Advertisement

BBC ಅಧ್ಯಕ್ಷ ಸ್ಥಾನಕ್ಕೆ ರಿಚರ್ಡ್‌ ರಾಜೀನಾಮೆ

07:44 PM Apr 28, 2023 | Team Udayavani |

ಲಂಡನ್‌: ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ 8 ಲಕ್ಷ ಪೌಂಡ್‌ (9.90 ಲಕ್ಷ ಡಾಲರ್‌) ಸಾಲ ಪಡೆದುಕೊಳ್ಳಲು ಸಹಕರಿಸಿರುವ ಆರೋಪ ಎದುರಿಸುತ್ತಿದ್ದ ಸರ್ಕಾರ ಬೆಂಬಲಿತ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಸಂಸ್ಥೆಯ ಅಧ್ಯಕ್ಷ (ಬಿಬಿಸಿ) ಅಧ್ಯಕ್ಷ ರಿಚರ್ಡ್‌ ಶಾರ್ಪ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Advertisement

ಕೆನಡಾ ಮೂಲದ ವ್ಯಕ್ತಿಯೊಬ್ಬರ ಮೂಲಕ ಶಾರ್ಪ್‌, ಬೋರಿಸ್‌ ಅವರಿಗೆ ಸಾಲ ಕೊಡಿಸಿದ್ದರು. ಅದಾದ ಒಂದು ವಾರದ ಬಳಿಕ ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಶಾರ್ಪ್‌ ಅವರನ್ನು ಶಿಫಾರಸುಮಾಡಿತು.

ಈ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೇರಲೆಂದೇ ಬೋರಿಸ್‌ಗೆ ಶಾರ್ಪ್‌ ಸಹಾಯ ಮಾಡಿ, ನೇಮಕಾತಿ ನಿಯಮ ಉಲ್ಲಂಘಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಬ್ಯಾರಿಸ್ಟರ್‌ ಹೆಪ್ಪಿನಸ್ಟಲ್‌ ನೇತೃತ್ವದ ಸ್ವತಂತ್ರ್ಯ ತನಿಖಾ ಸಂಸ್ಥೆ ತನಿಖಾ ವರದಿ ತಯಾರಿಸಿ, ಪ್ರಧಾನಿ ರಿಷಿ ಸುನಕ್‌ ನೇತೃತ್ವದ ಬ್ರಿಟನ್‌ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿಯೂ ನೇಮಕಾತಿ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಶಾರ್ಪ್‌ ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ಅವರ ಹುದ್ದೆಗೆ ಮತ್ತೂಬ್ಬರ ನೇಮಕವಾಗುವವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next