Advertisement

ಬಾವಿಕೆ‌ರೆ ಅಣೆಕಟ್ಟು : ಕೊನೆಗೂ ಟೆಂಡರ್‌ ಪ್ರಕ್ರಿಯೆ ಪೂರ್ಣ

06:00 AM Jul 10, 2018 | |

ಮೂರು ಮಂದಿ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಈ   ಪೈಕಿ  ಜಾಸ್ಮಿನ್‌ ಕನ್‌ಸ್ಟ್ರಕ್ಷನ್‌ ಕಂಪೆನಿ  ಅಣೆಕಟ್ಟು ನಿರ್ಮಾಣ ಗುತ್ತಿಗೆಯನ್ನು ವಹಿಸಿಕೊಂಡಿದೆ. ಮುಂದಿನ ಎರಡು ವರ್ಷದೊಳಗೆ ಕಾಮಗಾರಿ ಪೂರ್ತಿಗೊಳಿಸುವುದಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಒಪ್ಪಂದಕ್ಕೆ ಬರಲಾಗಿದೆ. ರಾಜ್ಯ ಸರಕಾರ ಕಳೆದ ಮುಂಗಡಪತ್ರದಲ್ಲಿ   27.75 ಕೋ. ರೂ.ಕಾದಿರಿಸಿದೆ.

Advertisement

ಕಾಸರಗೋಡು: ಹಲವು ವರ್ಷ ಗಳಿಂದ ನನೆಗುದಿಗೆ ಬಿದ್ದಿದ್ದ ಕಾಸರಗೋಡು ನಗರಸಭೆ ಮತ್ತು ಕೆಲವು ಪಂಚಾಯತ್‌ಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾದ ಬಾವಿಕೆರೆ ಅಣೆಕಟ್ಟಿಗೆ ಕೊನೆಗೂ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. 

ಅರ್ಧದಲ್ಲೇ ನಿಂತಿರುವ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ   ಮತ್ತೆ ಜನರಲ್ಲಿ ಆಶಾಭಾವನೆ ಮೊಳಕೆಯೊಡೆದಿದೆ.

ಶಾಸಕರ ಯಶಸ್ವೀ ಸಂಧಾನ 
ಆರು ತಿಂಗಳ ಹಿಂದೆ ಟೆಂಡರ್‌ ಪ್ರಕ್ರಿಯೆಗೆ ಮುನ್ನ ಪ್ರಿಕ್ವಾಲಿಫಿಕೇಶನ್‌ ಟೆಂಡರ್‌ ನಡೆದಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆಗೆ ಮುಂದಾದಾಗ ಈ ಹಿಂದಿನ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಲೇರಿದ್ದರಿಂದ ಟೆಂಡರ್‌ ಪ್ರಕ್ರಿಯೆ ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಿರುವಂತೆ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಹಿಂದಿನ ಟೆಂಡರ್‌ದಾರರನ್ನು ಭೇಟಿಯಾಗಿ ಈ ಯೋಜನೆ ಜನ ಕ್ಷೇಮ ಯೋಜನೆಯಾಗಿರುವುದರಿಂದ ಕೇಸಿನಿಂದ ಹಿಂದೆ ಸರಿಯಬೇಕೆಂದು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಸು ಹಿಂದೆಗೆದುಕೊಂಡಿರುವುದರಿಂದ ಟೆಂಡರ್‌ ಪ್ರಕ್ರಿಯೆ ಪೂರ್ತಿಗೊಳಿಸಲು ಸಾಧ್ಯವಾಗಿದೆ. 

ಆರಂಭದಲ್ಲಿ ನಿರ್ಮಿಸಿದ ಅಣೆಕಟ್ಟಿನ ಭಾಗವನ್ನು ನವೀಕರಿಸಿ ಅಣೆಕಟ್ಟು ಪೂರ್ತಿಗೊಳಿಸಲಾಗುವುದು. ಹೊಸದಾಗಿ ನಿರ್ಮಿಸುವ ಭಾಗದಲ್ಲಿ ಮೋಟಾರು ಬಳಸಿ ಕಾರ್ಯಾಚರಿಸುವುದರಿಂದ ಉಕ್ಕಿನ ಶಟರ್‌ಗಳನ್ನು ನಿರ್ಮಿಸಲಾಗುವುದು.

Advertisement

12 ಮೀಟರ್‌  ನೀಳದ ನಾಲ್ಕು ಶಟರ್‌ ಗಳನ್ನು ಆಧುನಿಕ ತಾಂತ್ರಿಕತೆಗೆ ಅನುಗುಣ ವಾಗಿ ಬದಲಾಯಿಸಲಾಗಿದ್ದು, ಇದಕ್ಕಾಗಿ 18 ಮೀಟರ್‌ ಎತ್ತರದಲ್ಲಿ  ಐದು ಕಾಂಕ್ರೀಟ್‌ ಕಂಬಗಳನ್ನು ನಿರ್ಮಿಸಲಾಗುವುದು. ಪ್ರಸ್ತುತ ಇರುವ ಭಾಗಗಳಲ್ಲಿ ಫೈಬರ್‌ ರಿ ಇನ್‌ಫೋರ್ಸ್‌ಮೆಂಟ್‌ ಹಲಗೆಗಳನ್ನು ಉಪಯೋಗಿಸಲಾಗುವುದು. ಇರಿಗೇಶನ್‌ ಡಿಸೈನ್‌ ಆ್ಯಂಡ್‌ ರಿಸರ್ಚ್‌ ಬೋರ್ಡ್‌ ನೀಲ ನಕಾಶೆಯನ್ನು ಸಿದ್ಧಪಡಿಸಿದೆ. ಜಲ ಮಂಡಳಿ ಪಯಸ್ವಿನಿ  ಹೊಳೆಯ ಯೋಜನೆ ಪ್ರದೇಶದಲ್ಲಿ ನೀರು ಸಂಗ್ರಹ ಘಟಕದಲ್ಲಿ  ಬೇಸಗೆಯಲ್ಲಿ ಸಮುದ್ರದ ಉಪ್ಪು ನೀರು ಸೇರುವುದನ್ನು  ತಡೆಯಲು ಆಲೂರು ಮುನಂಬಿಲ್‌ನಲ್ಲಿ ತಡೆಗೋಡೆ (ಅಣೆಕಟ್ಟು) ನಿರ್ಮಾಣ ಕಾಮಗಾರಿ ಆರಂಭಿಸಿತ್ತು. 1980ರಲ್ಲಿ ಪ್ರಥಮವಾಗಿ ಎಸ್ಟಿಮೇಟ್‌ ತಯಾರಿಸಲಾಗಿತ್ತು. ಇದೀಗ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ತಿಗೊಂಡಿರು ವುದರಿಂದ ಇಲ್ಲಿನ ಜನರು ಬಹಳಷ್ಟು ನಿರೀಕ್ಷೆ ಯಲ್ಲಿದ್ದಾರೆ.
 
ಇನ್ನಾದರೂ ಬೇಸಗೆಯಲ್ಲಿ ಉಪ್ಪು ನೀರು ಕುಡಿಯಬೇಕಾದ ಸಮಸ್ಯೆಯಿಂದ ಪಾರಾಗುವ ಅಶಾವಾದ ಜನರದ್ದು.

ಈಗಾಗಲೇ 4 ಕೋಟಿ ರೂ. ಖರ್ಚಾಗಿದೆ
2005ರಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಕಾಮಗಾರಿ ನಿಲುಗಡೆಗೊಳಿಸಲಾಯಿತು. 2012ರಲ್ಲಿ ಮತ್ತೆ ನಿರ್ಮಾಣ ಕಾಮಗಾರಿ ಆರಂಭಿಸಿ ಹೊಳೆಯ ಅರ್ಧ ಭಾಗದವರೆಗೆ   ಕಾಂಕ್ರೀಟ್‌ ಕಂಬಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆ ದಾರ ಒಂದೇ ವರ್ಷದಲ್ಲೇ ಕಾಮಗಾರಿ ಯನ್ನು ಕೈಬಿಟ್ಟಿದ್ದರಿಂದ ಅಣೆಕಟ್ಟು ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಮೊಟಕು ಗೊಂಡಿತು. ಈಗಾಗಲೇ 4 ಕೋಟಿ ರೂ. ವೆಚ್ಚ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next