Advertisement

ಶಿಕ್ಷಕರ ದಿನಾಚರಣೆಯಲ್ಲಿ ಕಡೆಗಣನೆ; ಅಸಮಾಧಾನ

02:21 PM Sep 06, 2020 | Suhan S |

ಹುಬ್ಬಳ್ಳಿ: ಶಿಕ್ಷಕರ ದಿನಾಚರಣೆ ಸಮಾರಂಭದ ವೇದಿಕೆಯಲ್ಲಿನ ಇನ್ನಿತರರಿದ್ದರು. ಅತಿಥಿಗಳು ಯಾರು ಇರಬೇಕು ಎಂಬುದರ ವಿಚಾರದಲ್ಲಿ ಸರಕಾರದ ಸುತ್ತೋಲೆಯಲ್ಲಿ, ವಿಧಾನ ಪರಿಷತ್‌ ಸದಸ್ಯರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರನ್ನು ಕಡೆಗಣಿಸಲಾಗಿದೆ. ಇದು ವಿಧಾನ ಪರಿಷತ್‌ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದು, ಜಿಲ್ಲಾಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳೀಯ ಶಾಸಕರು, ತಾಪಂ ಇಒ, ತಹಶೀಲ್ದಾರ್‌ ಹಾಗೂ ಬಿಇಒ ಆಸೀನರಾಗುವಂತೆ ವೇದಿಕೆ ಸಿದ್ಧಪಡಿಸಬೇಕು ಸೇರಿದಂತೆ ವೇದಿಕೆ ಮುಂಭಾಗ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಗೆ ಅವಕಾಶ ಕಲ್ಪಿಸುವಂತೆ ಸುತ್ತೋಲೆಯಲ್ಲಿ ಮಾರ್ಗಸೂಚಿ ನೀಡಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯರು

ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರನ್ನು ಕಡೆಗಣಿಸಲಾಗಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ವೇದಿಕೆಗಳಲ್ಲಿ ವಿಧಾನ ಪರಿಷತ್ತಿಗೆ ಸ್ಥಾನ ಇರಲ್ಲ. ಸರಕಾರದ ಈ ನಡೆ ಇದು ನಮಗೆ ಅವಮಾನ ಮಾಡಿದಂತಾಗಿದೆ. ಈ ಮಹತ್ವದ ಕಾರ್ಯಕ್ರಮದಿಂದ ನಮ್ಮನ್ನು ದೂರ ಇರಿಸುವ ಪ್ರಯತ್ನ ಮಾಡಿರುವುದು ನಮ್ಮ ಹಕ್ಕಿಗೆ ಚ್ಯುತಿ ಮಾಡಿದಂತಾಗಿದೆ. ಇದರಿಂದ ಸಾಕಷ್ಟು ಸದಸ್ಯರಲ್ಲಿ ನೋವುಂಟು ಮಾಡಿದೆ. ಈ ನಿಮ್ಮ ಕ್ರಮದಿಂದ ಶಿಕ್ಷಕರ ಮತಕ್ಷೇತ್ರದಿಂದ ಚುನಾಯಿತ ಪ್ರತಿನಿಧಿಯಾದ ನಮಗೆ ಶಿಕ್ಷಕರೇ ನಮ್ಮ ಮತದಾರರಾಗಿದ್ದು, ಈ ಮಹತ್ವದ ಶಿಕ್ಷಕರ ದಿನಾಚರಣೆಯ ವೇದಿಕೆಯಲ್ಲಿ ನಮಗೆ ಸ್ಥಾನ ಇಲ್ಲದಿರುವುದು ಅತ್ಯಂತ ವಿಷಾದನೀಯ ಮತ್ತು ಮನಸ್ಸಿಗೆ ಬೇಸರ ತರುವಂತಹ ಸಂಗತಿ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next