ಜೊಹಾನ್ಸ್‌ಬರ್ಗ್: ಆಸ್ಟ್ರೇಲಿಯ ವಿರುದ್ಧ ಆಡಲಾಗುವ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ.
ಕಳೆದ ಇಂಗ್ಲೆಂಡ್ ಸರಣಿಯ ವೇಳೆ ತಂಡದಲ್ಲಿದ್ದ ಬಹುತೇಕ ಆಟಗಾರರು ಮುಂದುವರಿದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ ಟೆಂಬ ಬವುಮ, ಥಿಯುನಿಸ್ ಡಿ ಬ್ರುಯಿನ್, ರಸ್ಸಿ ವಾನ್ ಡರ್ ಡುಸೆನ್ ತಂಡಕ್ಕೆ ಮರಳಿದವರಲ್ಲಿ ಪ್ರಮುಖರು.
ಆದರೆ ಐಡನ್ ಮಾರ್ಕ್‌ರಮ್ ಅವ ರನ್ನು ಕೈಬಿಟ್ಟಿರುವುದೊಂದು ಅಚ್ಚರಿ. ಪ್ರತಿ ಭಾನ್ವಿತ ಆಟಗಾರ ಕೀಗನ್ ಪೀಟರ್‌ಸನ್ ಗಾಯಾಳಾದ ಕಾರಣ ಈ ಪ್ರವಾಸವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಗೆರಾಲ್ಡ್ ಕೋಝಿ ಏಕೈಕ ಹೊಸಮುಖ. ಡೀನ್ ಎಲ್ಗರ್ ನಾಯಕರಾಗಿ ಮುಂದುವರಿದಿದ್ದಾರೆ.
Related Articles
ಸರಣಿಯ 3 ಟೆಸ್ಟ್ ಪಂದ್ಯಗಳು ಕ್ರಮವಾಗಿ ಬ್ರಿಸ್ಬೇನ್ (ಡಿ. 17-21), ಮೆಲ್ಬರ್ನ್ (ಡಿ. 26-30) ಮತ್ತು ಸಿಡ್ನಿಯಲ್ಲಿ (ಜ. 4-8) ನಡೆಯಲಿವೆ.
ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್ (ನಾಯಕ), ಟೆಂಬ ಬವುಮ, ಗೆರಾಲ್ಡ್ ಕೋಝೀ, ಥಿಯುನಿಸ್ ಡಿ ಬ್ರುಯಿನ್, ಸರೆಲ್ ಇರ್ವೀ, ಸೈಮನ್ ಹಾರ್ಮರ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಆ್ಯನ್ರಿಚ್ ನೋರ್ಜೆ, ಕಾಗಿಸೊ ರಬಾಡ, ಗ್ಲೆಂಟನ್ ಸ್ಟುರ್‌ಮ್ಯಾನ್, ರಸ್ಸಿ ವಾನ್ ಡರ್ ಡುಸೆನ್, ಕೈಲ್ ವೆರೇಯ್ನ, ಖಯ ಝೊಂಡೊ.