ಬೆಂಗಳೂರು: ದೊಡ್ಮನೆ ಆಟ ಬಿಗ್ ಬಾಸ್ ಕನ್ನಡ -11 (Bigg Boss Kannada-11) ರ ಮನೆಗೆ ನಾಲ್ವರು ಎಂಟ್ರಿ ಆಗಿದ್ದಾರೆ.
ಇಬ್ಬರು ಕಿರುತೆರೆ ನಟಿಯರಾದ ಭವ್ಯಾ ಗೌಡ, ಯಮುನಾ ಶ್ರೀನಿಧಿ ಹಾಗೂ ಯೂಟ್ಯೂಬರ್ ಧನರಾಜ್ ಆಚಾರ್ ಅವರು ಎಂಟ್ರಿ ಆಗಿದ್ದಾರೆ.
ಸ್ಪರ್ಧಿಗಳು ಸ್ವರ್ಗ – ನರಕದ ಮನೆಯನ್ನು ನೋಡಿ ಬಿಗ್ ಬಾಸ್ 11ರ ಹೊಸ ಅನುಭವವನ್ನು ಪಡೆದಿದ್ದಾರೆ.
ಕಿರುತೆರೆ ನಟಿ ಗೌತಮಿ ಜಾಧವ್ ಅವರು ‘ಬಿಗ್ ಬಾಸ್’ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ. ಖಡಕ್ ಡ್ಯಾನ್ಸ್ ಮೂಲಕ ಬಿಗ್ ಬಾಸ್ ವೇದಿಕೆ ಎಂಟ್ರಿ ಕೊಟ್ಟಿದ್ದಾರೆ.
ಸ್ಟೈಲಿಸ್ಟ್ ಆಗಿ ಬೈಕ್ ನಿಂದ ಇಳಿದು ಫೀಲ್ಡ್ ನಲ್ಲಿ ಶೀಲ್ಡ್ ನನ್ನದೇ, ಶೀಲ್ಡ್ ನನ್ನದೇ ಎಂದು ಬಿಗ್ ಬಾಸ್ ಸ್ಪರ್ಧಿ ʼಸತ್ಯʼ ಧಾರಾವಾಹಿ ಖ್ಯಾತಿ ಗೌತಮಿ ಅವರನ್ನು ನಿನ್ನೆಯೇ ಪರಿಚಯಿಸಲಾಗಿತ್ತು.
‘ ಸತ್ಯ’ ಧಾರಾವಾಹಿಗೂ ಮುನ್ನ ಅವರು ‘ನಾಗ ಪಂಚಾಮಿ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
‘ಕಿನಾರೆ’ ಸೇರಿದಂತೆ ನಾಲ್ಕು ಕನ್ನಡ ಸಿನಿಮಾ ಹಾಗೂ ಒಂದು ತಮಿಳು ಸಿನಿಮಾದಲ್ಲಿ ಅವರು ನಟಿಸಿದ್ದಾರೆ.
ಅವರು ಸ್ವರ್ಗ ಮನೆಗೆ ಪ್ರವೇಶ ಮಾಡಿದ್ದಾರೆ.