Advertisement

ಬಸವಸಾಗರಕ್ಕೆ 130 ಕೋಟಿ ಅನುದಾನ! ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ

04:50 PM Oct 01, 2020 | sudhir |

ಸುರಪುರ: ಈ ಭಾಗದ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯ ಅಭಿವೃದ್ದಿಗೆ ಕೇಂದ್ರ ಸರಕಾರ 130 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದರಲ್ಲಿ ಜಲಾಶಯದ ನಿರ್ವಹಣೆ ಜತೆಗೆ ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ಅಧ್ಯಕ್ಷ ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು 1982ರಲ್ಲಿ ಬಸವಸಾಗರ ಜಲಾಶಯ ನಿರ್ಮಿಸಲಾಗಿದೆ. ಆದರೆ ಅಭಿವೃದ್ಧಿಗಾಗಿ ಈವರೆಗೆ ಯಾವುದೇ ಅನುದಾನ ಮಂಜೂರಾಗಿರಲಿಲ್ಲ. ಈ ಭಾಗದ ಸಂಸದರು, ಶಾಸಕರು, ಸಚಿವರ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರ 2020-21ನೇ ಸಾಲಿನ (ಟ್ರಿಪ್‌) ಜಲಾಶಯ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ: ಕುಮಾರಸ್ವಾಮಿ

ಈ ಅನುದಾನದದಲ್ಲಿ 70 ಲಕ್ಷ ರೂ. ಜಲಾಶಯ ನಿರ್ವಹಣೆಗೆ ಬಳಸಲಾಗುವುದು. ಗೇಟ್‌ ಅಟೋಮೇಷನ್‌, ಸಿಸಿ ಕ್ಯಾಮೆರಾ ಅಳವಡಿಕೆ, ಎಷ್ಟಿ ವಾಲ್‌ ನಿರ್ಮಾಣ ಸೇರಿದಂತೆ ಜಲಾಶಯದ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಸಲಾಗುವುದು. 60 ಲಕ್ಷ ರೂ. ವೆಚ್ಚದಲ್ಲಿ ಜಲಾಶಯದ ಕೆಳಗಡೆಯ 300 ಎಕರೆ ಪ್ರದೇಶದಲ್ಲಿ ಆಲಮಟ್ಟಿಯ ಲಾಲಬಾಹದ್ದೂರ ಶಾಸ್ತ್ರೀ ಜಲಾಶಯದ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಿ ಪವಾಸಿ ತಾಣವನ್ನಾಗಿ ರೂಪಿಸ ಲಾಗುವುದು ಎಂದು ತಿಳಿಸಿದರು.

ಡ್ಯಾಂ ಹತ್ತಿರದ ಜಾವೂರ ಕ್ರಾಸ್‌ನಿಂದ ಜಲಾಶಯದ ಮುಂಭಾಗದವರೆಗೆ ಜೋಡು ರಸ್ತೆ, ರಸ್ತೆ ವಿಭಜಕ ಅಳವಡಿಸಿ ಎರಡು ಕಡೆ ದೀಪಗಳ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರ ವೀಕ್ಷಣಾ ಛಾವಣಿ, ಮಾಹಿತಿ ಕೇಂದ್ರ, ತಂಗುದಾಣ, ವಿಶ್ರಾಂತಿ ಕೋಣೆ, ಸ್ನಾನ ಗೃಹ, ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಿ ಪ್ರವಾಸಿ ತಾಣವಾಗಿ ನಿರ್ಮಿಸಲಾಗುವುದು ಜೊತೆಗೆ ಪುಷ್ಪೋಧ್ಯಾನ ಮತ್ಸಗಾರ, ಎಡ ಹಾಗೂ ಬಲದಂಡೆ ಕಾಲುವೆಗಳ ನೀರಾವರಿ ಯೋಜನೆಗೆ ಒಳಪಡುವ ಜಿಲ್ಲೆಗಳ ಸಮಗ್ರ ಕೃಷಿ ಮಾಹಿತಿ ಚಿತ್ರ ಪಟ ಬಿಡಿಸಲಾಗುವುದು.

Advertisement

ಜೊತೆಗೆ ಈ ಬಾಗದ ಜನಜೀವನ, ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಅನಾವರಣಗೊಳಿಸಲಾಗುವುದು. ಈ ಎಲ್ಲ ಅಭಿವೃದ್ಧಿಗಳ ಕುರಿತು ಈಗಾಗಲೇ ನೀಲ ನಕ್ಷೆ ಸಿದ್ದಪಡಿಸಲು ಡ್ಯಾಂ ಅಧಿಕಾರಿ ಮುಖ್ಯ ಎಂಜಿನಿಯರ್‌ ರಂಗರಾಮ್‌ ಅವರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next