ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮತ್ತೆ ದೈಹಿಕ ಹಲ್ಲೆಗಳು ನಡೆದಿದೆ.
ಸೀಸನ್ 11 ರ ಆರಂಭದಲ್ಲಿ ರಂಜಿತ್ – ಜಗದೀಶ್ ನಡುವೆ ದೈಹಿಕವಾಗಿ ಹಲ್ಲೆ ನಡೆದ ಘಟನೆಗೆ ವೀಕ್ಷಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂಥದ್ದೇ ಘಟನೆ ಮತ್ತೊಮ್ಮೆ ನಡೆದಿದೆ.
ಈ ವಾರ ರಜತ್ ಹಾಗೂ ಧನರಾಜ್ ನಡುವೆ ನಾಮಿನೇಷನ್ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ಧನರಾಜ್ ಅವರು ರಜತ್ ಅವರನ್ನು ನಾಮಿನೇಟ್ ಮಾಡಿದಾಗ ನೀನು ಮಗುವೆಂದು ರಜತ್ ಹೇಳಿದ್ದರು. ಇದಾದ ನಂತರ ಧನರಾಜ್ ರಜತ್ ಅವರಿಗೆ ‘ಅಂಕಲ್ ಅಂಕಲ್’ ಎಂದು ಕೆನ್ನೆ ಮುಟ್ಟಿದ್ದು ರಜತ್ ಅವರ ಸಿಟ್ಟಿಗೆ ಕಾರಣವಾಗಿತ್ತು.
ವಾರದ ಕಳಪೆ ಆಟದ ವಿಚಾರಕ್ಕೆ ಧನರಾಜ್ ಅವರು ಇದೇ ಕಾರಣವನ್ನು ನೀಡಿ ರಜತ್ ಅವರಿಗೆ ಕಳಪೆ ಕೊಟ್ಟಿದ್ದಾರೆ. ಆದರೆ ಇದೇ ಮಾತು ರಜತ್ ಅವರ ಕೋಪವನ್ನು ನೆತ್ತಿಗೇರಿಸಿದೆ.
ರಜತ್ ಅವರು ಕೈಕಾಲು ಮುರಿಯುತ್ತೇನೆ ಅಂತಾರೆ. ಬೆದರಿಕೆ ಹಾಕುವ ರೀತಿ ಇರುತ್ತದೆ. ಹಾಗಾಗಿ ಅವರು ಕಳಪೆ ಎಂದು ಧನರಾಜ್ ಹೇಳಿದ್ದಾರೆ.
ನೀವು ಮುಖಕ್ಕೆ ಮುಟ್ಟಿದ್ದು ಸಾಫ್ಟ್ ಆಗಿರಲಿಲ್ಲವೆಂದು ರಜತ್ ಹೇಳಿದ್ದು, ನನಗೆ ಗೊತ್ತಿದೆ ಅದು ಸಾಫ್ಟ್ ಆಗಿತ್ತು ಧನರಾಜ್ ಹೇಳಿದ್ದಾರೆ.
ನಿನ್ನೆ ಹುಟ್ಟಿ ಇವತ್ತು ಬಿಗ್ ಬಾಸ್ ಗೆ ಬಂದಿಲ್ಲ. ನನಗೆ ಬಂದಿದ್ದ ಕೋಪಕ್ಕೆ ನಿನ್ನ ಮುಖ ಮೂತಿ ಹೊಡೆದೇ ಆಚೆ ಹೋಗಬೇಕಿತ್ತು ಎಂದು ರಜತ್ ಹೇಳಿದ್ದಾರೆ.
ಮುಖ ಮೂತಿ ಹೊಡಿತೀನಿ ಹೇಳಿದ್ರಲ ಈಗ ಹೊಡಿಯಿರಿ ಎಂದು ಧನರಾಜ್ ಹೇಳಿದ್ದು, ತಾಕತ್ ಇದ್ರೆ ಈಗ ಮುಟ್ಟೋ ಎಂದು ರಜತ್ ಧನರಾಜ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಉಳಿದ ಸ್ಪರ್ಧಿಗಳು ರಜತ್ ಅವರನ್ನು ಹಿಡಿಯಲು ಯತ್ನಿಸಿದ್ದಾರೆ.