Advertisement

BBL: ‘ಅಪಾಯಕಾರಿ’ ಪಿಚ್‌ ಎಂದು PRS-MLR ಪಂದ್ಯವೇ ರದ್ದು!

06:53 PM Dec 10, 2023 | Team Udayavani |

ಜಿಲಾಂಗ್(ಆಸ್ಟ್ರೇಲಿಯ): ಇಲ್ಲಿನ ಸೈಮಂಡ್ಸ್ ಸ್ಟೇಡಿಯಂ ಕ್ರಿಕೆಟ್ ಮೈದಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಬಿಗ್ ಬ್ಯಾಷ್ ಲೀಗ್ ಪಂದ್ಯವನ್ನೇ ಸುರಕ್ಷತೆಯ ಕಾರಣದಿಂದ ಭಾನುವಾರ ರದ್ದುಗೊಳಿಸಲಾಗಿದೆ.

Advertisement

ಸ್ಕಾರ್ಚರ್ಸ್‌ನ ಸ್ಕೋರ್ 6.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 30 ಆಗಿತ್ತು, ತೀವ್ರ ತರದ ಬೌನ್ಸ್ ಕಾರಣ ಆಟವನ್ನು ನಿಲ್ಲಿಸಲಾಯಿತು. ಅಂತಿಮವಾಗಿ ಪಂದ್ಯವನ್ನೇ ರದ್ದು ಮಾಡಲಾಯಿತು. ಅಸುರಕ್ಷಿತ ಪಿಚ್ ಪರಿಸ್ಥಿತಿಗಳು ಪಂದ್ಯವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದು BBL ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.

ಪಿಚ್ ಆಘಾತಕಾರಿ ಯಾಕೆ?
ರೆನೆಗೇಡ್ಸ್ ತಂಡದ ಪೇಸರ್ ವಿಲ್ ಸದರ್‌ಲ್ಯಾಂಡ್ ಅವರ ಮೂರು ಎಸೆತಗಳು ಎಲ್ಲಾ ಮೂರು ಸಂದರ್ಭಗಳಲ್ಲಿ ಜೋಶ್ ಇಂಗ್ಲಿಸ್ ಅವರನ್ನು ಬೆಚ್ಚಿ ಬೀಳಿಸುವ ಮೂರು ವಿಭಿನ್ನ ರೀತಿಯ ಬೌನ್ಸ್‌ಗಳನ್ನು ಹೊಂದಿದ್ದವು.ಕೀಪಿಂಗ್ ಮಾಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅವರ ಮುಖಭಾವವೇ ವಿಚಿತ್ರವಾಗಿತ್ತು. ಈ ರೀತಿಯ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ತುಂಬಾ ಅಪಾಯಕಾರಿ ಮತ್ತು ಅಂಪೈರ್‌ಗಳು ಏನಾದರೂ ಸಂಭವಿಸುವ ಮೊದಲು ಪಂದ್ಯ ನಿಲ್ಲಿಸುವ ನಿರ್ಧಾರ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ.

“ಮುಂಚಿನ ದಿನ ಭಾರಿ ಮಳೆಯಾಗಿದ್ದು, ಇಂದು ನಡೆದಿದ್ದು ದುರದೃಷ್ಟಕರವಾಗಿದೆ. ಸ್ವಲ್ಪ ಅಪಾಯಕಾರಿಯಾದ ಕೆಲವು ಸಂಗತಿಗಳು ನಡೆಯುತ್ತಿವೆ” ಎಂದು ಆರನ್ ಫಿಂಚ್ ಅಧಿಕೃತ ಪ್ರಸಾರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next