Advertisement
“ನನಗೆ ಗೂಂಡಾ ಶಾಸಕ ಅಂತ ಕುಮಾರಸ್ವಾಮಿ ಅವರು ತಮ್ಮ ಚಾನಲ್ ಮೂಲಕ ಪಟ್ಟ ಕೊಟ್ಟಿದ್ದಾರೆ. ನಾನು ಗೂಂಡಾ ಶಾಸಕ ಹೌದೋ, ಅಲ್ಲವೋ ಎಂಬುದನ್ನು ಜನ ತೀರ್ಮಾನ ಮಾಡುವರು. ನಾನು ಗೂಂಡಾಗಿರಿ ಮಾಡಿದ್ದು ಏತಕ್ಕೆ ಅನ್ನೋದನ್ನ ಮಾಧ್ಯಮದಲ್ಲಿ ನೀವೆಲ್ಲಾ ನೋಡಿದ್ದೀರಾ. ಕಾರ್ಯಕರ್ತರಿಗಾಗಿ ನಾನು ಗಲಾಟೆ ಮಾಡಿದ್ದೇನೆಯೇ ವಿನಃ ವೈಯಕ್ತಿಕ ಲಾಭಕ್ಕಾಗಿ ಗಲಾಟೆ ಮಾಡಿಲ್ಲ. ಅದರಿಂದ ಕುಮಾರಸ್ವಾಮಿ ಅವರಿಗೆ ನೋವಾಗಿರಬಹುದು’ ಎಂದು ನಯವಾಗಿಯೇ ಜರಿದರು.
“ಭಿನ್ನಮತೀಯ ಶಾಸಕರನ್ನು ದಮನ ಮಾಡಲು ಅವರದೇ ಒಂದು ಚಾನಲ್ ಮಾಡಿಕೊಂಡಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ. ನೀವು (ದೃಶ್ಯ ಮಾಧ್ಯಮದವರು) ಅವರು ಮಾತನಾಡೋದನ್ನು ತೋರಿಸೋಲ್ಲ, ನಮ್ಮಂತಹ ಅಮಾಯಕರು ಮಾತನಾಡೋದನ್ನ ತೋರಿಸ್ತೀರಿ. ಡಿಜಿಗೆ ದನ ಕಾಯೋಕೆ ಹೋಗಿದ್ದಾನೆ. ಗೃಹಮಂತ್ರಿ ಅನ್‌ಫಿಟ್ ಅಂದಾಗಲೂ ಅದಾವುದನ್ನೂ ತೋರಿಸಲಿಲ್ಲ’ ಎಂದು ಮಾಧ್ಯಮದವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.