ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನಲ್ಲಿ ನಡೆದ ಗೋಧೋತ್ತರ ಗಲಭೆಯನ್ನು ಆಧರಿಸಿ ಮಾಧ್ಯಮ ಸಂಸ್ಥೆ ಬಿಬಿಸಿ ರೂಪಿಸಿರುವ ಸಾಕ್ಷ್ಯಚಿತ್ರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಅಲ್ಲದೇ, ದೇಶಕ್ಕೆ ಅಪಖ್ಯಾತಿ ತರಲು ಹಾಗೂ ದುರುದ್ದೇಶಪೂರಿತ ಪ್ರಚಾರಕ್ಕಾಗಿ ಬಿಬಿಸಿ ಈ ಸಾಕ್ಷ್ಯಚಿತ್ರ ರೂಪಿಸಿದೆ ಎಂದು ಆರೋಪಿಸಿದೆ.
2002ರ ಗಲಭೆಯನ್ನು ಆಧರಿಸಿ ರೂಪಿಸಿರುವ ಸಾಕ್ಷ್ಯಚಿತ್ರ ಎಂದು ಬಿಬಿಸಿ ಹೇಳಿಕೊಂಡಿರುವ ಸಾಕ್ಷ್ಯಚಿತ್ರದ ಸಂಪೂರ್ಣ ದುರುದ್ದೇಶಪೂರಿತವಾಗಿದೆ. ಅಲ್ಲದೇ, ಪಕ್ಷಪಾತ, ವಸಹಾತುಶಾಹಿ ಮನಸ್ಥಿತಿ, ವಸ್ತು ನಿಷ್ಠತೆಯ ಕೊರತೆ ಎದ್ದು ಕಾಣುತ್ತಿದೆ. ಭಾರತದ ಚಿತ್ರಣ ಬದಲಿಸಲು ಬಳಸುತ್ತಿರುವ ತಂತ್ರ ಗಳಲ್ಲಿ ಇದು ಒಂದೂ ಅಷ್ಟೇ. ಇದರ ಹಿಂದಿನ ಅಜೆಂ ಡಾ ಏನು ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಯೂಟ್ಯೂಬ್‌ನಲ್ಲೂ ಪ್ರಸಾರ ಸ್ಥಗಿತ: ಬಿಬಿಸಿ ಸರಣಿ ಬಗ್ಗೆ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿ ಸುತ್ತಿದ್ದಂತೆ, ಗೂಗಲ್ ಒಡೆತನದ ಯೂಟ್ಯೂಬ್ ಪ್ಲಾಟ್‌ಫಾರ್ಮ್ ಬಿಬಿಸಿ ಸರಣಿ ಸ್ಟ್ರೀಮಿಂಗ್ ರದ್ದು ಗೊಳಿಸಿದೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಯಾಗಿದೆ ಎಂಬುದನ್ನು ಪರಿಗಣಿಸಿದ ಯೂಟ್ಯೂಬ್ “ಇಂಡಿಯಾ: ಮೋದಿ ಕ್ವೆಶ್ಚನ್ಸ್’ನ 2 ಭಾಗಗಳನ್ನು ತೆಗೆದುಹಾಕಿದೆ.
ಒಪ್ಪಲ್ಲ ಎಂದ ರಿಷಿ ಸುನಕ್ :
ಬ್ರಿಟನ್ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬಿಬಿಸಿ, ಪ್ರಧಾನಿ ಮೋದಿ ಅವರ ವ್ಯಕ್ತಿತ್ವವನ್ನು ಹೀಗಳೆಯುವಂತೆ ಸಾಕ್ಷ್ಯಚಿತ್ರ ರೂಪಿಸಿರುವು ದನ್ನು ಒಪ್ಪುವುದಿಲ್ಲ ಎಂದು ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಹೇಳಿದ್ದಾರೆ. ಬ್ರಿಟನ್ ಪಾರ್ಲಿಮೆಂಟ್‌ನಲ್ಲಿ ಸಾಕ್ಷ್ಯಚಿತ್ರದ ಬಗ್ಗೆ ಬ್ರಿಟನ್ ಸರಕಾರದ ಅಭಿಪ್ರಾಯ ಕುರಿತು ಪ್ರಶ್ನೆ ಎದುರಾದಾಗ ರಿಷಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಕಿರುಕುಳ, ಗಲಭೆಗಳಾದರೂ ಅದನ್ನು ಬ್ರಿಟನ್ ಖಂಡಿಸುತ್ತದೆ. ಅದೇ ರೀತಿ ಒಬ್ಬ ಸಭ್ಯ ವ್ಯಕ್ತಿಯ ವ್ಯಕ್ತಿತ್ವದ ಚಿತ್ರಣವನ್ನು ಬದಲಿಸ ಹೊರಟರೆ ಅದನ್ನು ಖಂಡಿತ ಒಪ್ಪುವುದಿಲ್ಲ ಎಂದಿದ್ದಾರೆ.