Advertisement
ವೆಸ್ಟ್ ಇಂಡೀಸ್‌ನ ನಾರ್ತ್ ಸೌಂಡ್‌ನಲ್ಲಿ ನಡೆದ ಸ್ಥಳೀಯ “ಸೂಪರ್ 50 ಟೂರ್ನಿ’ಯಲ್ಲಿ ಕೆಂಟ್ ಮತ್ತು ವೀವರ್ಡ್ ಐಲ್ಯಾಂಡ್ಸ್ ತಂಡಗಳ ನಡುವೆ ಲೀಗ್ ಹಂತದ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಐಸ್‌ಲಾಂಡ್ಸ್ ತಂಡ 184 ರನ್ ಗುರಿ ನೀಡಿತ್ತು. ಗುರಿ ಬೆನ್ನುಹತ್ತಿದ ಕೆಂಟ್ ತಂಡದ ಪರ ಜಾಕ್ ಕ್ರಾಲೆ 98 ರನ್ ಬಾರಿಸಿ ಕ್ರೀಸ್‌ನಲ್ಲಿದ್ದರು. ತಂಡದ ಗೆಲುವಿಗೆ 4 ರನ್ ಬೇಕಾಗಿತ್ತು. ಬೌಲಿಂಗ್ ಮಾಡುತ್ತಿದ್ದ ಸೀನೊ ಬ್ರಿಡ್ಜ್ ಸತತ ಎರಡು ವೈಡ್ ಎಸೆದರು. ಮೂರನೇ ಎಸೆತವೂ ಹೊರಭಾಗದಲ್ಲಿ ಹೋಗುತ್ತಿತ್ತು. ಆದರೂ ಜಾಕ್ ಒಂದು ರನ್ ಬಾರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕ್ರೀಸ್ ಬದಲಾವಣೆಯಾಯಿತು. ಜಾಕ್ ಕ್ರಾಲೆ ಅಜೇಯ 99 ರನ್ ಬಾರಿಸಿದರು. ಈ ಪಂದ್ಯದಲ್ಲಿ ಕೆಂಟ್ ತಂಡ 9 ವಿಕೆಟ್ ಗಲುವು ಸಾಧಿಸಿತು.
2ನೇ ಡಿವಿಷನ್ ಪಂದ್ಯದ ಟಾಸ್ ವೇಳೆ ಗೊಂದಲವಾಗಿತ್ತು. ಹೀಗಾಗಿ ಒಂದು ತಂಡ ಮುನಿಸಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಾಲಾ ಮತಿಯಾ ಕ್ಲಬ್ 88 ರನ್‌ಗೆ ಆಲೌಟ್ ಆಗಿತ್ತು. ಆದರೆ ಅಕ್ಸಿಯಾಮ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಮತಿಯಾ ಕ್ಲಬ್‌ನ ಬೌಲರ್ ಸುಜನ್ ಮೊಹಮ್ಮದ್ 4 ಎಸೆತದಲ್ಲಿಯೇ 92 ರನ್ ಕೊಟ್ಟಿದ್ದರು. ಅದರಲ್ಲಿ ಬ್ಯಾಟ್ಸ್‌ಮನ್ ಬಾರಿಸಿದ್ದು, 12 ರನ್ ಮಾತ್ರ. ಉಳಿದಂತೆ ವೈಡ್‌ನಲ್ಲಿ 65 ರನ್, ನೋ ಬಾಲ್‌ನಲ್ಲಿ 15 ರನ್ ನೀಡಿದ್ದರು. ಬೌಲರ್ ಉದ್ದೇಶ ಪೂರಕವಾಗಿಯೇ ಹೀಗೆ ಮಾಡಿರುವುದರಿಂದ ಆಟಗಾರನಿಗೆ ನಿಷೇಧ ಹೇರಲಾಗಿತ್ತು.