ನವದೆಹಲಿ/ ಕೇರಳ: ಸಿನಿಮಾಗಳು ನಿಜ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಮಾತಿಗೆ ಉದಾಹರಣೆ ಇತ್ತೀಚೆಗೆ ಮಾಲಿವುಡ್ ನಲ್ಲಿ ತೆರೆಕಂಡಿರುವ ಮಹಿಳಾ ಪ್ರಧಾನ “ಜಯ ಜಯ ಜಯ ಜಯ ಹೇ” ಸಾಕ್ಷಿಯಾಗಿದೆ. ಕೇರಳ ಮಾತ್ರವಲ್ಲದೆ ಎಲ್ಲೆಡೆಯಿಂದ ಸಿನಿಮಾದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ.
ಬೇಸಿಲ್ ಜೋಸೆಫ್ ಹಾಗೂ ದರ್ಶನ ರಾಜೇಂದ್ರನ್ ಮುಖ್ಯಭೂಮಿಕೆಯ “ಜಯ ಜಯ ಜಯ ಜಯ ಹೇ” ಅ.28 ರಂದು ತೆರೆಗೆ ಬಂದಿದೆ. ಈಗಾಗಲೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಬಗ್ಗೆ ನಟ ಬೇಸಿಲ್ ಜೋಸೆಫ್ ಮಾತನಾಡಿದ್ದಾರೆ.
ಜಯ ಜಯ ಜಯ ಜಯ ಹೇ , ಡಾರ್ಲಿಂಗ್ಸ್ ನಂತಹ ( ಆಲಿಯಾ ಭಟ್ ಅಭಿನಯದ ಚಿತ್ರ) ಕಮರ್ಷಿಯಲ್ ಚಿತ್ರಗಳ ಒಳ್ಳೆಯ ವಿಷಯವೆಂದರೆ ಇಂತಹ ಸಿನಿಮಾಗಳ ಕಥೆ ಹೇಳುವ ರೀತಿ ವ್ಯಂಗ್ಯವಾಗಿರುತ್ತದೆ. ಸಿನಿಮಾ ನೋಡಿದ ಬಳಿಕ ಅನೇಕ ಪೋಷಕರು ನನಗೆ ಕರೆ ಮಾಡಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಕರಾಟೆ ತರಗತಿಗೆ ಕಳುಹಿಸಿದ್ದಾರೆ. ಮುಂದಿನ ಪೀಳಿಗೆಗೆ ಇದು ತುಂಬಾ ಮಹತ್ವದಾಗಿದೆ. ಈ ಸಿನಿಮಾವನ್ನು ಹುಡುಗರಿಗೆ ತೋರಿಸಬೇಕು. ಖಂಡಿತವಾಗಿಯೂ ಅವರ ಮೇಲೆ ಸಿನಿಮಾ ಪರಿಣಾಮ ಬೀಳುತ್ತದೆ. ಒಂದನ್ನು ನಾನು ಪೂರ್ತಿಯಾಗಿ ಹೇಳಲಾರೆ ಆದರೂ ಸ್ವಲ್ವ ಹೇಳುತ್ತೇನೆ. ನಮ್ಮ ಸಿನಿಮಾ ನೋಡಿದ ಮೇಲೆ ಒಬ್ಬ ಹೆಂಗಸು ತನ್ನ ಗಂಡನಿಗೆ ಒದ್ದು ಆಚೆ ಹಾಕಿದ್ದಾಳೆ. ತನ್ನ ಗಂಡನ ವರ್ತನೆಯನ್ನು ಸಹಿಸದೆ ಆಕೆ ಮುಖಕ್ಕೆ ಹೊಡೆದಿದ್ದಾಳೆ. ಈ ಸಂಬಂಧ ಕೇಸ್ ಕೂಡ ದಾಖಲಾಗಿದೆ. ಕೌಟುಂಬಿಕ ಹಿಂಸೆ ಸಿನಿಮಾದಲ್ಲಿ ಧ್ವನಿ ಎತ್ತಿದೆ ಎಂದರು.
ಸಾಕಷ್ಟು ಮಹಿಳೆಯರು ಸಿನಿಮಾ ನೋಡಿ ಭಾವುಕರಾಗಿದ್ದಾರೆ. ಇದು ನಮಗೆ ಸಂಬಂಧಿಸಿದಾಗಿದೆ ಎಂದರು. ಮಹಿಳೆಯರು ಸಿನಿಮಾ ನೋಡಿ ಜಯ ಜಯ ಜಯ ಜಯ ಹೇ.. ಎಂದು ಹಾಡಿ ಕುಣಿದಿದ್ದಾರೆ ನಾವು ಕೂಡ ಅವರೊಂದಿಗೆ ಹೆಜ್ಜೆ ಹಾಕಿದ್ದೇವೆ ಎಂದು ಪಿಂಕ್ ವಿಲ್ಲಾಕ್ಕೆ ತಿಳಿಸಿದ್ದಾರೆ.
“ನಾನು ಯಾವಾಗಲು ನಿರ್ದೇಶಕನಾಗಬೇಕೆಂದು ಯೋಜನೆ ಹಾಕಿಕೊಂಡವ. ನಟನೆಗೆ ಆಕಸ್ಮಿಕವಾಗಿ ಬಂದೆ. ನಾನು ನಿರ್ದೇಶಕನಾಗಿದ್ದಾಗ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದೆ. ಬಳಿಕ ನಿಧಾನವಾಗಿ ದೊಡ್ಡ ಪಾತ್ರಗಳನ್ನು ಮಾಡುತ್ತಾ ಬಂದೆ. ನಿರ್ದೇಶಕನಿಗೆ ನಟನೆ ಒಂದು ಕಂಫರ್ಟ್ ಝೋನ್ ( ಆರಾಮ ದಾಯಕ ವಲಯ) ಅಲ್ಲಿ ಯಾವುದೇ ಒತ್ತಡ ಜವಾಬ್ದಾರಿ ಇರುವುದಿಲ್ಲ. ಆದರೆ ಮುಖ್ಯ ಪಾತ್ರವನ್ನು ನಿಭಾಯಿಸುವುದು ದೊಡ್ಡ ಸವಾಲು” ಎಂದರು.
ವಿಪಿನ್ ದಾಸ್ ನಿರ್ದೇಶನ ಮಾಡಿರುವ “ಜಯ ಜಯ ಜಯ ಜಯ ಹೇ” ಮದುವೆಯಾಗಿ ಬಂದ ಮಹಿಳೆಯೊಬ್ಬರು ಶಿಕ್ಷಣವನ್ನು ಮುಂದುವರೆಸುವ ಇರಾದೆಯನ್ನು ಹೊಂದುತ್ತಾರೆ. ಆದರೆ ಆಕೆಗೆ ಕೌಟುಂಬಿಕ ಹಿಂಸೆ ಎದುರಾಗುತ್ತದೆ. ಇದರ ಸುತ್ತವೇ ಸಿನಿಮಾ ಸಾಗುತ್ತದೆ.