Advertisement
ತಮ್ಮ ರಕ್ತ ಚೆಲ್ಲಿಯಾದರೂ ಭಾರತಮಾತೆಯ ರಕ್ಷಣೆ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಹತ್ತಾರು ಕೆಜಿಗಳ ಸಿಡಿ ಮದ್ದುಗುಂಡುಗಳನ್ನು ರಕ್ಷಣ ಸಾಮಗ್ರಿಗಳನ್ನು ಬೆನ್ನಿಗೆ ವರಿಸಿ ಗಾಳಿ, ಮಳೆ, ಚಳಿ, ಬಿಸಿಲು ಎನ್ನದೆ ದುರ್ಗಮ ಮಾರ್ಗದಲ್ಲಿ ಸಂಚರಿಸಿ ಶತ್ರುಗಳ ದಾಳಿಯನ್ನು ಎದುರಿಸಲು ಗಡಿಭಾಗದಲ್ಲಿ ತಯಾರಾಗಿರುವ ಸೈನಿಕರೆಂದರೆ ಪ್ರತಿಯೋರ್ವ ಭಾರತೀಯನೂ ಗೌರವಿಸಬೇಕಾದ ವ್ಯಕ್ತಿತ್ವ. ತಮ್ಮ ತಂದೆ ತಾಯಿ ಬಂಧು ಬಳಗದಿಂದ ದೂರ ಇದ್ದು, ದೇಶಕ್ಕಾಗಿ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಕಾರ್ಯನಿರ್ವಹಿಸುತ್ತಾರೆ. ಅಂತವರಲ್ಲಿ ಒಬ್ಬರು ಬಸವರಾಜ ನಾಗಪ್ಪ ನರ್ತಿ.
Related Articles
Advertisement
ಮೊದಲು ಮಹಾರಾಷ್ಟ್ರದ ನಾಸಿಕ ತರಬೇತಿ ಕೇಂದ್ರಕ್ಕೆ ಪೋಸ್ಟಿಂಗ್ ಆಗುತ್ತದೆ. ಅನಂತರ ತಮಿಳುನಾಡಿನ ಕೊಯುಮತ್ತೂರಿಗೆ ಅಲ್ಲಿಂದ ಜಮ್ಮು-ಕಾಶ್ಮೀರದ ಗಡಿಗೆ.
ಅಲ್ಲಿಂದ ಮುಂದೆ ಪ್ರತೀ ಕ್ಷಣ ಸಾವಿನೊಂದಿಗೆ ಸೆಣಸಾಡುವ ಜೀವನ ಪ್ರಾರಂಭವಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಯಾವತ್ತೂ ಯುದ್ಧಭೀತಿ ಇದೆ ಎಂದಲ್ಲ. ಆದರೆ ಯಾವ ಕ್ಷಣ ಬೇಕಾದರೂ ದಾಳಿಯಾಗಬಹುದುನ್ನುವ ಸನ್ನಿವೇಶ ಕಾಡುತ್ತಿರುತ್ತದೆ.
ಉಗ್ರರನ್ನು ಸದೆ ಬಡಿದ ಕ್ಷಣ :
ಅದೊಂದು ದಿನ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪದಕರು ಇರುವ ಜಾಗದ ಬಗ್ಗೆ ಸುಳಿವು ಸಿಗುತ್ತ¤ದೆ. ಬಸವರಾಜ ನಾಗಪ್ಪ ಅವರ ತಂಡದಲ್ಲಿ ಕೇವಲ 4 ಮಂದಿ ಇರುತ್ತಾರೆ. ಉಗ್ರರ ಅಡಗು ತಾಣದ 300 ಮೀಟರ್ ಜಾಗವನ್ನು ಕವರ್ ಮಾಡುತ್ತಾರೆ. ಈ ವೇಳೆಗೆ ಉಗ್ರರಿಗೆ ಸೈನ್ಯ ಆಕ್ರಮಣದ ಬಗ್ಗೆ ಮಾಹಿತಿ ತಿಳಿದು, 3 ಜನ ಆಂತಕವಾದಿಗಳು ಫೈರಿಂಗ್ ಮಾಡುತ್ತಾರೆ. ಬಸವರಾಜ ನಾಗಪ್ಪ ಅವರ ತಂಡ ಸುತ್ತುವರೆದು ಉಗ್ರರ ಮೇಲೆ ಕೌಂಟರ್ ಅಟ್ಯಾಕ್ ಮಾಡುತ್ತಾರೆ. ಆಗ ಕೆಲವು ಸೈನಿಕರಿಗೆ ಗುಂಡು ಬಿದ್ದು ರಕ್ತ ಸುರಿಯುತ್ತಿದ್ದರೂ. ಇಬ್ಬರು ಉಗ್ರರನ್ನು ಯಶಸ್ವಿಯಾಗಿ ಸೆರೆಹಿಡಿಯುವಲ್ಲಿ ಸಫಲರಾಗುತ್ತಾರೆ.
ಯುವ ಜನರಿಗೆ ಪ್ರೇರಣೆ:
ಬಸವರಾಜ ನಾಗಪ್ಪ ಅವರು ತಮ್ಮ ರಜೆ ದಿನಗಳಲ್ಲಿ ಊರಿಗೆ ಬಂದಾಗ ಸುಮ್ಮನೇ ಕಾಲ ಹರಣ ಮಾಡದೇ ಆರ್ಮಿ ಸೇರಲು ತಯಾರಿ ನಡೆಸುತ್ತಿರುವ ಯುವಕ-ಯುವತಿಯರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ ಮತ್ತು ಯುವ ಜನಾಂ ಗವನ್ನು ದೇಶಸೇವೆ ಮಾಡಲು ಹುರಿದುಂಬಿಸಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನ ಪಡೆದ ಓರ್ವ ಯುವಕ ಆರ್ಮಿಯಲ್ಲಿ ಕರ್ತವ್ಯ ಮಾಡುತ್ತಿದ್ದಾನೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ರ್ಯಾಲಿಯಲ್ಲಿ 3 ಜನ ಆಯ್ಕೆಯಾಗಿ ದ್ದಾರೆ.
ನನ್ನ ಪುಣ್ಯ : ರಜೆಗೆ ಊರಿಗೆ ಬಂದು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ಊರಿನ ಯುವಪಡೆಗೆ ಮಾರ್ಗದರ್ಶನ ಮಾಡುತ್ತೇನೆ. ಅದು ನನಗೆ ಹೊರೆ ಎನಿಸುವುದಿಲ್ಲ. ಬದಲಾಗಿ ನನ್ನ ಕರ್ತವ್ಯ. ಈ ದೇಶವನ್ನು ರಕ್ಷಿಸುವುದು ನನ್ನ ಪರಮ ಆದ್ಯ ಕರ್ತವ್ಯ ಹೇಗೋ ಹಾಗೆಯೇ ನನ್ನ ಹಾಗೆ ನಮ್ಮ ಊರಿನ ಯುವಕರು ಭಾರತಾಂಬೆಯ ರಕ್ಷಣೆ ಕೆಲಸದಲ್ಲಿ ಭಾಗಿಯಾಗಲು ಸಹಕರಿಸುತ್ತಿರುವುದು ನನ್ನ ಪುಣ್ಯ. -ಬಸವರಾಜ ನಾಗಪ್ಪ ನರ್ತಿ
ಸೌಭಾಗ್ಯ ಬಸವರಾಜ ಕುಂದಗೋಳ
ಎಸ್‌ಜೆಎಂವಿಎಸ್ ಮಹಿಳಾ ವಿದ್ಯಾಲಯ ಹುಬ್ಬಳ್ಳಿ