Advertisement

ಯಾವುದಕ್ಕೂ ಅಂಜುವುದಿಲ್ಲ..ಒಂಟಿಸಲಗ ನಾನು: ಶೋಕಾಸ್ ನೋಟಿಸ್ ಸುದ್ದಿಗೆ ಯತ್ನಾಳ್ ಪ್ರತಿಕ್ರಿಯೆ

05:17 PM Feb 12, 2021 | Team Udayavani |

ಬೆಂಗಳೂರು: ನನಗೆ ನೋಟಿಸ್ ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ, ಆದರೆ ನೊಟೀಸ್ ನ ಪ್ರತಿ ಇನ್ನೂ ನನ್ನ ಕೈಸೇರಿಲ್ಲ, ಊಹಾಪೋಹದ ಆಧಾರದಲ್ಲಿ ನಾನು ಏನನ್ನೂ  ಮಾತನಾಡುವುದಿಲ್ಲ. ನಾಳೆ ನೋಟೀಸ್ ಬಂದರೆ ಅದನ್ನು  ಓದಿಕೊಂಡು ನಂತರ  ಸ್ಪಷ್ಟನೆ ಕೊಡುತ್ತೇನೆ ಎಂದು ವಿಜಯಪುರ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟೀಸ್ ಜಾರಿಗೊಳಿಸಿರುವ ಸುದ್ದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಪಕ್ಷದ ವಿರುದ್ಧ ಯಾವ ಕೆಲಸವನ್ನೂ ಮಾಡಿಲ್ಲ,ರಾಷ್ಟ್ರ ನಾಯಕರ ವಿರುದ್ಧವೂ ಯಾವ  ಹೇಳಿಕೆಯನ್ನೂ  ಕೊಟ್ಟಿಲ್ಲ ನಾನು ಯಾವುದಕ್ಕೂ ಅಂಜುವುದಿಲ್ಲ. ‘ನ ದಯಾನಂ ನ ಪಲಾಯಂ ಸತ್ಯಮೇವ ಜಯತೇ’ ಎಂದಿದ್ದಾರೆ.

ನಾನು ಮಂತ್ರಿಯಾಗಲ್ಲ. ಆದರೆ ಮಂತ್ರಿ ಆಗುವುದಿಲ್ಲ  ಎನ್ನುವ  ಅಸಮಧಾನದಿಂದ ಯತ್ನಾಳ್ ಹೀಗೆ ಮಾತನಾಡುತ್ತಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ನಾನು ಮಂತ್ರಿ ಆಗಬೇಕು ಎಂದು ಎಲ್ಲೂ, ಯಾವತ್ತೂ ಹೇಳಿಲ್ಲ ಎಂದಿರುವ ಅವರು, ನಾನು ಸದಾ ಜನಪರ ವಾಗಿರುತ್ತೇನೆ. ಹಾಗಾಗಿಯೇ ಜನಪರ ಹೇಳಿಕೆ ಕೊಟ್ಟಿದ್ದೇನೆ ಅಷ್ಟೇ. ಇದನ್ನು ಹೊರತುಪಡಿಸಿ ನಾನು ಮಂತ್ರಿ ಆಗಬೇಕು ಎಂದು ಮನಸ್ಸು ಮಾಡಿದವನಲ್ಲ ಎಂದು ನುಡಿದರು.

ಇದನ್ನೂ ಓದಿ:ರಾಜ್ಯಸಭೆ ವಿರೋಧದ ಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ, ಗುಲಾಂ ನಬಿ ಫೆ.15ಕ್ಕೆ ನಿವೃತ್ತಿ

ಸಿದ್ದರಾಮಯ್ಯ, ಜೆ ಎಚ್ ಪಟೇಲ್, ವೀರೇಂದ್ರ ಪಾಟೀಲರೇ ನನ್ನ ಹೊಗಳಿದ್ದಾರೆ. ಆದರೆ ನಾನು ಯಾರ ಮುಲಾಜಿನಲ್ಲೂ ಇಲ್ಲ. ನನ್ನ ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡಿದವನಲ್ಲ. ಮೋದಿಯವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯಲಿಲ್ಲ ಎಂದರೆ ನಾನು ಟೀಕೆ ಮಾಡುತ್ತೇನೆ. ನಾನು ಯಾಕೆ ಮಾತಾಡಿದೆ ಅಂತ ತಿಳಿಸುತ್ತೇನೆ.. ಯಾವ ಕಾರಣಕ್ಕಾಗಿ ನಾನು ಹೇಳಿಕೆ ಕೊಟ್ಟೆ ಎಂದು ಸ್ಪಷ್ಟೀಕರಣ ಕೊಡುತ್ತೇನೆ ಎಂದರು.

Advertisement

ಹೇಳೋರು ಹೇಳ್ತಾರೆ ನಾನು ಒಬ್ಬಂಟಿಗ ಅಂತ. ಯಾರೂ ಇಲ್ಲದಿದ್ದರೂ ನಾನು ಒಂಟಿ ಸಲಗನೇ ಎಂದಿರುವ ಅವರು, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರೂ ಕೂಡಾ ಇದನ್ನೇ ಹೇಳಿದ್ದಾರೆ ನಿನ್ನ ಜತೆ ಯಾರೂ ಇಲ್ಲ ಎಂದರೆ ನೀನೊಬ್ಬನೇ ನಡೆ ಎಂದು ಹಾಗಾಗಿ ಅವರ ಮಾತಿನಂತೆಯೇ ನಡೆಯುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next