Advertisement

ಅಂತಾರಾಷ್ಟ್ರೀಯ ಬ್ರಾಡ್‌ಕಾಸ್ಟ್‌ ಸಂಸ್ಥೆ ಬಿಬಿಸಿ ವಿರುದ್ಧ ಬೃಹತ್‌ ಪ್ರತಿಭಟನೆ

09:37 PM Oct 29, 2022 | Team Udayavani |

ಲಂಡನ್‌: ಅಂತಾರಾಷ್ಟ್ರೀಯ ಬ್ರಾಡ್‌ಕಾಸ್ಟ್‌ ಸಂಸ್ಥೆ ಬಿಬಿಸಿಯ “ಹಿಂದೂ ವಿರೋಧಿ, ಭಾರತ ವಿರೋಧಿ’ ನಿಲುವನ್ನು ಖಂಡಿಸಿ ಬ್ರಿಟನ್‌ನಲ್ಲಿರುವ ಹಲವಾರು ಹಿಂದೂ ಸಂಘಟನೆಗಳು ಭಾರೀ ಪ್ರತಿಭಟನೆ ಆರಂಭಿಸಿವೆ.

Advertisement

ಶನಿವಾರ ಲಂಡನ್‌ನಲ್ಲಿರುವ ಬಿಬಿಸಿ ಪ್ರಧಾನ ಕಚೇರಿಯ ಮುಂದೆ ಈ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಜತೆಗೆ, ಬಿಬಿಸಿ ಪ್ರಧಾನ ನಿರ್ದೇಶಕ ಟಿಮ್‌ ಡೇವಿ ಅವರಿಗೆ ಮನವಿ ಪತ್ರವನ್ನೂ ಸಲ್ಲಿಸಲಾಗಿದೆ.

“ಬಿಬಿಸಿ ವಿರುದ್ಧದ ಪ್ರತಿಭಟನೆ’ಯ ಆಯೋಜಕರಲ್ಲಿ ಡಾ. ವಿವೇಕ್‌ ಕೌಲ್‌, ಡಾ.ಸ್ನೇಹ್‌ ಎಸ್‌. ಕಥುರಿಯಾ, ಸತೀಶ್‌ ಕೆ.ಶರ್ಮಾ, ನಿತಿನ್‌ ಮೆಹ್ತಾ, ದರ್ಶನ್‌ ಸಿಂಗ್‌ ನಾಗಿ ಮತ್ತಿತರರು ಇದ್ದಾರೆ.

ಸೆಪ್ಟೆಂಬರ್‌ನಲ್ಲಿ ಕೂಡ ಲೈಸೆಸ್ಟರ್‌ ಗಲಭೆ ಕುರಿತು ಪಕ್ಷಪಾತೀಯ ಮತ್ತು ನಕಲಿ ಸುದ್ದಿ ಪ್ರಕಟಿಸಿದ ಆರೋಪದ ಮೇರೆಗೆ ದಿ ಗಾರ್ಡಿಯನ್‌ ಪತ್ರಿಕೆಯ ವಿರುದ್ಧವೂ ಇದೇ ಮಾದರಿಯ ಹೋರಾಟ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next