Advertisement

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

09:20 PM May 07, 2021 | Team Udayavani |

ಬೆಂಗಳೂರು:  ಗೇಮಿಂಗ್ ಪ್ರಿಯರಿಗೆ ಸಂತಸದ ವಿಚಾರವೊಂದು ಹೊರಬಿದ್ದಿದ್ದು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ದೇಸಿ ಅವತಾರದ ಪಬ್ ಜಿ ಗೇಮ್ ಭಾರತಕ್ಕೆ ಲಗ್ಗೆಯಿಡುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಶೀಘ್ರದಲ್ಲಿ ಅತ್ಯುನ್ನತ ಗುಣಮಟ್ಟದೊಂದಿಗೆ ಹೊಸ ಮಾದರಿಯ ಪಬ್ ಜಿ ಬಳಕೆದಾರರನ್ನು ತಲುಪಲಿದೆ ಎಂದು ತಿಳಿಸಿದೆ.

Advertisement

ಗಮನಿಸಬೇಕಾದ ಅಂಶವೆಂದರೇ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಈಗಾಗಲೇ ವೆಬ್ ಸೈಟ್ ಒಂದು ಆರಂಭವಾಗಿದ್ದು, ಹೊಸ ಗೇಮ್ ನಲ್ಲಿ ಹಲವು ಬದಲಾವಣೆಗಳಿರಲಿವೆ ಎಂದು ತಿಳಿಸಿದೆ. ಸಂಸ್ಥೆಯ ಸುರಕ್ಷತಾ ನೀತಿಯ ಅನುಸಾರ “18 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡಲು ಪೋಷಕರ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳುವುದು ಅಗತ್ಯವಾಗಿದೆ”

ಕ್ರಾಫ್ಟನ್ ಸಂಸ್ಥೆಯ ಪ್ರಕಾರ “18 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡಬೇಕಾದರೇ ಪೋಷಕರ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕಾಗಿ ಪೋಷಕರ ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಸೈನ್ ಇನ್ ಆದ ನಂತರವಷ್ಟೇ ಬ್ಯಾಟಲ್ ಗ್ರೌಂಡ್ಸ್ ಆಡಲು ಅವಕಾಶ ಕಲ್ಪಿಸಲಾಗುವುದು. ಅದಾಗ್ಯೂ ಈ ಹೊಸ ಫೀಚರ್ ನಲ್ಲಿ ಹಲವು ಸಮಸ್ಯೆಗಳು ಕಂಡುಬರುತಿದ್ದು, ಪರಿಹಾರವಾದ ನಂತರ ಗೇಮ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ:  ಗಂಟೆಗೆ 28,968 ಕಿಮೀ ವೇಗದಲ್ಲಿ ಭೂಮಿಗೆ ಹಿಂತಿರುಗಲಿದೆ ಚೀನಿ ರಾಕೆಟ್ ಲಾಂಗ್ ಮಾರ್ಚ್..!?

ಇಂದು 18 ವರ್ಷ ಕೆಳಗಿನವರೂ ಕೂಡ ಪ್ರತ್ಯೇಕವಾದ ಮೊಬೈಲ್ ನಂಬರ್ ಅನ್ನು ಹೊಂದಿರುತ್ತಾರೆ. ಹೀಗಾಗಿ ಈ ಗೇಮಿಂಗ್ ಆಡಲೆಂದೇ ಕೆಲವೊಂದು ಜಾಣ್ಮೆಗಳನ್ನು ಪ್ರದರ್ಶಿಸುತ್ತಾರೆ. ಈ ಎಲ್ಲಾ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ವೇರಿಫಿಕೇಶನ್ ತಂತ್ರಜ್ಞಾನವನ್ನು ರೂಪಿಸಲಾಗುತ್ತಿದೆ ಎಂದು ಕ್ರಾಫ್ಟನ್ ತಿಳಿಸಿದೆ. ಇದರ ಜೊತೆಗೆ 18 ವರ್ಷ ಕೆಳಗಿನವರಿಗೆ ಈ ಗೇಮ್ ಅನ್ನು ದಿನದಲ್ಲಿ ಇಂತಿಷ್ಟೇ ಗಂಟೆ ಮಾತ್ರ ಆಡಬೇಕೆಂಬ ನಿಯಮವನ್ನೂ ಕೂಡ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ,

Advertisement

ಕಳೆದ ವರ್ಷ ಭಾರತದಲ್ಲಿ ಪಬ್ ಜಿ ಸೇರಿದಂತೆ ನೂರಕ್ಕೂ ಅಧಿಕ ಆ್ಯಪ್ ಗಳನ್ನು ನಿಷೇಧ ಮಾಡಲಾಗಿತ್ತು. ತದನಂತರದಲ್ಲಿ ಹಲವು ದೇಸಿ ಆ್ಯಪ್ ಗಳು ಮುನ್ನಲೆಗೆ ಬಂದಿದ್ದವು. ಇದೀಗ ಬ್ಯಾಟಲ್ ಗ್ರೌಂಡ್ಸ್ ಇಂಡಿಯಾ ಕೂಡ ಹಲವು ಸುಧಾರಿತ ತಂತ್ರಜ್ಞಾನಗಳು, ವಿಶೇಷ ಇನ್ ಗೇಮ್ ಇವೆಂಟ್ ಗಳು, ಡೇಟಾ ಗೌಪ್ಯತಾ ಅಂಶಗಳನ್ನು ಒಳಗೊಂಡು ಭಾರತದಲ್ಲಿ ಲಗ್ಗೆಯಿಡುತ್ತಿದೆ.

ಇದನ್ನೂ ಓದಿ:   ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ

Advertisement

Udayavani is now on Telegram. Click here to join our channel and stay updated with the latest news.

Next