Advertisement

ಮನುಷ್ಯನ ಕೊಲ್ಲುವ ಕೋವಿಡ್ ಬಾವಲಿ ಗೆಳೆಯ

12:17 PM May 08, 2020 | mahesh |

ಮನುಷ್ಯನ ಜೀವವನ್ನೇ ಅಪಾಯಕ್ಕೆ ತಳ್ಳುವ ಕೋವಿಡ್ ವೈರಸ್‌, ಬಾವಲಿಗಳಲ್ಲಿ ಹೇಗೆ ಆರೋಗ್ಯಕಾರಿಯಾಗಿ ಜೀವಿಸುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

Advertisement

ಬಾವಲಿಯ ಜೀವಕೋಶದೊಳಕ್ಕೆ ಕೋವಿಡ್ ವೈರಾಣುಗಳನ್ನು ಒಂದು ತಿಂಗಳು ನಿರಂತರವಾಗಿ ಸೇರಿಸಲಾಗಿತ್ತು. ಆದರೆ, ಮಾನವನಲ್ಲಿ ಸೋಂಕು ಹೆಚ್ಚಿಸುವ ಕೊರೊನಾ, ಬಾವಲಿಗಳಲ್ಲಿ ಭಿನ್ನ ವರ್ತನೆ ತೋರಿತು. ಅಲ್ಲಿ ವೈರಸ್‌ಗಳು ಸ್ನೇಹಯುತವಾಗಿ ದೀರ್ಘ‌ಕಾಲದವರೆಗೆ ನೆಲೆ ಕಂಡುಕೊಳ್ಳುತ್ತವೆ. ಅಲ್ಲದೆ, ಬಾವಲಿಯ ವಿಶಿಷ್ಟ ಪ್ರತಿಕಾಯಗಳು ಆ ವೈರಾಣುವನ್ನು ಪೋಷಿಸುವ ಕೆಲಸ ಮಾಡುತ್ತವೆ ಎಂಬ ಉಸಾಕ್‌ ವಿವಿಯ ಸಂಶೋಧನೆಯನ್ನು ಸೈಂಟಿಫಿಕ್‌ ಜರ್ನಲ್‌ ಒಂದರಲ್ಲಿ ಪ್ರಕಟಿಸಲಾಗಿದೆ.

ಬಾವಲಿಗಳಲ್ಲಿ ಉರಿಯೂತ: ಬಾವಲಿಯ ವಿಶಿಷ್ಟ ಪ್ರತಿಕಾಯ ಶಕ್ತಿ ದುರ್ಬಲವಾಗುತ್ತಾ ಹೋದಂತೆ, ಅವುಗಳಲ್ಲಿ ಒತ್ತಡ ಶುರುವಾಗುತ್ತದೆ. ಆಗಲೇ ಅವು ಇತರ ಪ್ರಭೇದಗಳಿಗೆ ಹರಡುವ ಕೆಲಸ ಮಾಡುತ್ತದೆ. ಅಲ್ಲದೆ, ಈ ವೇಳೆ ವೈರಾಣುಗಳು ದ್ವಿಗುಣಗೊಳ್ಳಲು ಶುರುವಾಗುತ್ತವೆ. ಇದರಿಂದ ಬಾವಲಿಗಳಲ್ಲಿ ಉರಿಯೂತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಡಾ| ವಿಕ್ರಂ ಮಿಶ್ರಾ ಹೇಳಿದ್ದಾರೆ. ಒಂಟೆಯ ಜೀವಕೋಶಗಳು ಕೂಡ ಕೊರೊನಾ ವೈರಾಣು ಗಳನ್ನು ದೀರ್ಘ‌ಕಾಲದ ವರೆಗೆ ಪೋಷಿಸುವ ಅಪಾಯಕಾರಿ ಶಕ್ತಿ ಹೊಂದಿರುವುದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next