Advertisement

ಬಸ್ತಿ ವಾಮನ ಶೆಣೈ ಅವರಿಗೆ ಅಂತಿಮ ನಮನ

02:58 AM Jan 06, 2022 | Team Udayavani |

ಮಂಗಳೂರು: ರವಿವಾರ ನಿಧನ ಹೊಂದಿದ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರ ಪಾರ್ಥಿವ ಶರೀರಕ್ಕೆ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರ ಹಾಗೂ ಬಂಟ್ವಾಳದ ತುಂಬೆಯ ಸ್ವಗೃಹದಲ್ಲಿ ಸೋಮವಾರ ಸಾರ್ವಜನಿಕವಾಗಿ ಅಂತಿಮ ನಮನ ಸಲ್ಲಿಸಲಾಯಿತು.

Advertisement

ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಕಾರ್ಯದರ್ಶಿ ಗಿರಿಧರ ಕಾಮತ್‌, ವಿದ್ಯಾರ್ಥಿವೇತನ ನಿಧಿಯ ಕಾರ್ಯ ದರ್ಶಿ ಪ್ರದೀಪ್‌ ಜಿ. ಪೈ, ಕೋಶಾಧಿಕಾರಿ ಬಿ.ಆರ್‌. ಭಟ್‌, ಉಪಾಧ್ಯಕ್ಷರಾದ ಗಿಲ್ಬರ್ಟ್‌ ಡಿ’ಸೋಜಾ ಮತ್ತು ಕುಡ್ಪಿ ಜಗದೀಶ್‌ ಶೆಣೈ, ಟ್ರಸ್ಟಿ ಗಳಾದ ಡಾ| ಕೆ. ಮೋಹನ್‌ ಪೈ, ಕೆ.ಬಿ. ಖಾರ್ವಿ, ನಾರಾಯಣ ನಾಯ್ಕ, ರಮೇಶ್‌ ನಾಯ್ಕ, ಮೆಲ್ವಿನ್‌ ರೊಡ್ರಿಗಸ್‌, ಶಕುಂತಳಾ ಆರ್‌. ಕಿಣಿ, ಮುರಳೀಧರ ಪ್ರಭು, ರಮೇಶ್‌ ಪೈ, ವೆಂಕಟೇಶ್‌ ಪ್ರಭು, ಜಿಸೆಲ್ಲಾ ಮೆಹ್ತಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳಕರ್‌, ಮಾಜಿ ಟ್ರಸ್ಟಿ ಅಲನ್‌ ಸಿ.ಎ. ಪಿರೇರಾ ಮತ್ತು ಕೊಂಕಣಿ ಭಾಸ್‌ ಆನಿ ಸಂಸ್ಕೃತಿ ಪ್ರತಿ ಷ್ಠಾನದ ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳು, ವಿದ್ಯಾರ್ಥಿ ವೇತನ ಯೋಜನೆಯ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು, ವಿಶ್ವ ಕೊಂಕಣಿ ಕೇಂದ್ರದ ಕಚೇರಿ ಸಿಬಂದಿ ಅಂತಿಮ ನಮನ ಸಲ್ಲಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಶಾಸಕ ಜೆ.ಆರ್‌. ಲೋಬೊ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ, ಯಕ್ಷಗಾನ ವಿಮರ್ಶಕ ಪ್ರೊ| ಎಂ. ಪ್ರಭಾಕರ ಜೋಶಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ್‌ ಪೈ, ಮಾಜಿ ಅಧ್ಯಕ್ಷ ರೊಯ್‌ ಕ್ಯಾಸ್ತೆಲಿನೊ, ಸಂತ ಅಲೋಶಿಯಸ್‌ ಕಾಲೇಜಿನ ಕೊಂಕಣಿ ಸಂಸ್ಥೆಯ ಅಧ್ಯಕ್ಷ ವಂ| ಮೆಲ್ವಿನ್‌ ಪಿಂಟೊ, ಕೊಂಕಣಿ ಭಾಷಾ ಮಂಡಲ ಕರ್ನಾಟಕದ ಮಾಜಿ ಅಧ್ಯಕ್ಷ ವಂ| ಎರಿಕ್‌ ಕ್ರಾಸ್ತಾ, ಮಾಂಡ್‌ ಸೊಭಾಣ್‌ ಗುರಿಕಾರ ಎರಿಕ್‌ ಒಝೇರಿಯೊ ಮತ್ತು ಅಧ್ಯಕ್ಷ ಲೂವಿಸ್‌ ಜೆ. ಪಿಂಟೊ, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಭಾರತ್‌ ಸಮೂಹ ಸಂಸ್ಥೆಯ ನಿರ್ದೇಶಕರಾದ ಸುಬ್ರಾಯ ಎಂ. ಪೈ ಮತ್ತು ಸುಧೀರ್‌ ಎಂ. ಪೈ ಮೊದಲಾದವರು ಅಂತಿಮ ಗೌರವ ಸಲ್ಲಿಸಿದರು.

ತುಂಬೆಯಲ್ಲಿ ಬಳಿಕ ಪಾರ್ಥಿವ ಶರೀರವನ್ನು ಬಂಟ್ವಾಳದ ತುಂಬೆಯ ಸ್ವಗೃಹಕ್ಕೆ ಕೊಂಡೊಯ್ದು ನಮನ ಸಲ್ಲಿಸಲಾಯಿತು.

ಶಾಸಕ ಯು.ಟಿ. ಖಾದರ್‌, ಕಸಾಪ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ತುಂಬೆ ಬಿ.ಎ. ಗ್ರೂಪ್‌ನ ಅಬ್ದುಲ್‌ ಸಲಾಂ ಮತ್ತು ಮಹಮದ್‌ ಅಶ್ರಫ್‌, ಚಿತ್ರೋದ್ಯಮ ಕ್ಷೇತ್ರದ ರಾಜೇಶ್‌ ಭಟ್‌, ಬಂಟ್ವಾಳ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಪ್ರವೀಣ್‌ ಕಿಣಿ, ರೋಟರಿ ಗವರ್ನರ್‌ ಪ್ರಕಾಶ್‌ ಕಾರಂತ ಮತ್ತು ಸ್ಥಳೀಯರು ಗೌರವ ಸಲ್ಲಿಸಿದರು. ಪುತ್ರರಾದ ಮಾಧವ ಮತ್ತು ದಿನೇಶ್‌, ಪುತ್ರಿ ವಿದ್ಯಾ ಕಿಣಿ ಉಪಸ್ಥಿತರಿದ್ದರು.
ಬಡ್ಡಕಟ್ಟೆಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Advertisement

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

ಬಿಷಪ್‌ ಸಂತಾಪ
ಬಸ್ತಿ ವಾಮನ ಶೆಣೈ ಅವರ ನಿಧನಕ್ಕೆ ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌  ಸಲ್ಡಾನ್ಹಾ ಸಂತಾಪ ವ್ಯಕ್ತಪಡಿಸಿದ್ದು, ಕೊಂಕಣಿ ಮಾತೃ ಭಾಷೆಯ ಮೇಲಣ ಪ್ರೀತಿ, ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಕೊಂಡು ಕೊಂಕಣಿಗಾಗಿ ನಡೆಸಿದ ಚಳವಳಿ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.ಮಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು ಅವರೂ ಸಂತಾಪ ಸೂಚಿಸಿದ್ದಾರೆ.

ಶ್ರದ್ಧಾಂಜಲಿ ಸಭೆ
ಬಸ್ತಿ ಅವರಿಗೆ ಶ್ರದ್ಧಾಂಜಲಿ ಸಭೆ ಜ. 8ರಂದು ಸಂಜೆ 4 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಲಿದೆ.

ಸಮಾಜ ಮುಖಿಯಾಗಿ ಸೇವೆ
ಬಸ್ತಿ ಅವರು ಬ್ಯಾಂಕ್‌ ಉದ್ಯೋಗಿಯಾಗಿದ್ದರೂ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಸಕ್ತಿ ತಳೆದು ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿದ್ದರು. ಬದುಕಿನ ಕೊನೇ ಕ್ಷಣದವರೆಗೂ ಭಾಷಾಭಿಮಾನ ಮೆರೆದಿದ್ದರು. ಮಂಗಳೂರು ವಿ.ವಿ.ಯ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿಯಲ್ಲಿದ್ದು, ಅನೇಕ ಸಲಹೆಗಳನ್ನು ನೀಡಿದ್ದರು.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ,
ಮಂಗಳೂರು ವಿ.ವಿ. ಕುಲಪತಿ

ಅಪೂರ್ವ ವ್ಯಕ್ತಿತ್ವದ ವಾಮನ ಶೆಣೈ
ವಾಮನ ಶೆಣೈ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದೆ. ಅನೇಕ ವೇದಿಕೆಗಳಲ್ಲಿ ಜತೆಯಾಗಿ ಭಾಗವಹಿಸಿದ್ದೆವು ಮತ್ತು ಕೆಲಸ ಮಾಡಿದ್ದೆವು. ಅವರೊಬ್ಬ ತಣ್ತೀಜ್ಞಾನಿ, ಸಂಘಟಕ, ಮಾನವ ಪ್ರೇಮಿಯಾಗಿ ಅಪೂರ್ವ ವ್ಯಕ್ತಿತ್ವ ಹೊಂದಿದ್ದರು. ಅವರು ಸ್ಥಾಪಿಸಿದ ವಿಶ್ವ ಕೊಂಕಣಿ ಕೇಂದ್ರ ವಿಶ್ವ ಮಾನವತಾ ಕೇಂದ್ರವಾಗಿದೆ.
-ಪ್ರೊ| ಬಿ.ಎ. ವಿವೇಕ ರೈ

Advertisement

Udayavani is now on Telegram. Click here to join our channel and stay updated with the latest news.

Next