ಭಾರತದ ಸಂಸ್ಕೃತಿ ಎಷ್ಟು ವೈವಿಧ್ಯವೋ, ಇಲ್ಲಿನ ಕರಕುಶಲ ಕಲೆಯೂ ಅಷ್ಟೇ ವೈವಿಧ್ಯಮಯ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಬ್ಬಿರುವ ವರ್ಣರಂಜಿತ, ವೈವಿಧ್ಯಮಯ ಕರಕುಶಲ ಕಲೆಯನ್ನು ಒಂದೇ ಸೂರಿನಲ್ಲಿ ಲಭ್ಯಗೊಳಿಸುವ ಪ್ರದರ್ಶನ ಮತ್ತು ಮಾರಾಟ ಮೇಳ “ಮೀನಾ ಬಜಾರ್’, ನಗರದಲ್ಲಿ ಆಯೋಜನೆಯಾಗಿದೆ.
ಬಜಾರಲ್ಲಿ ಏನೇನಿದೆ?: 18 ರಾಜ್ಯಗಳ 150ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳು ಬಜಾರ್‌ನಲ್ಲಿದ್ದು, ಮಿನಿ ಇಂಡಿಯಾವನ್ನು ನೆನಪಿಸುತ್ತಿವೆ. ನುರಿತ ನೇಕಾರರು ನೇಯ್ದ ಅತ್ಯುತ್ತಮ ಗುಣಮಟ್ಟದ ರೇಷ್ಮೆ ವಸ್ತ್ರ ಮತ್ತು ಸಿದ್ಧಪಡಿಸಿದ ವಸ್ತ್ರಗಳು ಪ್ರದರ್ಶನದಲ್ಲಿವೆ.
ಹತ್ತಿ ಮತ್ತು ರೇಷ್ಮೆ ಸೀರೆ, ಕಾಂತಾ ವರ್ಕ್ ಡ್ರೆಸ್ ಮೆಟೀರಿಯಲ್ಸ್, ಪ್ರಿಂಟೆಡ್ ಅಪ್ಪಟ ರೇಷ್ಮೆ ಸೀರೆ, ಹುಬ್ಬಳ್ಳಿ ರೇಷ್ಮೆ ಕಾಟನ್ ಸೀರೆ, ಪಶ್ಚಿಮ ಬಂಗಾಳದ ಬೋಟಿಕ್ ಸೀರೆ ಮತ್ತು ಡ್ರೆಸ್ ಮೆಟೀರಿಯಲ್ಸ್, ಭಾಗಲ್ಪುರದ ರೇಷ್ಮೆ ಡ್ರೆಸ್ ಮೆಟೀರಿಯಲ್ಸ್, ಕೈಯಿಂದಲೇ ಮುದ್ರಣ ಮಾಡಿದ ಸೀರೆ, ಖಾದಿ ರೇಷ್ಮೆ, ಬಿಹಾರದ ರೇಷ್ಮೆ ಮತ್ತು ಹತ್ತಿಯ ಚೂಡಿದಾರ್ ಹಾಗೂ ಡ್ರೆಸ್ ಮೆಟೀರಿಯಲ್ಸ್ ಮಾರಾಟಕ್ಕಿವೆ.
ಮಧ್ಯಪ್ರದೇಶದ ಚಾಂದೇರಿ, ಮಹೇಶ್ವರಿ ಹತ್ತಿ ಮತ್ತು ರೇಷ್ಮೆ ಸೀರೆಗಳು ಹಾಗೂ ಪುರುಷರ ಸೂಟ್ ಬಟ್ಟೆಗಳು, ಉತ್ತರ ಪ್ರದೇಶದ ಬನಾರಸಿ ರೇಷ್ಮೆ ಸೀರೆ ಮತ್ತು ವಸ್ತ್ರಗಳು, ಬನಾರಸಿ ಜಮಾವರ್, ಜಾಮಾªನಿ ರೇಷ್ಮೆ ಸೀರೆ, ಬನಾರಸಿ ಡಿಸೈನರ್ ನೆಟ್ ಸೀರೆ, ಲಖನವಿ ಚಿಕನ್ ವಸ್ತ್ರಗಳು, ರಾಜಸ್ಥಾನದ ಕಲಾಂಕರಿ ಪ್ರಿಂಟೆಡ್ ಬೆಡ್‌ಶೀಟ್, ಬಂದಿನಿ ರೇಷ್ಮೆ ಸೀರೆ, ಜೈಪುರಿ ಕುರ್ತಿ, ಬ್ಲಾಕ್ ಪ್ರಿಂಟ್ ಡ್ರೆಸ್ ಮೆಟಿರೀಯಲ್ಸ್, ಕಾಶ್ಮೀರದ ಪಶ್ಮಿನಾ ಸಿಲ್ಕ್ ವಸ್ತ್ರ, ಶಾಲು ಹಾಗೂ ಕಾಶ್ಮೀರಿ ಕಾಪೆಟ್ ಇಲ್ಲಿ ದೊರಕುತ್ತವೆ.
ಎಲ್ಲಿ?: ಚಿತ್ರಕಲಾ ಪರಿಷತ್, ರೇಸ್‌ಕೋರ್ಸ್ ರಸ್ತೆ
ಯಾವಾಗ?: ಜೂನ್ 1- 2