾಗಿದ್ದಾರೆ
ಎಂದು ಆಕ್ರೋಶ ಹೊರಹಾಕಿದ್ದಾರೆ.

ಜನಪ್ರತಿನಿಧಿಗಳಿಲ್ಲದೆ ಸತತ ಎರಡನೇ ಬಾರಿಗೆ ಬಜೆಟ್‌ ಮಂಡನೆಗೆ ಪಾಲಿಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ಹೊಸ ಯೋಜನೆಗೆ ಕೈ ಹಾಕದೆ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅನು ದಾನಹೊಂದಿಸಿಕೊಂಡುಸಂಪನ್ಮೂಲಕ್ರೋಢೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ವಾಸ್ತವಿಕ ಬಜೆಟ್‌ ಮಂಡನೆ ಮಾಡಲಾಗುವುದು ಎಂದು ಹೇಳಲಾಗಿತ್ತು.

ಇದನ್ನೂ ಓದಿ : ಲಾಕ್‌ಡೌನ್‌ನಿಂದ ಶೇ. 41ರಷ್ಟು ಜನರಿಗೆ ಉದ್ಯೋಗ ನಷ್ಟ; ಅಜೀಂ ಪ್ರೇಮ್‌ ಜೀ ವಿವಿ

ಬಜೆಟ್‌ ಗಾತ್ರ ಹೆಚ್ಚಳ
2021-22ನೇ ಸಾಲಿನಲ್ಲಿ ಪಾಲಿಕೆ ಬಜೆಟ್‌ ಗಾತ್ರ 9,286,80ಕೋಟಿ ರೂ. ಆಗಿತ್ತು.2022-23 ನೇ ಸಾಲಿಗೆ9,951,8ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.ಕಾಯ್ದೆ ಪ್ರಕಾರ
ಬಿಬಿಎಂಪಿ ಬಜೆಟ್‌ ಅನ್ನು ಮುಂದಿನ ಆರ್ಥಿಕ ವರ್ಷರಾಂಭಕ್ಕಿಂತಕನಿಷ್ಠ ಮೂರು ವಾರಗಳ ಮುಂಚೆ ಅಂಗೀಕರಿಸಬೇಕು. ಈ ಕಾಯ್ದೆಯ ಪ್ರಕಾರ ಮಾ.10ರ ಒಳಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ ಮಂಡನೆ ಆಗಬೇಕಾಗಿತ್ತು.

Advertisement

ಪಾಲಿಕೆಯ ಅಧಿಕಾರಿಗಳು
ಬಜೆಟ್‌ ಸಂಬಂಧ ಮಾಜಿ ಮೇಯರ್‌, ಉಪ ಮೇಯರ್‌ ಗಳನ್ನುಕರೆದು ಸಭೆ ಮಾಡಿಲ್ಲ. ನಾವು ಈಗಾಗಲೇ ಹಲವು ಬಜೆಟ್‌ ಮಂಡಿಸಿದ್ದೇವೆ. ಆದರೆ ನಮ್ಮನ್ನು ಪಾಲಿಕೆ ಅಧಿಕಾರಿಗಳ
ನಿರ್ಲಕ್ಷಿಸಿರುವುದು ಸರಿಯಲ್ಲ.
– ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next