Advertisement

ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರಕಟ

10:38 PM Jan 20, 2020 | Lakshmi GovindaRaj |

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿ ಹಾಗೂ 2017-18, 2018-19ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಕಲಾವಿದರಾದ ಬಳ್ಳಾರಿ ಜಿಲ್ಲೆಯ ಧೂಪದ ಕೂಟ್ರಪ್ಪ, ಧಾರವಾಡದ ಶ್ರೀಶೈಲ ಹುದ್ದಾರ (ದೊಡ್ಡಾಟ), ಕೊಪ್ಪಳ ಜಿಲ್ಲೆಯ ಎಚ್‌.ಎಸ್‌. ಪಾಟೀಲ (ದೊಡ್ಡಾಟ), ಶಾಂತವ್ವ ಜಾಲಿಕಟ್ಟಿ (ಶ್ರೀಕೃಷ್ಣ ಪಾರಿಜಾತ), ಬಾಪು ತಾಸೆವಾಲೆ (ಶ್ರೀಕೃಷ್ಣ ಪಾರಿಜಾತ) ಆಯ್ಕೆಯಾಗಿದ್ದಾರೆ.

Advertisement

ವಾರ್ಷಿಕ ಪ್ರಶಸ್ತಿಗೆ ಕಲಾವಿದರಾದ ಎನ್‌, ರಂಗನಾಥ, ಚಲವಾದಿ ಕೆಂಚಪ್ಪ, ಸಣ್ಣಬೋರಯ್ಯ, ಎಂ. ಸೋಮಶೇಖರಪ್ಪ, ಫಿರೋಜ ಶಿಂಧೆ, ಭೀಮಪ್ಪ ಹುದ್ದಾರ, ಚಿದಾನಂದ ಹಲಗಲಿ, ಯಲ್ಲವ್ವ ಮಾದರ, ಬಸವಂತ ಮಾಳಿ, ಅಧಿಕಾರಿ ಬಸವಲಿಂಗಪ್ಪ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿ 50 ಸಾವಿರ ರೂ., ವಾರ್ಷಿಕ ಪ್ರಶಸ್ತಿ 25 ಸಾವಿರ ರೂ., ಪುಸ್ತಕ ಬಹುಮಾನ 25 ಸಾವಿರ ರೂ.ನಗದು ಒಳಗೊಂಡಿದೆ.

2017-18ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಮೈಸೂರಿನ ಡಾ|ಸುಜಾತಾ ಸಾರಥಿ ಪುಸ್ತಕ, ಬಳ್ಳಾರಿ ಜಿಲ್ಲೆಯ ಡಾ|ವೀರೇಶ ಬಡಿಗೇರ; 2018-19ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಡಾ|ಶ್ರೀರಾಮ ಇಟ್ಟಣ್ಣವರ (ಬಯಲಾಟ ಲೇಖನಗಳು), ಧಾರವಾಡ ಜಿಲ್ಲೆಯ ಎಂ.ಎಸ್‌. ಮಾಳವಾಡ (ವೀರರಾಣಿ ಕಿತ್ತೂರು ಚನ್ನಮ್ಮ ಪುಸ್ತಕ) ಆಯ್ಕೆಯಾಗಿವೆ ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಬಿ.ಎಸ್‌.ಶಿರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next