Advertisement
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ನಿಲಯದ ಅವ್ಯವಸ್ಥೆ ಇದಾಗಿದ್ದು, ಇಲ್ಲಿ ಹೇಳ್ಳೋರು ಕೇಳ್ಳೋರು ಯಾರು ಇಲ್ಲದಂತಾಗಿದೆ. ಉತ್ತಮ ಪರಿಸರದಲ್ಲಿ ವ್ಯಾಸಂಗ ಮಾಡಬೇಕಾದ ಮಕ್ಕಳು ಕೊಳಕು ಮತ್ತು ಅನೈರ್ಮಲ್ಯದ ನಡುವೆಯೇ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಕಟ್ಟಿದ್ದು ಕೊಡಲಿಲ್ಲ ಮಕ್ಕಳ ಪಾಡು ಕೇಳಲಿಲ್ಲ: ಚುಂಚನಕಟ್ಟೆ ಹೋಬಳಿಯ ಸಕ್ಕರೆ ಗ್ರಾಮದಲ್ಲಿ ನಿರ್ಮಿಸಿರುವ ಮೊರಾರ್ಜಿ ವಸತಿ ಶಾಲೆಯ ಕಟ್ಟಡದಲ್ಲಿ ಸ್ಥಳಾವಕಾಶ ನೀಡಲು ಮೀನಮೇಷ ಎಣಿಸುತ್ತಿದ್ದು ಕಳೆದ 2 ತಿಂಗಳ ಹಿಂದೆಯೇ ಅಲ್ಲಿಗೆ ಸ್ಥಳಾಂತರ ಮಾಡಲು ಶಾಸಕ ಸಾ.ರಾ ಮಹೇಶ್ ಆದೇಶ ಮಾಡಿದ್ದರೂ ಅಧಿಕಾರಿಗಳು ಶುಭಗಳಿಗೆ ಹುಡುಕುತ್ತಿದ್ದಾರೇನೋ ಎಂಬಂತಾಗಿದೆ. ಇಲ್ಲಿಗೆ ಮಕ್ಕಳನ್ನು ದಾಖಲು ಮಾಡಿದ ಪೋಷಕರು ಅಲ್ಲಿನ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಇಲ್ಲ ಮಕ್ಕಳನ್ನು ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದು ಅಧಿಕಾರಿಗಳು ಮಾತ್ರ ಇಂದು-ನಾಳೆ ಎಂದು ಕಾಲತಳ್ಳುತ್ತಿದ್ದಾರೆ.
ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಕೋಟ್ಯಂತರ ರೂ.ಗಳನ್ನು ಸುರಿಯುತ್ತಿದ್ದರೂ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ಬಡಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆಯಲ್ಲಿ ಕಲಿಕೆ ನೀಡಲು ಸಾಧ್ಯವಾಗದಿ ರುವುದಕ್ಕೆ ಇದು ಸಾಕ್ಷಿಯಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ವಸತಿ ನಿಲಯ ಸ್ಥಳಾಂತರಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.
ಇನ್ನೊಂದು ವಾರದೊಳಗೆ ಅಂಬೇಡ್ಕರ್ ವಸತಿ ನಿಲಯದ ಮಕ್ಕಳನ್ನು ಸ್ಥಳಾಂತರ ಮಾಡಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದ ತಡವಾಗಿದ್ದು ಆದಷ್ಟು ಬೇಗ ಮಕ್ಕಳಿಗೆ ಉತ್ತಮ ಕಟ್ಟಡ ಸಿಗಲಿದೆ.● ಅಶೋಕ್, ಸಿಡಿಪಿಒ,
ಸಮಾಜ ಕಲ್ಯಾಣ ಇಲಾಖೆ ಸದ್ಯ ಈ ಕಟ್ಟಡ ನಮಗೆ ತಾತ್ಕಾಲಿಕವಾಗಿ ರುವುದರಿಂದ ಕೆಲವು ತೊಂದರೆಗಳಿದ್ದು ಸಕ್ಕರೆ ಗ್ರಾಮದಲ್ಲಿ ನಿರ್ಮಿಸಿರುವ ಮೊರಾರ್ಜಿ ವಸತಿ ಶಾಲೆಯ ಕಟ್ಟಡದಲ್ಲಿ ನಮ್ಮ ಮಕ್ಕಳಿಗಾಗಿ ಉತ್ತಮ ಕಟ್ಟಡ ನಿರ್ಮಾಣ ವಾಗಿದ್ದು ಸದ್ಯದಲ್ಲಿಯೇ ಸ್ಥಳಾಂತರ ಮಾಡಲಾಗುವುದು.
● ಸುರೇಶ, ಪ್ರಾಂಶುಪಾಲರು, ಅಂಬೇಡ್ಕರ್
ವಸತಿ ಶಾಲೆ, ಹೊಸೂರು ಆನಂದ್ ಹೊಸೂರು