Advertisement

BBC: ರಾಮ ಮಂದಿರ ಉದ್ಘಾಟನೆ ವರದಿ: ಬಿಬಿಸಿ ವಿರುದ್ಧ ಬ್ರಿಟನ್‌ ಸಂಸದ ಆಕ್ರೋಶ

09:18 PM Feb 04, 2024 | Team Udayavani |

ಲಂಡನ್‌: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನ ವರದಿ ಮಾಡಿದ ಬ್ರಿಟನ್‌ ಮಾಧ್ಯಮ ಸಂಸ್ಥೆ ಬಿಬಿಸಿ ವಿರುದ್ಧ ಸಂಸದ ಬಾಬ್‌ ಬ್ಲ್ಯಾಕ್‌ಮ್ಯಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜ.22ರಂದು ಬಿಬಿಸಿ ಮಾಡಿರುವ ವರದಿ ಪಕ್ಷಪಾತದಿಂದ ಕೂಡಿತ್ತು ಎಂದು ಯು.ಕೆ.ಯ ಸಂಸತ್‌ನಲ್ಲಿ ಆರೋಪಿಸಿರುವ ಅವರು, “ಮಸೀದಿಯನ್ನು ಒಡೆದು ಆ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ ಎಂದು ವರದಿ ಮಾಡಿದೆ. 2 ಸಾವಿರ ವರ್ಷಗಳಿಂದ ಅಲ್ಲಿ ದೇಗುಲ ಇದ್ದ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿದ್ದನ್ನು ಅದು ಮರೆತಂತೆ ಇದೆ. ಆ ಸ್ಥಳದಲ್ಲಿ ಇದ್ದ ಮಸೀದಿಯನ್ನು ನೆಲಸಮ ಮಾಡಲಾಗಿತ್ತಾದರೂ, ದೇಗುಲ ಇದ್ದ ಅಂಶವನ್ನು ಬಿಬಿಸಿ ಮರೆತಿದೆ’ ಎಂದು ದೂರಿದರು.

Advertisement

ಬಿಬಿಸಿ ನಿಷ್ಪಕ್ಷಪಾತವಾಗಿ ವರದಿ ಮಾಡುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಬ್ರಿಟನ್‌ ಸಂಸತ್‌ನಲ್ಲಿ ಚರ್ಚೆಗಳು ನಡೆಯಬೇಕು ಎಂದು ಬ್ರಿಟನ್‌ ಸರ್ಕಾರವನ್ನು ಮತ್ತು ಸಂಸದರರನ್ನು ಸಂಸದ ಬಾಬ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next