Advertisement

ಅಪರಾಧ ಮಾಡುವವರೇ ಶಾಸಕರು, ಸಂಸದರು ಆಗ್ತಿದ್ದಾರೆ: ಬಸವರಾಜ ರಾಯರೆಡ್ಡಿ

09:54 AM Feb 21, 2020 | keerthan |

ಕೊಪ್ಪಳ: ಬಿಜೆಪಿ ಇತ್ತೀಚೆಗೆ ನೀತಿ ಬಿಟ್ಟು ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಗುಡುಗಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಗೋಚರ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಸಂವಿಧಾನದ ಪ್ರಕಾರ ದೇಶದ‌ ವಿರುದ್ದ ಹೇಳಿಕೆ ಕೊಟ್ಟರೆ ದೇಶದ್ರೋಹದ ಕೇಸ್ ಹಾಕಬಹುದು. ಆದರೆ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಮಾಡಿದರೆ ದೇಶ ದ್ರೋಹದ ಕೇಸ್ ಹಾಕುತ್ತಿದ್ದಾರೆ ಎಂದರು.

ಸಿರಾಜ್ ಬಿಸರಳ್ಳಿ ಅವರು ಕವಿತೆ ವಾಚನ ಮಾಡಿದ ಕಾರಣಕ್ಕೆ ಆತನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ. ಬಿಎಸ್ ವೈಗೆ ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಕೇಸ್ ವಾಪಾಸ್ ಪಡೆಯಬೇಕು. ಪೊಲೀಸರೂ ವಿಚಾರ ಮಾಡಿ ಪ್ರಕರಣ ದಾಖಲಿಸಬೇಕು.ಇತ್ತೀಚಿನ ರಾಜಕಾರಣದಲ್ಲಿ ಅಪರಾಧ ಮಾಡುವವರೇ ಶಾಸಕರು, ಸಂಸದರು ಆಗ್ತಿದ್ದಾರೆ. ಇದು ಎಲ್ಲ ಪಕ್ಷಕ್ಕೂ ಅನ್ವಯ ಆಗುತ್ತೆ. ಆದರೆ ಬಿಜೆಪಿಯಲ್ಲಿ ಅದು ಹೆಚ್ಚಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next