Advertisement

ವರ್ಗಾವಣೆ ಬೈಲಾ ತಂದ ಪಾಲಿಕೆ

12:43 AM Feb 16, 2020 | Lakshmi GovindaRaj |

ಬೆಂಗಳೂರು: ಸರ್ಕಾರದಿಂದ ಎರವಲು ಸೇವೆ ಮೇಲೆ ಪಾಲಿಕೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರು ಇನ್ನುಮುಂದೆ ಪಾಲಿಕೆಯ ಖಾಲಿ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಪಾಲಿಕೆ ಆಯ್ದ ಹುದ್ದೆಗಳಿಗೆ ಸರ್ಕಾರದಿಂದ ಎರವಲು ಸೇವೆ ಆಧಾರದಲ್ಲಿ ನೌಕರರು ನೇಮಕವಾಗುತ್ತಿದ್ದು, ಇದರಿಂದ ಪಾಲಿಕೆ ಮೂಲ ಸಿಬ್ಬಂದಿ ಕರ್ತವ್ಯ ಹಾಗೂ ಬಡ್ತಿಗೆ ಅಡ್ಡಿಯಾಗುತ್ತಿದೆ.

Advertisement

ಇದು ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಡುವುದು ತಪ್ಪಿಸಲು ಪಾಲಿಕೆಯು ನೌಕರರ ವರ್ಗಾವಣೆ ಬೈಲಾ ರಚಿಸಿದೆ. ಬೈಲಾದಲ್ಲಿ ಎರವಲು ಸೇವೆಯ ಮೇಲೆ ಕೆಲಸ ಮಾಡಲು ಬರುವವರು ನಿರ್ದಿಷ್ಟ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಅನುºಕುಮಾರ್‌, ಎರವಲು ಸೇವೆ ಮೇಲೆ ಪಾಲಿಕೆ ಕೆಲಸ ಮಾಡಲು ಇಚ್ಛಿಸುವ ನೌಕರರು ಖಾಲಿ ಹುದ್ದೆಗಳಿಗಷ್ಟೇ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಸೇರ್ಪಡೆ ಮಾಡಿ ಮಾರ್ಗಸೂಚಿ ರೂಪಿಸಲಾಗಿದೆ.

ಆಡಳಿತಾತ್ಮಕ ಸುಧಾರಣೆ ಹಾಗೂ ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶಿಫಾರಸು ಆಧಾರದಲ್ಲಿ ವರ್ಗಾವಣೆ ಮಾಡುವುದಕ್ಕೆ ಇತ್ತೀಚೆಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ವರ್ಗಾವಣೆ ನೀತಿ ಮುಖ್ಯಾಂಶಗಳು: ಬಿಬಿಎಂಪಿಯ ಕಾಯಂ ಅಧಿಕಾರಿ ಅಥವಾ ನೌಕರರಿಗೆ, ಸೇವಾ ಹಿರಿತನ ಹೊಂದಿರುವವರಿಗೆ ವರ್ಗಾವಣೆ ವೇಳೆ ಆದ್ಯತೆ ಮಂಜೂರಾದ ಹುದ್ದೆಗಳಲ್ಲಿ ವರ್ಗಾವಣೆ ಶೇ.15 ಮೀರದಂತೆ ನೋಡಿಕೊಳ್ಳುವುದು ವರ್ಗಾವಣೆ ನೀತಿಯಲ್ಲಿ ಸೇವಾ ಅವಧಿಯನ್ನು ನಿಗದಿ ಮಾಡಿದ್ದು, ಈ ಅವಧಿಗೆ ಮುನ್ನ ವರ್ಗಾವಣೆ ಮಾಡಲು ಅವಕಾಶ ಇರುವುದಿಲ್ಲ

Advertisement

ವಲಯವಾರು ನೌಕರರ ಅದಾಲತ್‌
ಬೆಂಗಳೂರು: ಬಿಬಿಎಂಪಿ ಸಿಬ್ಬಂದಿಗೆ ನಿವೃತ್ತಿ ದಿನದಂದೇ ಪಾಲಿಕೆಯಿಂದ ನೀಡುವ ಸೌಲಭ್ಯಗಳು ಸರಳವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ವಲಯವಾರು “ನೌಕರರ ಅದಾಲತ್‌’ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅನುºಕುಮಾರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿ ಹೊಂದಿರುವ ನೌಕರರು ತಮ್ಮ ಸೇವೆ ಪಡೆದುಕೊಳ್ಳಲು ಪಾಲಿಕೆಯ ಕೇಂದ್ರ ಕಚೇರಿಗೆ ತಿಂಗಳು ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ನೌಕರರ ಅದಾಲತ್‌ ನಡೆಸಲಾಗುತ್ತಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಪಾಲಿಕೆ ಎಂಟು ವಲಯದ “ಡಿ’ ಗ್ರೂಪ್‌ನ ನೌಕರರ ಅದಾಲತ್‌ ನಡೆಸಲಾಗಿದ್ದು, ಅದಾಲತ್‌ನಲ್ಲಿ 1,917 “ಡಿ’ ಗ್ರೂಪ್‌ ಸಿಬ್ಬಂದಿಯ ಎಚ್‌ಆರ್‌ಎಂಎಸ್‌, ವೈದ್ಯಕೀಯ ಸೌಲಭ್ಯ, ಸೇವಾವಧಿ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ಇನ್ನು ಮುಂದಿನ ದಿನಗಳಲ್ಲಿ “ಬಿ’ ಹಾಗೂ “ಸಿ’ ಗ್ರೂಪ್‌ ನೌಕರರ ಅದಾಲತ್‌ ನಡೆಸುವ ಚಿಂತನೆ ಇದೆ ಎಂದರು.

ಮುಂದಿನ ಎರಡು ಅಥವಾ ಮೂರು ತಿಂಗಳು ಈ ರೀತಿ ಅದಾಲತ್‌ ನಡೆಸಿದರೆ. ಬಿಬಿಎಂಪಿಯ ಎಲ್ಲ ಅಧಿಕಾರಿ ಸಿಬ್ಬಂದಿಗೆ ಸಂಬಂಧಿಸಿದ ಆಡಳಿತಾತ್ಮಕ ಸಮಸ್ಯೆ ಪರಿಹಾರಗೊಳ್ಳಲಿದೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

ನಿಗದಿತ ಕನಿಷ್ಠ ಸೇವಾವಧಿ
ನೌಕರರು ಸೇವಾವಧಿ
ಎ ಮತ್ತು ಬಿ ಗ್ರೂಪ್‌ 2 ವರ್ಷ
ಸಿ ಗ್ರೂಪ್‌ 3 ವರ್ಷ
ಡಿ ಗ್ರೂಪ್‌ 5 ವರ್ಷ

Advertisement

Udayavani is now on Telegram. Click here to join our channel and stay updated with the latest news.

Next