Advertisement

ಮಂಗಳೂರು: ಲಾರಿಗಳಿಂದ ಬ್ಯಾಟರಿ ಕದಿಯುತ್ತಿದ್ದ ಆರೋಪಿಯ ಬಂಧನ

03:41 PM Jan 24, 2021 | Team Udayavani |

ಮಂಗಳೂರು: ಪಾರ್ಕ್ ಮಾಡಿದ ಲಾರಿಗಳಿಂದ ಬ್ಯಾಟರಿ ಕಳವು ಮಾಡುತ್ತಿದ್ದ ಕಳ್ಳನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ನಗರದ ಬಜಾಲ್ ನ ಇರ್ಫಾನ್ (25) ಬಂಧಿತ ಆರೋಪಿ. ಗಣೇಶ್ ಶಿಪ್ಪಿಂಗ್ ಏಜೆನ್ಸಿಯ ಲಾಜೆಸ್ಟಿಕ್ ಮ್ಯಾನೇಜರ್ ಈ ಬಗ್ಗೆ ದೂರು ದಾಖಲಿಸಿದ್ದರು.

ಇದನ್ನೂ ಓದಿ:ಮಂಗಳೂರಿನಲ್ಲಿ ಸಿದ್ದವಾಗಲಿದೆ ಪ್ಲಾಸ್ಟಿಕ್‌ ಪಾರ್ಕ್: ಸಚಿವ ಡಿ ವಿ ಸದಾನಂದ ಗೌಡ

ಪಣಂಬೂರು ಎನ್ ಎಂಪಿಟಿ ಟಿಂಬರ್ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಐದು ಲಾರಿಗಳಿಂದ ಜ.9ರಂದು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಇರ್ಫಾನ್ ನನ್ನು ಬಂಧಿಸಿರುವ ಪೊಲೀಸರು 58 ಸಾವಿ ರೂ. ಮೌಲ್ಯದ ಐದು ಬ್ಯಾಟರಿ, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next