Advertisement

ಭಾರತದ ಸ್ಟಾರ್‌ ಚೆಸ್‌ ಆಟಗಾರ್ತಿ ಕೊನೆರು ಹಂಪಿಗೆ ಬಿಬಿಸಿ ಪ್ರಶಸ್ತಿ

11:56 PM Mar 09, 2021 | Team Udayavani |

ಹೊಸದಿಲ್ಲಿ: ಭಾರತದ ಸ್ಟಾರ್‌ ಚೆಸ್‌ ಆಟಗಾರ್ತಿ ಕೊನೆರು ಹಂಪಿ ಅವರಿಗೆ 2020ನೇ ಸಾಲಿನ “ಬಿಬಿಸಿ ಇಂಡಿಯನ್‌ ನ್ಪೋರ್ಟ್ಸ್
ವುಮನ್‌ ಆಫ್ ದಿ ಇಯರ್‌’ ಪ್ರಶಸ್ತಿ ಒಲಿದಿದೆ. ದ್ಯುತಿ ಚಂದ್‌, ಮನು ಭಾಕರ್‌, ವಿನೇಶ್‌ ಫೋಗಟ್‌, ರಾಣಿ ರಾಮ್‌ಪಾಲ್‌ ಕೂಡ ರೇಸ್‌ನಲ್ಲಿದ್ದರು. ಸಾರ್ವಜನಿಕರ ಮತಗಳನ್ನು ಆಧರಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು.

Advertisement

ಗುರಿ ಬದಲಿಸದಿರಿ…
“ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸದಿಂದಾಗಿ ನಾನು ಅನೇಕ ವರ್ಷಗಳಿಂದ ಗೆಲ್ಲುತ್ತ ಬಂದಿದ್ದೇನೆ. ಮಹಿಳೆಯರು ಆಟದಿಂದ ದೂರ ಉಳಿಯುವ ಬಗ್ಗೆ ಎಂದೂ ಯೋಚಿಸ ಬಾರದು. ಮದುವೆ ಮತ್ತು ಮಾತೃತ್ವ ನಮ್ಮ ಜೀವನದ ಒಂದು ಭಾಗವಾಗಿದೆ. ಇದಕ್ಕಾಗಿ ತಮ್ಮ ಜೀವನದ ಗುರಿಯನ್ನು ಬದಲಿಸಬಾರದು’ ಎಂದು ಹಂಪಿ ಈ ಸಂದರ್ಭದಲ್ಲಿ ಹೇಳಿದರು.

ಚೆಸ್‌ ಒಳಾಂಗಣ ಆಟ ವಾಗಿರುವುದರಿಂದ ನಮ್ಮಲ್ಲಿ ಅದು ಕ್ರಿಕೆಟ್‌ನಷ್ಟು ಜನಪ್ರಿಯ ಗೊಂಡಿಲ್ಲ. ಆದರೆ ಈ ಪ್ರಶಸ್ತಿ ಮೂಲಕ ಚೆಸ್‌ ಜನರನ್ನು ಇನ್ನಷ್ಟು ಸೆಳೆಯುತ್ತದೆ ಎಂಬ ನಂಬಿಕೆ ಇದೆ ಎಂದು ಹಂಪಿ ಆಶಿಸಿದರು.

ಎರಡು ವರ್ಷಗಳ ಮಾತೃತ್ವ ವಿರಾಮದ ಬಳಿಕ ಕೊನೆರು ಹಂಪಿ 2019ರ ಡಿಸೆಂಬರ್‌ನಲ್ಲಿ ನಡೆದ ವರ್ಲ್ಡ್ ರ್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌ ಮತ್ತು 2020ರಲ್ಲಿ ಕೈರ್ನ್ಸ್ ಕಪ್‌ ಪ್ರಶಸ್ತಿಯನ್ನು ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next