Advertisement
ಸುಮಾರು 25 ವರ್ಷಗಳ ಹಿಂದೆ ಗುಲ್ವಾಡಿಯ ದಾಸರ ಬೆಟ್ಟಿನಲ್ಲಿ ಮಾತ್ರ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದರು. ಅಲ್ಲಿ ಬೆಳೆದ ಸಣ್ಣಕ್ಕಿ ಮಾತ್ರ ವಿಶೇಷ ಪರಿಮಳ ಬೀರುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಿದ್ದಾರೆ ಗುಲ್ವಾಡಿಯ ಹಿರಿಯ ಕೃಷಿಕ ಬಚ್ಚು ನಾಯ್ಕರು. ಸದ್ಯ ಸಣ್ಣಕ್ಕಿ ಖರೀದಿಸಲೂ ಸಿಗುವುದಿಲ್ಲ. ಕಾರಣ ತಳಿಯೇ ಅಳವಿನಂಚಿಗೆ ಬಂದಿದೆ.
ಪ್ರಸ್ತುತ ಗುಲ್ವಾಡಿಯ ಪ್ರಭಾಕರ ಟೆ„ಲ್ಸ್‌ನ ಮಾಲಕ ಪ್ರಶಾಂತ್ ತೋಳಾರ್ ಅವರು ಮಾತ್ರ ಗುಲ್ವಾಡಿಯ ದಾಸರಬೆಟ್ಟು ಎಂಬಲ್ಲಿ 80 ಸೆಂಟ್ಸ್ ಜಾಗದಲ್ಲಿ ಪ್ರಸಿದ್ಧ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದಾರೆ. ಆ ತಳಿ ಗುಲ್ವಾಡಿಯ ಇತರ ಯಾವುದೇ ರೈತರ ಬಳಿ ಇಲ್ಲ. ಗುಲ್ವಾಡಿಯ ಸಣ್ಣಕ್ಕಿಯ ಹಾಗೆ ಕಂದಾವರ ಗೆಣಸು, ಹಳನಾಡು ಗುಳ್ಳವನ್ನೂ ಉಳಿಸಿಕೊಳ್ಳಲಾಗಿಲ್ಲ. ಹೀಗೆ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಅನೇಕ ಪರಂಪರೆಯನ್ನು ನಾವಿಂದು ಉಳಿಸಿಕೊಳ್ಳದೇ ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿ ಹೋಗುತ್ತಿದ್ದೇವೆ. ಆದರೆ ಗುಲ್ವಾಡಿಯ ಸಣ್ಣಕ್ಕಿಯ ಪರಿಮಳ ಮಾತ್ರ ಎಂದೂ ಮಾಸದು.
Related Articles
ನಾವು ಗುಲ್ವಾಡಿಯ ದಾಸರ ಬೆಟ್ಟಿನಲ್ಲಿ ಸಣ್ಣ ಗದ್ದೆಯಲ್ಲಿ ಇತಿಹಾಸದ ಪುಟ ಸೇರಿದ ಗುಲ್ವಾಡಿಯ ಸಣ್ಣಕ್ಕಿಯನ್ನು ಬೆಳೆಯುತ್ತಿದ್ದೇವೆ. ಈ ಸಣ್ಣಕ್ಕಿಯನ್ನು ಮತ್ತು ನಮ್ಮ ಕುಟುಂಬದ ಆಪ್ತರಿಗಷ್ಟೆ ಉಪಯೋಗಿಸಲಾಗುತ್ತಿದೆ. ಗುಲ್ವಾಡಿಯ ಕೆಲವು ಆಸಕ್ತ ರೈತರು ಬಂದು ಕೇಳಿದಾಗ ಸಣ್ಣಕ್ಕಿ ಬೀಜವನ್ನು ಕೊಟ್ಟಿದ್ದೇವೆ. ಮುಂದಿನ ಜನಾಂಗಕ್ಕೆ ಈ ತಳಿಯನ್ನು ಉಳಿಸಿಕೊಳ್ಳುವುದು ಕಷ್ಟ.
–ಪ್ರಶಾಂತ್ ತೋಳಾರ್,
ಮಾಲಕರು ಪ್ರಭಾಕರ್ ಟೆ„ಲ್ಸ್ ಗುಲ್ವಾಡಿ.
Advertisement
ಉಳಿಸಿಕೊಳ್ಳಲಾಗಿಲ್ಲನಾನು ಪ್ರಶಾಂತ್ ತೋಳಾರ್ ಅವರ ಬಳಿ ಸಣ್ಣಕ್ಕಿ ಬೀಜ ತಂದು ನಮ್ಮ ಗದ್ದೆಯಲ್ಲಿ ಬೆಳೆಸಿ ನೋಡಿದೆ.ಆದರೆ ಅದು ಅಂದಿನ ಸಣ್ಣಕ್ಕಿಯ ಪರಿಮಳ ಬೀರಲಿಲ್ಲ. ಆ ರುಚಿಯೂ ಇರಲಿಲ್ಲ. ಸಣ್ಣಕ್ಕಿಯನ್ನು ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ.
-ನಾಗರಾಜ,
ಗುಲ್ವಾಡಿಯ ಕೃಷಿಕ