Advertisement

Haveri; ಮಹದಾಯಿ ಯೋಜನೆಗೆ ಹಿನ್ನಡೆ ಮಾಡಿರುವುದು ಕಾಂಗ್ರೆಸ್: ಬಸವರಾಜ ಬೊಮ್ಮಾಯಿ ‌

03:34 PM Sep 08, 2024 | Team Udayavani |

ಹಾವೇರಿ: ಮಹದಾಯಿ ಯೋಜನೆಗೆ ಯಾರಾದರೂ ಹಿನ್ನಡೆ ಮಾಡಿದ್ದರೆ ಅದು ಕಾಂಗ್ರೆಸ್. ಮಹಾದಾಯಿ ಹನಿ ನೀರನ್ನು ರಾಜ್ಯಕ್ಕೆ ಕೊಡಲ್ಲ ಎಂದು ಹಿಂದೆಯೇ ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದ್ದರು ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು.

Advertisement

ಮಹದಾಯಿ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಸಚಿವ ಎಚ್.ಕೆ.ಪಾಟೀಲ್ ಹೇಳಿಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು, ಟ್ರಿಬ್ಯುನಲ್ ಅಧ್ಯಕ್ಷರಿಗೆ ಒಂದು ಆಫೀಸ್ ಕೂಡಾ ಕೊಡಲಿಲ್ಲ, ವಿಳಂಬ ಮಾಡಿದ್ದರು. ಟ್ರಿಬ್ಯುನಲ್ ನಲ್ಲಿ ನಾವೇ ಬರೆದು ಕೊಟ್ಟು, ನಾವು ನಿರ್ಮಿಸಿದ ಇಂಟಲ್ ಲಿಂಕಿಂಗ್ ಕೆನಾಲ್ ಗೆ ಗೋಡೆ ಕಟ್ಟಿದರು ಎದೆಲ್ಲಾ ಇತಿಹಾಸದಲ್ಲಿದೆ. ಈಗ ವೈಲ್ಡ್ ಲೈಫ್ ಬೋರ್ಡ್ ಅನುಮತಿ ತೆಗೆದುಕೊಳ್ಳಬೇಕು. ಅದಕ್ಕೆ ಈಗಾಗಲೇ ಕೇಂದ್ರ ಸಚಿವ ಜೋಶಿಯವರು ಉತ್ತರ ಕೊಟ್ಟಿದ್ದಾರೆ. ನಮಗೆ ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.

11 ವಿಧೇಯಕಗಳನ್ನು ವಾಪಾಸ್ ಕಳಿಸಿದ್ದಕ್ಕೆ ರಾಜ್ಯಪಾಲರ ವಿರುದ್ದ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ ಚಿಂತನೆ ವಿಚಾರಕ್ಕೆ ಮಾತನಾಡಿದ ಅವರು, ಕಾನೂನು ಹೋರಾಟ ಮಾಡಲು ಅವಕಾಶವಿದೆ, ಮಾಡಲಿ. ಆಗ ವಿದೇಯಕಗಳು ಯಾಕೆ ವಾಪಾಸ್ ಕಳಿಸಲಾಯಿತು ಎಂಬುದು ಬಹಿರಂಗವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ 40% ಬಿಲ್ಡಿಂಗ್ ಕಟ್ಟುವುದಕ್ಕೆ ಅನುಮತಿ ಕೊಟ್ಟಿದಾರೆ. ಅದಕ್ಕೆ ಅತ್ಯಂತ ಕಡಿಮೆ ದರದ ರೇಟ್ ಫಿಕ್ಸ್ ಮಾಡಿದ್ದಾರೆ. ಹೀಗಾದಾಗ ಡ್ರೇನೇಜ್, ರಸ್ತೆಗಳಿಗೆ ಎಲ್ಲಾ ಸಮಸ್ಯೆಯಾಗುತ್ತದೆ. ಅದು ಅರ್ಬನ್ ಡೆವಲಪ್ಮೆಂಟ್ ಲಾ ವಿರುದ್ದವಿದೆ. ನಾವಿದ್ದಾಗ ಅದನ್ನು ರಿಜೆಕ್ಟ್ ಮಾಡಿದ್ದೆವು ಎಂದರು.

ಬೆಂಗಳೂರಿಗೆ ಶರಾವತಿ ನೀರು ಯೋಜನೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಶರಾವತಿ ನದಿ ನೀರಿನ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಲ್ಲ. ಕಮೆಂಟ್ ಮಾಡಲ್ಲ ಅಂದರೆ ಅದಕ್ಕೆ ಅರ್ಥ ಇದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next