Advertisement

ಬ್ಯಾಟಿಂಗ್‌ ರ್‍ಯಾಂಕಿಂಗ್ : 5ಕ್ಕೆ ಏರಿದ ವಿರಾಟ್‌ ಕೊಹ್ಲಿ, 4ಕ್ಕೆ ಇಳಿದ ಕೆ.ಎಲ್‌.ರಾಹುಲ್‌

11:11 PM Mar 17, 2021 | Team Udayavani |

ದುಬಾೖ: ಭಾರತ- ಇಂಗ್ಲೆಂಡ್‌ ನಡುವಿನ ಮೂರನೇ ಟಿ20 ಪಂದ್ಯದ ಬೆನ್ನಲೇ ಟಿ20 ರ್‍ಯಾಂಕಿಂಗ್‌ ಪರಿಷ್ಕೃತಗೊಂಡಿದೆ.

Advertisement

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ ಓಪನರ್‌ ಕೆ.ಎಲ್‌. ರಾಹುಲ್‌ ಒಂದು ಸ್ಥಾನ ಇಳಿಕೆ ಕಾಣುವ ಮೂಲಕ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಕೊಹ್ಲಿ 6ನೇ ಸ್ಥಾನದಲ್ಲಿದ್ದರು. ಆದರೆ ಸತತ 2 ಪಂದ್ಯಗಳಲ್ಲಿ ಅಜೇಯ ಅರ್ಧ ಶತಕ ಸಿಡಿಸುವ ಮೂಲಕ ಪ್ರಗತಿ ಸಾಧಿಸಿದರು. ಆದರೆ ಮೂರನೇ ಸ್ಥಾನದಲ್ಲಿದ್ದ ರಾಹುಲ್‌ ಸತತ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ಕಾರಣ ಒಂದು ಸ್ಥಾನ ಕುಸಿದರು. ಮೂರನೇ ಸ್ಥಾನವೀಗ ಪಾಕಿಸ್ಥಾನದ ಬಾಬರ್‌ ಆಜಂ ಪಾಲಾಗಿದೆ.

ಇಂಗ್ಲೆಂಡ್‌ನ‌ ಡೇವಿಡ್‌ ಮಾಲನ್‌ ಮತ್ತು ಆಸ್ಟ್ರೇಲಿಯದ ಆರನ್‌ ಫಿಂಚ್‌ ಕ್ರಮವಾಗಿ ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ :ಯೋಗೀಶ್‌ ಗೌಡ ಕೊಲೆ ಪ್ರಕರಣ : ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ರದ್ದು

Advertisement
Advertisement

Udayavani is now on Telegram. Click here to join our channel and stay updated with the latest news.

Next