Advertisement

ಪ್ರಕಾಶನಗರದ ಪಾರಿವಾಳದ ಅಡ್ಡೆಗೂ ಬಜಾರಿಗೂ ಇದೆ ಕನೆಕ್ಷನ್!

09:27 AM Jan 27, 2019 | |

ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ಪಾರಿವಾಳಗಳೂ ಕೂಡಾ ಮಹತ್ವದ ಪಾತ್ರ ನಿರ್ವಹಿಸಿವೆ ಅನ್ನೋದು ಗೊತ್ತೇ ಇದೆ. ಈ ಸಿನಿಮಾದಲ್ಲಿ ನಿಜವಾಶದ ಪಾರಿವಾಳಗಳನ್ನೇ ಬಳಸಿಕೊಂಡು ಚಿತ್ರೀಕರಣ ನಡೆಸಲಾಗಿದೆ. ಇದಕ್ಕಾಗಿ ಪಾರಿವಾಳ ರೇಸಿನ ಬಗ್ಗೆ ಅಮೂಲಾಗ್ರ ಮಾಹಿತಿ ಕಲೆ ಹಾಕಿದ್ದ ಸುನಿ ಪಾರಿವಾಳದ ಅಡ್ಡೆಯೊಂದಕ್ಕೂ ಲಗ್ಗೆಯಿಟ್ಟಿದ್ದರು. ಹಾಗೆ ಸುನಿ ಕಣ್ಣು ಬಿದ್ದಿದ್ದದ್ದು ಬೆಂಗಳೂರಿನ ಪ್ರಕಾಶನಗರದ ಪಾರಿವಾಳದ ಅಡ್ಡೆ ಮೇಲೆ!

Advertisement

ಈವತ್ತಿಗೆ ಗಾಫಿಕ್ಸ್ ತಂತ್ರಜ್ಞಾನದ ಮೂಲಕ ಎಂತೆಂಥಾ ಅದ್ಭುತಗಳನ್ನೇ ಸೃಷ್ಟಿಸಲಾಗ್ತಿದೆ. ಆದರೆ ಅದರಲ್ಲಿ ಎಲ್ಲವೂ ಸಹಜವಾಗಿ, ನೈಜವಾಗಿ ಮೂಡಿ ಬರೋದಕ್ಕೆ ಸಾಧ್ಯವಿಲ್ಲ. ಈ ಕಾರಣದಿಂದಲೇ ಸುನಿ ಪಾರಿವಾಳಗಳ ಅಡ್ಡೆಯಿರೋ ಪ್ರಕಾಶ್ ನಗರವನ್ನ ಪತ್ತೆ ಹಚ್ಚಿ ಅಲ್ಲಿಯೇ ಚಿತ್ರೀಕರಣ ನಡೆಸಿದ್ರು. ಆದರೆ ಅದು ಅಷ್ಟು ಸಲೀಸಿನ ವಿಚಾರ ಆಗಿರಲಿಲ್ಲ. ಈ ಪಾರಿವಾಳಗಳು ಕೊಂಚ ಮೂಡಿ ಸ್ವಭಾವದವುಗಳು. ಇವುಗಳು ಹಾರಾಡುವ ಮನಸು ಮಾಡಿದಾಗಲಷ್ಟೇ ರೇಸಿನ ಚಿತ್ರೀಕರಣ ಮಾಡಬೇಕಾಗಿತ್ತು. ಇದಕ್ಕಾಗಿ ಕ್ಯಾಮೆರಾ ಇಟ್ಟು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಆದರೂ ಕೂಡಾ ಬಜಾರಿನ ಪ್ರಧಾನ ಅಂಶವಾದ ಪಾರಿವಾಳ ರೇಸ್ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

ಅಂದಹಾಗೆ ಬಜಾರಿನಲ್ಲಿ  ಪಾರಿವಾಳಗಳ ಸಂತೆಯೇ ನೆರೆದಿದೆ. ಎಂಥವರೂ ಮುದಗೊಳ್ಳುವ, ಮೈ ನವಿರೇಳುವಂತೆ ಮಾಡೋ ಪಾರಿವಾಳದ ರೇಸೂ ಕೂಡಾ ಈ ಚಿತ್ರದಲ್ಲಿದೆ. ಇದೂ ಸೇರಿದಂತೆ ಸಿಂಪಲ್ ಸುನಿ ಬಜಾರಿನಲ್ಲಿ ಬೆರಗಾಗಿಸೋ ಸರಕುಗಳು ಬಹಳಷ್ಟಿವೆ!

Advertisement

Udayavani is now on Telegram. Click here to join our channel and stay updated with the latest news.

Next